ಮೊಬೈಲ್​ ನಂಬರ್​​ 6,7,8 ಅಥವಾ 9 ಅಂಕೆಯಿಂದಲೇ ಆರಂಭಗೊಳ್ಳುವ ಹಿಂದಿನ ಸಿಕ್ರೇಟ್​ ಗೊತ್ತೇ..?

Mobile Number starts With 6 7 8 9 here is Intersting Secrete : ನೀವು ಬಳಕೆ ಮಾಡುವ ಮೊಬೈಲ್​ ಸಿಮ್​ಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..? ಸಾಮಾನ್ಯವಾಗಿ ಎಲ್ಲರ ಮೊಬೈಲ್​ ಸಂಖ್ಯೆಯೂ ಆರು, ಏಳು 8 ಅಥವಾ 9 ಅಂಕೆಯಿಂದಲೇ ಆರಂಭವಾಗಿರುತ್ತದೆ.

Mobile Number Secrete  : ಈಗಿನ ಕಾಲದಲ್ಲಿ ಮೊಬೈಲ್​ ಬಳಕೆ ಮಾಡದೇ ಇರುವವರು ಯಾರೂ ಇಲ್ಲ. ಎಂಥವರ ಕೈಯಲ್ಲೂ ಮೊಬೈಲ್​ ಇದ್ದೇ ಇರುತ್ತದೆ. ಕೆಲವರು ಮೊಬೈಲ್​ಗೆ ಯಾವ ರೇಂಜ್​ಗೆ ಅಡಿಕ್ಟ್​ ಆಗಿರುತ್ತಾರೆ ಅಂದ್ರೆ ಅವರಿಗೆ ಟಾಯ್ಲೆಟ್​ ಹೋಗೋಕೂ ಮೊಬೈಲ್​ ಬೇಕು ಎಂಬಂಥಾ ಪರಿಸ್ಥಿತಿ ಇರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈಗ ಮೊಬೈಲ್​ ಬಳಕೆ ಮಾಡುವವರೇ ಆಗಿದ್ದಾರೆ.

ಸೋಶಿಯಲ್​ ಮೀಡಿಯಾದ ಬಳಕೆ ಹೆಚ್ಚಾದಂತೆಲ್ಲ ಮೊಬೈಲ್​ ಬಳಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ ಎಂದು ಹೇಳಬಹುದು. ನೀವು ಎಷ್ಟೇ ಹಣ ಕೊಟ್ಟು ಮೊಬೈಲ್​ ಖರೀದಿ ಮಾಡಿದ್ದರೂ ಸಹ ಸಿಮ್​ ಇಲ್ಲದೇ ನಿಮಗೆ ಏನನ್ನೂ ಬಳಕೆ ಮಾಡಲು ಆಗೋದಿಲ್ಲ. ಹೀಗಾಗಿ ಮೊಬೈಲ್​ಗೆ ಸಿಮ್​ ಅನಿವಾರ್ಯವಾಗಿದೆ.

ನಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಬೆಳೆಸುವಲ್ಲಿ ಮೊಬೈಲ್​ ಫೋನ್​ಗಳು ಪ್ರಮುಖ ಪಾತ್ರ ವಹಿಸುತ್ತವೆ.   ಆದರೆ ನೀವು ಬಳಕೆ ಮಾಡುವ ಮೊಬೈಲ್​ ಸಿಮ್​ಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ..? ಸಾಮಾನ್ಯವಾಗಿ ಎಲ್ಲರ ಮೊಬೈಲ್​ ಸಂಖ್ಯೆಯೂ ಆರು, ಏಳು 8 ಅಥವಾ 9 ಅಂಕೆಯಿಂದಲೇ ಆರಂಭವಾಗಿರುತ್ತದೆ. ಹೀಗೆ ಏಕೆ ಎಂಬ ಚಿಂತೆ ನಿಮಗೆ ಎಂದಾದರೂ ಕಾಡಿದ್ಯಾ..? ಹೌದು ಎಂದಾದಲ್ಲಿ ನೀವು ಈ ಸ್ಟೋರಿಯನ್ನು ಓದಲೇಬೇಕು.

Why Mobile Number starts With 6 7 8 9 here is Intersting Secrete 
Image Credit to Original Source

ವೈಯಕ್ತಿಕ ಬಳಕೆಗಾಗಿ ಬಳಸುವ ಸಿಮ್​ಗಳು ಯಾವುದೇ ಕಂಪನಿಗೆ ಸೇರಿದ್ದರೂ ಸಹ ಅವುಗಳ ನಂಬರ್​ 6,7,8 ಅಥವಾ 9 ರಿಂದಲೇ ಆರಂಭಗೊಳ್ಳುತ್ತದೆ. ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ. ಅದು ಏನೆಂದರೆ 1 ಎನ್ನುವುದು ಒಂದು ವಿಶೇಷ ಸಂಖ್ಯೆಯಾಗಿದೆ. ಈ ನಂಬರ್​ನ್ನು ಪೊಲೀಸ್​, ಅಗ್ನಿಶಾಮಕ ದಳ ಹಾಗೂ ಆಂಬ್ಯೂಲೆನ್ಸ್​ ಸೇವೆ ಸೇರಿದಂತೆ ವಿವಿಧ ತುರ್ತು ಸೇವೆಗಳ ಸಂಖ್ಯೆಯ ಆರಂಭಿಕ ಅಂಕೆಯಾಗಿ ಬಳಕೆ ಮಾಡಲಾಗುತ್ತದೆ.

ಅದೇ ರೀತಿ 2,3,4 ಹಾಗೂ ಐದು ಕೂಡ ಸಹಾಯವಾಣಿ ಸಂಖ್ಯೆಗಳ ಆರಂಭಿಕ ನಂಬರ್​ ಆಗಿ ಬಳಕೆಯಾಗುತ್ತದೆ. ಹೀಗಾಗಿ ಸಾಮಾನ್ಯರಿಗೆ ನೀಡುವ ಮೊಬೈಲ್​ ಸಿಮ್​ಗಳು 1ರಿಂದ ಐದರವರೆಗಿನ ಆರಂಭಿಕ ಸಂಖ್ಯೆಗಳನ್ನು ಹೊಂದಿರುವುದಿಲ್ಲ. 0 ಕೂಡ ಯಾರ ಮೊಬೈಲ್​ ನಂಬರ್​ರ ಆರಂಭಿಕ ಅಂಕೆಯ ಸ್ಥಾನವನ್ನು ಪಡೆಯುವುದಿಲ್ಲ. ಇದಕ್ಕೂ ಕೂಡ ಕಾರಣವಿದೆ.

ಏಕೆಂದರೆ ಸೊನ್ನೆಯನ್ನು ಅನೇಕ ದೂರವಾಣಿ ಸಂಖ್ಯೆಗಳಿಗೆ ಎಸ್​ಟಿಡಿ ಕೋಡ್​ ಆಗಿ ಬಳಕೆ ಮಾಡಲಾಗುತ್ತದೆ. ಭಾರತ ದೇಶದ ಕೋಡ್​ +91 ಆಗಿದ್ದು ಈ ಆರಂಭಿಕ ಸಂಖ್ಯೆಯಿಂದ ಬರುವ ಯಾವುದೇ ಕರೆಯು ಭಾರತದಲ್ಲಿ ಖರೀದಿಸಿದ ಸಿಮ್​ನಿಂದಲೇ ಆಗಿರುತ್ತದೆ ಎಂದು ನೀವು ತಿಳಿಯಬಹುದಾಗಿದೆ.

Why Mobile Number starts With 6 7 8 9 here is Intersting Secrete 
Image Credit to Original Source

ಅಂದ ಹಾಗೆ ಮೊಬೈಲ್​ ಸಿಮ್​ಗಳ ಆರಂಭಿಕ ಸಂಖ್ಯೆ ಆರರ ನಂತರದಿಂದಲೇ ಆರಂಭವಾಗಬೇಕು ಅಂತಾ ಯಾವುದೇ ಕಡ್ಡಾಯ ನಿಯಮಗಳಿಲ್ಲ. ಇಲ್ಲಿಯವರೆಗೂ ಈ ರೀತಿಯ ಒಂದು ಕ್ರಮ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಇದು ಬದಲಾವಣೆ ಕೂಡ ಹೊಂದಬಹುದಾಗಿದೆ. ಹೀಗಾಗಿ ಇದು ಅಧಿಕೃತ ಮಾಹಿತಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸದ್ಯಕ್ಕೆ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಆರರ ನಂತರವೇ ಮೊಬೈಲ್​ ನಂಬರ್​ ಇರೋದಕ್ಕೆ ಈ ಕಾರಣವನ್ನು ನೀಡಬಹುದಾಗಿದೆ.

Why Mobile Number starts With 6 7 8 9 here is Intersting Secrete 

Comments are closed.