ಮಂಗಳವಾರ, ಏಪ್ರಿಲ್ 29, 2025
HometechnologyTwitter : ಡೈರೆಕ್ಟ್‌ ಮೆಸ್ಸೇಜ್‌ ಬಟನ್‌ ಅನ್ನು ತೆಗೆದುಹಾಕಿದ ಟ್ವಿಟರ್‌

Twitter : ಡೈರೆಕ್ಟ್‌ ಮೆಸ್ಸೇಜ್‌ ಬಟನ್‌ ಅನ್ನು ತೆಗೆದುಹಾಕಿದ ಟ್ವಿಟರ್‌

- Advertisement -

ಜನಪ್ರಿಯ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ (Twitter) ಅನೇಕ ಬದಲಾವಣೆಗಳನ್ನು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೆ. ಇದೀಗ ಟ್ವಿಟರ್‌ ಆಂಡ್ರಾಯ್ಡ್‌ ಮತ್ತು iOS ಅಪ್ಲಿಕೇಶನ್‌ಗಳಲ್ಲಿನ ಪ್ರೊಫೈಲ್ ಪುಟದಿಂದ ಬಳಕೆದಾರರು ನೇರವಾಗಿ ಮತ್ತೊಬ್ಬರ ಖಾತೆಗೆ ನೇರ ಸಂದೇಶವನ್ನು ಕಳುಹಿಸುವ ಡೈರೆಕ್ಟ್‌ ಮೆಸ್ಸೇಜ್‌ (DM) ಆಯ್ಕೆಯನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ. ಕೆಲವು ಬಳಕೆದಾರರು ಇದನ್ನು ವರದಿ ಮಾಡಿದಾಗ ಈ ಬದಲಾವಣೆಯನ್ನು ಗಮನಿಸಲಾಗಿದೆ. ಈ ಬದಲಾವಣೆಯನ್ನು ಟ್ವಿಟರ್‌ ಇಂಟರ್ಫೇಸ್‌ ಅನ್ನು ಸರಳಗೊಳಿಸುವ ಮತ್ತು ಅದನ್ನು ಯೂಸರ್‌ ಫ್ರೆಂಡ್ಲಿಯನ್ನಾಗಿಸುವ ಪ್ರಯತ್ನಗಳಲ್ಲಿ ಒಂದು ಎಂದು ಭಾವಿಸಲಾಗುತ್ತಿದೆ.

ಸಾಮಾನ್ಯವಾಗಿ ಡೈರೆಕ್ಟ್‌ ಮೆಸ್ಸೇಜ್‌– ‘DM’ ಬಟನ್ ಫಾಲೋ ಮತ್ತು ನೋಟಿಫಿಕೇಶನ್‌ ಬಟನ್‌ಗಳ ಪಕ್ಕದಲ್ಲಿ ಇರುತ್ತದೆ. ಅಂದರೆ ನ್ಯಾವಿಗೇಶನ್‌ ಬಾರ್‌ನಲ್ಲಿತ್ತು. ಈಗ ಅದು ಕಣ್ಮರೆಯಾಗಿರುವುದರಿಂದ ಅನೇಕ ಬಳಕೆದಾರರಿಗೆ ಗೊಂದಲವನ್ನುಂಟು ಮಾಡಿದೆ. ಆದರೆ 9To5Google ವರದಿಯ ಪ್ರಕಾರ ಈ ಬದಲಾಣೆ ಉದ್ದೇಶಪುರ್ವಕಾಗಿಯೇ ಮಾಡಲಾಗಿದೆಯೇ ಅಥವಾ ಇದು ಬಹುಶಃ ಒಂದು ಸಣ್ಣ ದೋಷವಾಗಿರಬಹುದೇ ಎಂದು ಲೆಕ್ಕಾಚಾರ ಮಾಡುವುದು ಕಷ್ಟ ಎಂದು ವರದಿ ಹೇಳಿದೆ. ಈ ವೈಶಿಷ್ಟ್ಯವು ಇನ್ನೂ ಲಭ್ಯವಿದೆ. ಆದರೆ ಬೇರೆ ವಿಧಾನಗಳ ಮೂಲಕ ಅದನ್ನು ಬಳಸಬಹುದಾಗಿದೆ. ಸದ್ಯ ಬಳಕೆದಾರರು ಮೆಸ್ಸೇಜ್‌ ಟ್ಯಾಬ್‌ನ ಮೂಲಕ ಬಯಸಿದ ಖಾತೆಗೆ ಡೈರೆಕ್ಟ್‌ ಮೆಸ್ಸೇಜ್‌ ಕಳುಹಿಸಬಹುದಾಗಿದೆ.

ಇದಲ್ಲದೇ, ಕಳೆದ ವಾರ ಟ್ವಿಟರ್‌ ಬಾಸ್‌ ಎಲೋನ್‌ ಮಸ್ಕ್‌ ಒಂದು ಘೋಷಣೆ ಮಾಡಿದ್ದರು. ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರ್ಮ್‌ ಆದ ಟ್ವಿಟರ್‌ನಲ್ಲಿ ಮುಂಬರುವ ವಾರಗಳಲ್ಲಿ ಹೆಚ್ಚಿನ ಬೆಲೆಯ ಚಂದಾದಾರಿಕೆಯಲ್ಲಿ ಜಾಹಿರಾತು ರಹಿತ ಬ್ಲಾಗಿಂಗ್‌ ಪಡೆಯಬಹುದು ಎಂದು ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಟ್ವಿಟರ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಈ ಪ್ಲಾಟಫಾರ್ಮ್‌ ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ. ಅಸ್ತಿತ್ವದಲ್ಲಿರುವ ವೈಶಿಷ್ಟ್ಯಗಳನ್ನು ಸುಧಾರಿಸುವ ಮೂಲಕ ಒಟ್ಟಾರೆ ಬಳಕೆದಾರರ ಅನುಭವವನ್ನು ಸುಧಾರಿಸುವಲ್ಲಿಯೂ ಕಂಪನಿಯು ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ : Royal Enfield Super Meteor 650 : ಬೈಕ್‌ ಪ್ರಿಯರ ರಾಯಲ್‌ ಎನ್‌ಫೀಲ್ಡ್‌ ಸೂಪರ್‌ ಮೀಟಿಯರ್‌ 650 ಯ ವೈಶಿಷ್ಟ್ಯಗಳು

ಇದನ್ನೂ ಓದಿ : Chat GPT : ಏನಿದು ಚಾಟ್‌ ಜಿಪಿಟಿ : ಹೊಸ AI ಚಾಟ್‌ಬಾಟ್‌ ಶಿಕ್ಷಣದ ಮೇಲೆ ಪ್ರಭಾವ ಬೀರಲಿದೆಯೇ?

(Why Twitter removed Direct Message button on Android and iOS)

RELATED ARTICLES

Most Popular