Ranji Trophy QF : ಉತ್ತರಾಖಂಡ್ ವಿರುದ್ಧ ಗೆದ್ದರೆ ಕರ್ನಾಟಕಕ್ಕೆ ಮನೆಯಂಗಳದಲ್ಲೇ ಸೆಮಿಫೈನಲ್, ಇಲ್ಲಿದೆ ಮ್ಯಾಚ್ ಡೀಟೇಲ್ಸ್, ಲೈವ್ ಟೆಲಿಕಾಸ್ಟ್ ಮಾಹಿತಿ

ಬೆಂಗಳೂರು: 8 ಬಾರಿಯ ಚಾಂಪಿಯನ್ಸ್ ಕರ್ನಾಟಕದ ತಂಡ ನಾಳೆ (ಮಂಗಳವಾರ) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ (Ranji Trophy Quarter final) ಪಂದ್ಯದಲ್ಲಿ ಉತ್ತರಾಖಂಡ್ ತಂಡವನ್ನು ಎದುರಿಸಲಿದೆ.

ಕರ್ನಾಟಕ-ಉತ್ತರಾಖಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್’ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಅಲ್ಲದೆ ಡಿಸ್ನಿ+ಹಾಟ್ ಸ್ಟಾರ್’ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.ಉತ್ತರಾಖಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಗೆದ್ದರೆ ಸೆಮಿಫೈನಲ್ ಪಂದ್ಯವನ್ನು ಕರ್ನಾಟಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿದೆ. ಫೆಬ್ರವರಿ 8ರಂದು ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ಅಥವಾ ಪಂಜಾಬ್ ಎದುರಾಳಿಯಾಗುವ ಸಾಧ್ಯತೆಯಿದೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy 2022-23) ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಎಲೈಟ್ ‘ಸಿ’ ಲೀಗ್ ಹಂತದಲ್ಲಿ 35 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. ಆಡಿದ 7 ಲೀಗ್ ಪಂದ್ಯಗಳಲ್ಲಿ 4 ಗೆಲುವು ಪಡೆದಿದ್ದ ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಸಂಪಾದಿಸಿತ್ತು. ಮತ್ತೊಂದೆಡೆ ಉತ್ತರಾಖಂಡ್ 29 ಅಂಕಗಳೊಂದಿಗೆ ಎಲೈಟ್ ‘ಎ’ ಹಂತದಲ್ಲಿ 2ನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಎ ಗುಂಪಿನಿಂದ ಬಂಗಾಳ ಮತ್ತು ಉತ್ತರಾಖಂಡ್, ಬಿ ಗುಂಪಿನಿಂದ ಸೌರಾಷ್ಟ್ರ ಮತ್ತು ಆಂಧ್ರ, ಸಿ ಗುಂಪಿನಿಂದ ಕರ್ನಾಟಕ ಮತ್ತು ಜಾರ್ಖಂಡ್ ಹಾಗೂ ಡಿ ಗುಂಪಿನಿಂದ ಮಧ್ಯಪ್ರದೇಶ ಮತ್ತು ಪಂಜಾಬ್ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಕ್ವಾರ್ಟರ್ ಫೈನಲ್ ಪ್ರವೇಶಿಸಿದ 8 ತಂಡಗಳ ಪೈಕಿ ಲೀಗ್ ಹಂತದಲ್ಲಿ ಕರ್ನಾಟಕ ತಂಡ ಅತೀ ಹೆಚ್ಚು ಅಂಕ (35 ಅಂಕ) ಸಂಪಾದಿಸಿದೆ.

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ಸ್ :

  1. ಬಂಗಾಳ Vs ಜಾರ್ಖಂಡ್ (ಈಡನ್ ಗಾರ್ಡನ್ಸ್, ಕೋಲ್ಕತಾ)
  2. ಕರ್ನಾಟಕ Vs ಉತ್ತರಾಖಂಡ್ (ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
  3. ಪಂಜಾಬ್ Vs ಸೌರಾಷ್ಟ್ರ (ರಾಜ್’ಕೋಟ್)
  4. ಮಧ್ಯಪ್ರದೇಶ Vs ಆಂಧ್ರ (ಇಂದೋರ್)

ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡ :
ಮಯಾಂಕ್ ಅಗರ್ವಾಲ್ (ನಾಯಕ), ಆರ್.ಸಮರ್ಥ್ (ಉಪನಾಯಕ), ದೇವದತ್ತ್ ಪಡಿಕ್ಕಲ್, 4.ನಿಕಿನ್ ಜೋಸ್, 5.ಮನೀಶ್ ಪಾಂಡೆ, 6.ಬಿ.ಆರ್ ಶರತ್, 7.ಶ್ರೇಯಸ್ ಗೋಪಾಲ್, 8.ಕೃಷ್ಣಪ್ಪ ಗೌತಮ್, 9.ವೈಶಾಖ್ ವಿಜಯ್ ಕುಮಾರ್, 10.ವಿದ್ವತ್ ಕಾವೇರಪ್ಪ, 11.ವಿ.ಕೌಶಿಕ್, 12.ಕೆ.ವಿ ಸಿದ್ಧಾರ್ಥ್, 13. ವಿಶಾಲ್ ಓನಟ್, 14.ಶುಭಾಂಗ್ ಹೆಗ್ಡೆ, 15.ಶರತ್ ಶ್ರೀನಿವಾಸ್, 16.ರೋನಿತ್ ಮೋರೆ.

ಇದನ್ನೂ ಓದಿ : ಜ್ಯೂನಿಯರ್ ಮಹಿಳಾ ವಿಶ್ವಕಪ್ ಗೆದ್ದ ಭಾರತೀಯ ವನಿತೆಯರಿಗೆ ಬಿಸಿಸಿಐನಿಂದ 5 ಕೋಟಿ ರೂ. ಬಂಪರ್ ಗಿಫ್ಟ್

ಇದನ್ನೂ ಓದಿ : ಟೀಮ್ ಇಂಡಿಯಾಗೆ ಟಾಪ್-3 ಫೋಬಿಯಾ : ಕಾಡುತ್ತಿದೆ ತ್ರಿಮೂರ್ತಿಗಳ ಅನುಪಸ್ಥಿತಿ

ಇದನ್ನೂ ಓದಿ : India Vs Australia test series : ಭಾರತವನ್ನು ಮಣಿಸಲು ಆಸೀಸ್ ಮಾಸ್ಟರ್ ಪ್ಲಾನ್; ಆಸ್ಟ್ರೇಲಿಯಾದಲ್ಲೇ ಸ್ಪಿನ್ ಪಿಚ್ ನಿರ್ಮಿಸಿ ಕಾಂಗರೂಗಳು

ಕರ್ನಾಟಕದ ಕ್ವಾರ್ಟರ್ ಫೈನಲ್ ಹಾದಿ :
ಮ್ಯಾಚ್-1: ಸರ್ವಿಸಸ್ ವಿರುದ್ಧ ಡ್ರಾ, 3 ಪಾಯಿಂಟ್ಸ್
ಮ್ಯಾಚ್-2: ಪುಚೇರಿ ವಿರುದ್ಧ ಇನ್ನಿಂಗ್ಸ್, 7 ರನ್ ಗೆಲುವು; 7 ಪಾಯಿಂಟ್ಸ್
ಮ್ಯಾಚ್-3: ಗೋವಾ ವಿರುದ್ಧ ಡ್ರಾ, 3 ಪಾಯಿಂಟ್ಸ್
ಮ್ಯಾಚ್-4: ಛತ್ತೀಸ್’ಗಢ ವಿರುದ್ಧ 7 ವಿಕೆಟ್ ಗೆಲುವು, 6 ಪಾಯಿಂಟ್ಸ್
ಮ್ಯಾಚ್-5: ರಾಜಸ್ಥಾನ ವಿರುದ್ಧ 10 ವಿಕೆಟ್ ಗೆಲುವು, 7 ಪಾಯಿಂಟ್ಸ್
ಮ್ಯಾಚ್-6: ಕೇರಳ ವಿರುದ್ಧ ಡ್ರಾ, 3 ಪಾಯಿಂಟ್ಸ್
ಮ್ಯಾಚ್-7: ಜಾರ್ಖಂಡ್ ವಿರುದ್ಧ 9 ವಿಕೆಟ್ ಗೆಲುವು, 6 ಪಾಯಿಂಟ್ಸ್

Ranji Trophy Quarter final : If they win against Uttarakhand, Karnataka will be in semi-final at home, here is the match details, live telecast information

Comments are closed.