Xiaomi India : ಎಕ್ಸೋಮಿ ಮೊಬೈಲ್ ಕಂಪನಿಗೆ ಶಾಕ್: 5551.21 ಕೋಟಿ ಆಸ್ತಿ ಜಪ್ತಿಗೆ ಆದೇಶ

ನವದೆಹಲಿ : Xiaomi India : ಭಾರತದಿಂದ ಅನಧಿಕೃತವಾಗಿ ವಿದೇಶಿ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಕಂಪನಿ Xiaomi ಟೆಕ್ನಾಲಜಿಸ್ ಪ್ರವೈಟ್ ಲಿಮಿಟೆಡ್ ನ 5551.21 ಕೋಟಿ ಜಪ್ತಿಗೆ ಇಡಿ ಅದೇಶಿಸಿದೆ. ಆಸ್ತಿ ಪಾಸ್ತಿಯನ್ನು ಜಪ್ತಿಗೊಳಿಸುವಂತೆ ಸೆಕ್ಷನ್ 37 a ಅಡಿಯಲ್ಲಿ ನೇಮಕಗೊಂಡಿರೋ ಸಕ್ಷಮ ಪ್ರಾಧಿಕಾರಕ್ಕೆ ಇಡಿ ಆದೇಶಿಸಿದೆ. ಫೆಮಾ ಆಕ್ಟ್ ಅಡಿಯಲ್ಲಿ ಆಸ್ತಿ ಜಪ್ತಿಗೆ ಇಡಿ ಆದೇಶಿಸಿದ್ದು, ಇದು ಭಾರತದಲ್ಲೇ ಮೊದಲ ದಾಖಲೆ‌ಮೊತ್ತದ ಆಸ್ತಿ ಜಪ್ತಿ ಎಂದು ಹೇಳಲಾಗುತ್ತಿದೆ.

ಚೀನಾ ಮೂಲದ ಪ್ರಸಿದ್ಧ ಮೊಬೈಲ್ ಕಂಪನಿ ಎಕ್ಸೋಮಿ, ಭಾರತದಿಂದ ಅನಧಿಕೃತವಾಗಿ ವಿದೇಶಿ ಹಣ ವರ್ಗಾವಣೆಯಲ್ಲಿ ತೊಡಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಿಂದ ಎಕ್ಸೋಮಿ ಕಂಪನಿ ವಿರುದ್ಧ ತನಿಖೆ ಆರಂಭಿಸಲಾಗಿತ್ತು. ಬಳಿಕ ಅಕ್ರಮಗಳು ಸಾಬೀತಾದ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಎಕ್ಸೋಮಿ ಕಂಪನಿಯ ವಿವಿಧ ಬ್ರ್ಯಾಂಚ್ ಗಳ ಮೇಲೆ ಇಡಿ ದಾಳಿ ನಡೆಸಿತ್ತು. ಅಲ್ಲದೇ ಕಂಪನಿಗೆ ಸೇರಿದ ಒಟ್ಟು 5551.21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

2014 ರಲ್ಲಿ ಭಾರತದಲ್ಲಿ ಆರಂಭವಾದ ಈ ಕಂಪನಿ 2015 ರಿಂದಲೂ ವಿದೇಶಕ್ಕೆ ರಾಯಲ್ಟಿ ರೂಪದಲ್ಲಿ ಹಣ ವರ್ಗಾವಣೆ ಮಾಡುತ್ತ ಬಂದಿತ್ತು. ಮುಖ್ಯ ಸಂಸ್ಥೆಯ ಆದೇಶದ ಮೇರೆಗೆ ಮೂರು ವಿದೇಶಿ ಮೂಲದ ಘಟಕಗಳಿಗೆ ಹಣವನ್ನು ಕಂಪನಿ ವರ್ಗಾವಣೆ ಮಾಡಿತ್ತು ಎನ್ನಲಾಗಿದೆ. ತನಿಖೆ ವೇಳೆ ಕಂಪನಿಗೆ ಸಂಬಂಧವೇ ಇಲ್ಲದ ಎರಡು ಯುಸ ಮೂಲದ ಘಟಕಗಳಿಗೂ ಹಣ ವರ್ಗಾವಣೆಯಾಗಿರೋದು ಬೆಳಕಿಗೆ ಬಂದಿತ್ತು.

ಭಾರತದಲ್ಲಿ ಮೊಬೈಲ್ ಪೋನ್ ಗಳ ವ್ಯವಹಾರ ಮತ್ತು ವಿತರಣೆ ಮಾಡ್ತಿದ್ದ ಸಂಸ್ಥೆ ಮೂರು ವಿದೇಶಿ ಘಟಕಗಳಿಗೆ ಯಾವುದೇ ಸೇವೆ ಪಡೆಯದೇ ಹಣ ವರ್ಗಾವಣೆ ಮಾಡಿರೋ ಹಿನ್ನೆಲೆಯಲ್ಲಿ ಫೆಮಾ ಆಕ್ಟ್ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಈಗ ಆಸ್ತಿ ಜಪ್ತಿ ಸ್ಥಿತಿಗೆ ಬಂದು ತಲುಪಿದೆ.

ಇದುವರೆಗಿನ ಮಾಹಿತಿ ಪ್ರಕಾರ Xiaomi ಕಂಪನಿ ಭಾರತದಲ್ಲಿ ಮುಂಚೂಣಿಯಲ್ಲಿರುವ ಸ್ಮಾರ್ಟ್ ಫೋನ್ ಕಂಪನಿಯಾಗಿದ್ದು, ದೇಶದಲ್ಲಿ ವಾರ್ಷಿಕ 34 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ ಎನ್ನಲಾಗಿದೆ.ಕಂಪನಿಯು ತನಗೆ ಸಾಫ್ಟವೇರ್ ಸೇರಿದಂತೆ ಯಾವುದೇ ರೀತಿಯಲ್ಲೂ ನೆರವು ನೀಡದ ಸಂಸ್ಥೆಗಳಿಗೆ ಹಣ ವರ್ಗಾವಣೆ ಮಾಡಿ ಸಂಕಷ್ಟಕ್ಕೆ ಸಿಲುಕಿತ್ತು.

ಇದನ್ನೂ ಓದಿ : Instagram : ಹೊಸ ‘ನೋಟ್ಸ್‌’ ವೈಶಿಷ್ಟ್ಯ ಪರಿಚಯಿಸಿದ ಇನ್‌ಸ್ಟಾಗ್ರಾಮ್‌; ಬಳಸುವುದು ಹೇಗೆ ಅಂತೀರಾ

ಇದನ್ನೂ ಓದಿ : LPG Subsidy : ಎಲ್‌ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ

Xiaomi India Case ED Seizure Order 5551 Crore FEMA Authority Confirms

Comments are closed.