5G Services : ಭಾರತದಲ್ಲಿ ಇಂದಿನಿಂದ 5G ಕ್ರಾಂತಿ ಶುರು

ನವದೆಹಲಿ : 5G Services ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಗೆ ಸಜ್ಜಾಗಿರೋ ಭಾರತದಲ್ಲಿ ಇಂದಿನಿಂದ 5ಜಿ ಸೇವೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ 5G ಸೇವೆಯ ಆರಂಭಕ್ಕೆ ಚಾಲನೆ ನೀಡಲಿದ್ದಾರೆ. ಆರಂಭದಲ್ಲಿ ಆಯ್ದ ಕೆಲ ಮೆಟ್ರೋ ನಗರಗಳಲ್ಲಿ ಮಾತ್ರ 5G ಸೇವೆ ಸಿಗಲಿದೆ.

ನವದೆಹಲಿಯಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್  ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಮೋದಿ 5G ಸೇವೆಯನ್ನ ಪ್ರಾರಂಭಿಸಲಿದ್ದಾರೆ. ಮೂಲಗಳ ಪ್ರಕಾರ ದೇಶದ 13 ನಗರಗಳಲ್ಲಿ  ಅಹಮದಾಬಾದ್,  ಬೆಂಗಳೂರು, ಚಂಡೀಗಢ, ಚೆನ್ನೈ,
ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‍ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದ 5ಜಿ ಸೇವೆ ಆರಂಭವಾಗಲಿದೆ. ಈ ನಗರಗಳಲ್ಲಿ ಆಯ್ದ ಕೆಲ ಪ್ರದೇಶಗಳಲ್ಲಿ ಜನರಿಗೆ 5ಜಿ ಸೇವೆ ದೊರಕುವ ಸಾಧ್ಯತೆ ಇದೆ.

ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ , ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಇದರಲ್ಲಿ 5ಜಿ ಲಾಂಚ್ ಆಗಲಿದೆ. 5G ಸೇವೆಯಿಂದಾಗಿ ಹೊಸ ಆರ್ಥಿಕ ಉತ್ತೇಜನಕ್ಕೆ ದಾರಿ ಮಾಡಿಕೊಡಲಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ವ್ಯಾಪಾರ ಉದ್ಯಮಗಳಿಂದ ಆವಿಷ್ಕಾರಗಳನ್ನು ಉತ್ತೇಜಿಸುತ್ತದೆ ಮತ್ತು ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯನ್ನ ಮತ್ತಷ್ಟು ಶಕ್ತಿಶಾಲಿಯಾಗಲಿದೆ ಅಂತಾ ಹೇಳಲಾಗ್ತಿದೆ.

5G ಸೇವೆ ಏನು ಎತ್ತ : ದೇಶದ ಜನರು 5G ಸೇವೆಯನ್ನು ಬಳಸಲು ಸಿಮ್ ಕಾರ್ಡ್ ಬದಲಿಸಬೇಕಾಗಿಲ್ಲ. ಪ್ರಸ್ತುತ 4G ಸಿಮ್‌ನೊಂದಿಗೆ 5G ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ನಿಮ್ಮ ಸ್ಮಾರ್ಟ್‌ಪೋನ್ 5G ಸಫೊರ್ಟ್ ಅನ್ನು ಹೊಂದಿದ್ದರೆ, ನಿಮ್ಮ 4G ಸಿಮ್ ಮೂಲಕವೇ 5G ಡೇಟಾ ಸ್ಪೀಡ್ ದೊರೆಯಲಿದೆ. ಆದರೆ, ನೀವು 5G ಸಫೊರ್ಟ್ ಮಾಡುವ ಸ್ಮಾರ್ಟ್‌ಪೋನ್ ಹೊಂದಿರಲೇಬೇಕು. ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳು ದೇಶದಲ್ಲಿ ತನ್ನ 5G ಸೇವೆಗಳ ಪ್ರಯೋಗಗಳಲ್ಲಿ, 4G ನೆಟ್‌ವರ್ಕ್ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ 5g ವೇಗವನ್ನು ಸಾಧಿಸುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ 5G ಸೇವೆಯಲ್ಲಿ ಅತ್ಯಂತ ವೇಗವಾಗಿ ಡೌನ್ ಲೋಡ್ ಮತ್ತು ಅಪಲೋಡ್ ಮಾಡಬಹುದಾಗಿದೆ.

ಇದನ್ನೂ ಓದಿ : Xiaomi India : ಎಕ್ಸೋಮಿ ಮೊಬೈಲ್ ಕಂಪನಿಗೆ ಶಾಕ್: 5551.21 ಕೋಟಿ ಆಸ್ತಿ ಜಪ್ತಿಗೆ ಆದೇಶ

5G Services PM Modi To Launch 5G Services At A Telecom Event Today

Comments are closed.