Xiaomi Pad 5 Pro : ಆಗಸ್ಟ್ 11 ಕ್ಕೆ ಬಿಡುಗಡೆಯಾಗಲಿರುವ ಶಿಯೋಮಿ ಪ್ಯಾಡ್‌ 5 ಪ್ರೋ : ಟ್ರಿಪಲ್‌ ಕ್ಯಾಮೆರಾ ಹೊಂದಿರುವ ಮೊದಲ ಟ್ಯಾಬ್‌

ಶಿಯೋಮಿ (Xiaomi) ತನ್ನ ಇತ್ತೀಚಿನ ಟ್ಯಾಬ್ಲೆಟ್ ಆದ ಶಿಯೋಮಿ ಪ್ಯಾಡ್‌ 5 ಪ್ರೋ (Xiaomi Pad 5 Pro) ಅನ್ನು ಆಗಸ್ಟ್ 11 ರಂದು ಚೀನಾದ ತನ್ನ ಹೋಮ್ ಮಾರ್ಕೆಟ್‌ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು Xiaomi ಪ್ಯಾಡ್ 5 ನಂತರ ಬಂದ ಆವೃತ್ತಿಯಾಗಿದೆ. ಅನೇಕ ವಿಭಾಗಗಳಲ್ಲಿ ನವೀಕರಣಗೊಂಡು ಆಗಮಿಸಲಿದೆ. ಕಳೆದ ವರ್ಷ ಮತ್ತು ಈ ವರ್ಷದ ಆರಂಭದಲ್ಲಿ ಇದು ಭಾರತದಲ್ಲಿ ಬಿಡುಗಡೆಯಾಗಿತ್ತು.

Xiaomi Pad 5 Pro ಈಗಿರುವ ಆವೃತ್ತಿಗಿಂತ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಹಿಂದಿನ ಪ್ಯಾಡ್ 5 ಪ್ರೊ ಟ್ಯಾಬ್ಲೆಟ್ 11-ಇಂಚಿನ ಪರದೆ ಮತ್ತು 2K ರೆಸಲ್ಯೂಶನ್‌ನೊಂದಿಗೆ ದೊಡ್ಡ 12.4-ಇಂಚಿನ ಡಿಸ್ಪ್ಲೇಯನ್ನು ಪಡೆದುಕೊಂಡಿದೆ. ಇದು ಚೀನಾ ಮೂಲದ ಬ್ರಾಂಡ್‌ನಿಂದ ಇಲ್ಲಿಯವರೆಗಿನ ಅತಿದೊಡ್ಡ ಟ್ಯಾಬ್ಲೆಟ್ ಆಗಿರುತ್ತದೆ. ಈ ಟ್ಯಾಬ್‌ನಲ್ಲಿ ಎಲ್ಲಾ ಬದಿಗಳಲ್ಲಿನ ಬೆಜೆಲ್‌ಗಳು ಅದರ ಪೂರ್ವವರ್ತಿಗಳಂತೆ ಕಡಿಮೆ ಇರುತ್ತದೆ.

ಶಿಯೋಮಿ ಪ್ಯಾಡ್‌ 5 Pro ತನ್ನ ಮೊದಲ ಆವೃತ್ತಿಯಂತೆಯೇ ಸ್ನಾಪ್‌ಡ್ರಾಗನ್ 870 SoC ಚಿಪ್‌ಸೆಟ್‌ ಅನ್ನೇ ಬಳಸುತ್ತಿದೆ. ದೊಡ್ಡದಾದ ಹೊಸ ಪ್ಯಾಡ್ 5 ಪ್ರೊ ಮಾದರಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ನಿಂದ ಶಕ್ತಿಯನ್ನು ಪಡೆದುಕೊಳ್ಳಲಿದೆ. ಇತ್ತೀಚಿನ Geekbench ಪಟ್ಟಿಯ ಪ್ರಕಾರ, ಹೊಸ Xiaomi ಟ್ಯಾಬ್ಲೆಟ್ 8GB RAM ನೊಂದಿಗೆ ಬರಲಿದೆ. ಮತ್ತು MIUI 13 ಅನ್ನು Android 12 ನೊಂದಿಗೆ ಬೂಟ್ ಮಾಡಲಿದೆ. ಇದು ಸಿಂಗಲ್-ಕೋರ್ ಗೀಕ್‌ಬೆಂಚ್ ಸ್ಕೋರ್ 886 ಮತ್ತು ಮಲ್ಟಿ-ಕೋರ್ ಸ್ಕೋರ್ 3,117 ಅನ್ನು ಹೊಂದಿರುತ್ತದೆ.

ಪ್ಯಾಡ್ 5 ಪ್ರೊ ಟ್ರಿಪಲ್ ಕ್ಯಾಮೆರಾ ಹೊಂದಿರುವ ಈ ಬ್ರ್ಯಾಂಡ್‌ನ ಮೊದಲ ಟ್ಯಾಬ್ ಆಗಿರುತ್ತದೆ. ಶಿಯೋಮಿ ಪ್ಯಾಡ್‌ 5 Pro ಹಿಂಭಾಗದಲ್ಲಿ ಟ್ರಿಪಲ್ ಪ್ರಾಥಮಿಕ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿದೆ. ವರದಿಗಳ ಪ್ರಕಾರ ಇದರ 50MP ಪ್ರಾಥಮಿಕ ಸಂವೇದಕವಿರುತ್ತದೆ. ಸದ್ಯಕ್ಕೆ ಇನ್ನೆರಡು ಲೆನ್ಸ್‌ಗಳ ಬಗ್ಗೆ ಯಾವುದೇ ಮಾಹಿತಿಗಳು ತಿಳಿದುಬಂದಿಲ್ಲ. ಹೊಸ ಪ್ಯಾಡ್ 5 ಪ್ರೊ ಮಾದರಿಯು ಅದರ 11-ಇಂಚಿನ ದೊಡ್ಡ ಬ್ಯಾಟರಿಯಿಂದ ಪವರ್‌ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

Xiaomi ಪ್ಯಾಡ್ 5 ಪ್ರೊ ಪ್ರೀಮಿಯಂ ಟ್ಯಾಬ್ಲೆಟ್, ಪ್ಯಾಡ್ 5 ಪ್ರೊ ಐಪ್ಯಾಡ್ ಪ್ರೊ ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 8 ಅಲ್ಟ್ರಾ ಗಳಿಗೆ ಪೈಪೋಟಿ ನೀಡಬಹದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲೂ ಸಹ ಇದು Apple iPad Pro 12.9-ಇಂಚಿನ ರೂಪಾಂತರ ಮತ್ತು Samsung Galaxy Tab S8 ಅಲ್ಟ್ರಾದಂತಹವುಗಳಿಗೆ ಪ್ರತಿಸ್ಪರ್ಧೆ ನೀರೀಕ್ಷಿಸಬಹುದಾಗಿದೆ. ಪ್ಯಾಡ್ 5 ಪ್ರೊ ನ ಬೆಲೆಯು ಸದ್ಯಕ್ಕೆ ಲಭ್ಯವಿಲ್ಲ. ಆದರೆ ನಮ್ಮ ದೇಶದಲ್ಲಿ Xiaomi Pad 5 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 6GB RAM ಮತ್ತು 128GB ಸ್ಥಳೀಯ ಸಂಗ್ರಹಣೆಯ ಮೂಲ ಮಾದರಿಗೆ 26,999 ರೂ. ಆಗಿದೆ.

ಇದನ್ನೂ ಓದಿ : Moto G62 : ಆಗಸ್ಟ್‌ 11 ಕ್ಕೆ ಬಿಡುಗಡೆಯಾಗಲಿದೆ ಅಗ್ಗದ 5ಜಿ ಮೋಟೋ G62 ಸ್ಮಾರ್ಟ್‌ಫೋನ್‌

ಇದನ್ನೂ ಓದಿ : Sukanya Samriddhi Yojana : ಸುಕನ್ಯಾ ಸಮೃದ್ಧಿ ಯೋಜನೆ: ಸಣ್ಣ ಉಳಿತಾಯ ಮಾಡಿ, ಹೆಚ್ಚಿನ ಲಾಭ ಗಳಿಸಿ

ಇದನ್ನೂ ಓದಿ : BSF Recruitment 2022 : ಗಡಿ ಭದ್ರತಾ ಪಡೆಯಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

(Xiaomi Pad 5 Pro will launch on august 11, is a triple camera its new feature)

Comments are closed.