Hardik Pandya Natasa Stankovic : ಪತ್ನಿಗೆ ಸಿಹಿ ಮತ್ತು ನೀಡಿದ ಹಾರ್ದಿಕ್ ಪಾಂಡ್ಯ,‌ ಹಾಟ್ ಫೋಟೋ ಶೇರ್ ಮಾಡಿದ್ರು ಪಾಂಡ್ಯ ಪತ್ನಿ

ಬೆಂಗಳೂರು: (Hardik Pandya Natasa Stankovic) ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಕ್ರಿಕೆಟ್’ನಿಂದ ವಿರಾಮ ಸಿಕ್ಕಿದ್ದು, ಬಿಡುವಿನ ಸಮಯವನ್ನು ಪತ್ನಿ ಹಾಗೂ ಪುತ್ರನೊಂದಿಗೆ ಕಳೆಯುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಫ್ಯಾಮಿಲಿ ಕೆರಿಬಿಯನ್ ನಾಡಿನಲ್ಲಿ ಗ್ರೀಸ್ ಪ್ರವಾಸಕ್ಕೆ ತೆರಳಿದೆ. ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಪುತ್ರ ಅಗಸ್ತ್ಯ ಪಾಂಡ್ಯ ಜೊತೆ ಗ್ರೀಸ್ ಪ್ರವಾಸಕ್ಕೆ ತೆರಳಿರುವ ಪಾಂಡ್ಯ, ಕ್ರಿಕೆಟ್’ನಿಂದ ಸಿಕ್ಕಿರುವ ಬಿಡುವಿನ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಿದ್ದಾರೆ.

ಗ್ರೀಸ್’ನ ಸ್ಯಾಂಟೋರಿನಿಯಲ್ಲಿರುವ ವಿಶ್ವಪ್ರಸಿದ್ಧ ನಿಕ್ಕಿ ಬೀಚ್’ನಲ್ಲಿ ಪತ್ನಿ ನತಾಶಾ ಕೆನ್ನೆಗೆ ಹಾರ್ದಿಕ್ ಪಾಂಡ್ಯ ಸಿಹಿಮುತ್ತೊಂದನ್ನು ನೀಡಿದ್ದಾರೆ. ಪಾಂಡ್ಯ ಮುತ್ತಿಕ್ಕುತ್ತಿರುವ ಚಿತ್ರವನ್ನು ನತಾಶಾ ಸ್ಟಾಂಕೋವಿಕ್ ತಮ್ಮ ಇನ್’ಸ್ಟಾಗ್ರಾಂ ಸ್ಟೇಟಸ್’ನಲ್ಲಿ ಪ್ರಕಟಿಸಿದ್ದು, ಆ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://www.instagram.com/reel/CgpBQWWqfi1/?igshid=YmMyMTA2M2Y=

28 ವರ್ಷದ ಹಾರ್ದಿಕ್ ಪಾಂಡ್ಯ ಈಗ ತಮ್ಮ ಕ್ರಿಕೆಟ್ ವೃತ್ತಿಬದುಕಿನ ಉತ್ತುಂಗದಲ್ಲಿದ್ದಾರೆ. ಐಪಿಎಲ್-2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಪಾಂಡ್ಯ, ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಪಾಂಡ್ಯ ತಮ್ಮ ಹಳೇ ಲಯವನ್ನು ಕಂಡುಕೊಳ್ಳುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಭದ್ರ ಪಡಿಸಿಕೊಂಡಿದ್ದಾರೆ.

https://www.instagram.com/p/Cg9ZOUBMVXB/?igshid=YmMyMTA2M2Y=

ಐಪಿಎಲ್ ಯಶಸ್ಸಿನ ನಂತರ ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶವೂ ಸಿಕ್ಕಿದೆ. ಐರ್ಲೆಂಡ್ ಪ್ರವಾಸದ 2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದ ಪಾಂಡ್ಯ, ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದರು. ಅಷ್ಟೇ ಅಲ್ಲದೆ, ಆಗಸ್ಟ್ 7ರಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದರು. ಪಾಂಡ್ಯ ಸಾರಥ್ಯದಲ್ಲಿ ಭಾರತ, ವಿಂಡೀಸ್ ವಿರುದ್ಧ 88 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು.

ಏಷ್ಯಾ ಕಪ್ ಟಿ20 ಟೂರ್ನಿಯೊಂದಿಗೆ ಹಾರ್ದಿಕ್ ಪಾಂಡ್ಯ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಂದು ಯುಎಇನಲ್ಲಿ ಆರಂಭವಾಗಲಿದ್ದು, ಆಗಸ್ಟ್ 28ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಇದನ್ನೂ ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

ಇದನ್ನೂ ಓದಿ : Asia Cup 2022 : ಭಾರತದ ಟಾಪ್-3 ದಾಂಡಿಗರ “ದುಬೈ ಟ್ರ್ಯಾಕ್ ರೆಕಾರ್ಡ್” ಹೇಗಿದೆ ಗೊತ್ತಾ?

Hardik Pandya gave Kiss to his wife, Special Photos Share Natasa Stankovic

Comments are closed.