Monsoon Tourism:ಭಾರತದಲ್ಲಿ ಮಾನ್ಸೂನ್‌ ಮ್ಯಾಜಿಕ್ ಅನುಭವಿಸಲು ಈ 5 ತಾಣಗಳನ್ನು ಮಿಸ್ ಮಾಡದೇ ಭೇಟಿ ನೀಡಿ

ಮಾನ್ಸೂನ್ ಮಳೆಯು ಭಾರತದಲ್ಲಿ ಈಗಾಗಲೇ ಶುರುವಾಗಿದೆ. ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿಯ ಮೇಲೆ ತಂಪಾದ ಮಳೆ ನೀರು ಬಿದ್ದಿದೆ. ನದಿಗಳು ಮತ್ತು ಸರೋವರಗಳು ತುಂಬಿ ಹರಿಯುತ್ತಿವೆ. ಈಗ ಹಚ್ಚ ಹಸಿರಿನ ಎಲೆಗಳು ಮತ್ತು ಸುಂದರವಾದ ಕಡಲತೀರಗಳನ್ನು ವೀಕ್ಷಿಸಲು ಅತ್ಯುತ್ತಮ ಸಮಯ. ನೀವು ಪ್ರಕೃತಿ ಪ್ರಿಯರಾಗಿದ್ದು ಮಳೆಗಾಲದಲ್ಲಿ ಪ್ರವಾಸ ಹೋಗಲು ಬಯಸಿದರೆ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ(Monsoon Tourism).

ಭಾರತದಲ್ಲಿ ಈ ಮಾನ್ಸೂನ್ ನಲ್ಲಿ ನೀವು ಭೇಟಿ ನೀಡಬೇಕಾದ ಐದು ಸ್ಥಳಗಳ ಪಟ್ಟಿಯು ಈ ಕೆಳಗಿನಂತಿವೆ:

ಮೇಘಾಲಯ:
ಪೂರ್ವದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಶಿಲ್ಲಾಂಗ್ ಮಾನ್ಸೂನ್‌ನಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಹಚ್ಚ ಹಸಿರಿನ ಖಾಸಿ ಮತ್ತು ಜಯಂತಿ ಬೆಟ್ಟಗಳಿಂದ ಸುತ್ತುವರೆದಿರುವ ರಾಜ್ಯವು ಹಲವಾರು ಜಲಪಾತಗಳು ಮತ್ತು ಕಣಿವೆಯ ಅದ್ಭುತ ನೋಟಗಳಿಂದ ಕೂಡಿದೆ.

ಇಲ್ಲಿ ಏನೆಲ್ಲಾ ಮಾಡಬಹುದು:
• ಎಲಿಫೆಂಟ್ ಫಾಲ್ಸ್ ಮತ್ತು ಸ್ಪ್ರೆಡ್ ಈಗಲ್ ಫಾಲ್ಸ್ ಅನ್ನು ಭೇಟಿ ಮಾಡಿ.
• ಡೇವಿಡ್ ಸ್ಕಾಟ್ ಟ್ರಯಲ್‌ನಲ್ಲಿ ಚಾರಣಕ್ಕೆ ಹೋಗಿ.
• ಸ್ಥಳೀಯ ಭಕ್ಷ್ಯಗಳನ್ನು ಸೇವಿಸಿ ಅಥವಾ ಕೈಯಿಂದ ಮಾಡಿದ ಶಾಲುಗಳು ಮತ್ತು ಸ್ಟೋಲ್‌ಗಳನ್ನು ಖರೀದಿಸಿ.

ಮಹಾರಾಷ್ಟ್ರ:
ಪ್ರಶಾಂತವಾಗಿರುವ ಲೋನಾವಾಲಾ ಒಂದು ಜನಪ್ರಿಯ ಗಿರಿಧಾಮವಾಗಿದ್ದು, ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪುಣೆಯಿಂದ 64 ಕಿಮೀ ಮತ್ತು ಮುಂಬೈನಿಂದ 96 ಕಿಮೀ ದೂರದಲ್ಲಿರುವ ಇದು ಸುಂದರವಾದ ಸರೋವರಗಳು, ಹಚ್ಚ ಹಸಿರಿಗೆ ಹೆಸರುವಾಸಿಯಾಗಿದೆ.

ಇಲ್ಲಿ ಏನೆಲ್ಲಾ ಮಾಡಬಹುದು:

• ಪಾವ್ನಾ ಸರೋವರದಲ್ಲಿ ರಾಪ್ಪೆಲಿಂಗ್ ಮತ್ತು ಕ್ಯಾಂಪಿಂಗ್, ಟಿಕೋನಾ ಕೋಟೆಗೆ ಪಾದಯಾತ್ರೆ, ರಾಜ್ಮಾಚಿ ಕೋಟೆಗೆ ಟ್ರೆಕ್ಕಿಂಗ್ ಇತ್ಯಾದಿಗಳನ್ನು ಒಳಗೊಂಡಂತೆ ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
• ಟೈಗರ್ಸ್ ಲೀಪ್ ಅನ್ನು ಭೇಟಿ ಮಾಡಿ ಪಶ್ಚಿಮ ಘಟ್ಟಗಳ ಭವ್ಯವಾದ ನೋಟ ನೋಡಿ.
• ಕಾರ್ಲಾ ಮತ್ತು ಭಾಜಾ ಗುಹೆಗಳನ್ನು ಕಾಣಿರಿ.

ಕರ್ನಾಟಕ:
ಸರೋವರಗಳು, ಜಲಪಾತಗಳು, ದಟ್ಟವಾದ ಕಾಡುಗಳು ಮತ್ತು ಕಾಫಿ ತೋಟಗಳು ಮಳೆಗಾಲದಲ್ಲಿ ಕೂರ್ಗ್ ಅನ್ನು ರೋಮ್ಯಾಂಟಿಕ್ ತಾಣವನ್ನಾಗಿ ಮಾಡುತ್ತದೆ. ಬೆಂಗಳೂರಿನಿಂದ 260 ಕಿಮೀ ದೂರದಲ್ಲಿರುವ ಈ ರಸ್ತೆ ಪ್ರವಾಸವು ಸ್ಮರಣೀಯವಾಗಿರುತ್ತದೆ. ಮಳೆಗಾಲದಲ್ಲಿ ಈ ಸುಂದರವಾದ ಪಟ್ಟಣದ ಸೌಂದರ್ಯವನ್ನು ನೋಡಿ ಸವಿಯಿರಿ.

ಇಲ್ಲಿ ಏನೆಲ್ಲಾ ಮಾಡಬಹುದು:

• ಮಡಿಕೇರಿ ಕೋಟೆ ಮತ್ತು ರಾಜಾ ಸೀಟ್‌ಗೆ ಟ್ರೆಕಿಂಗ್ ಮಾಡಿ.
• ಜೋಗ್ ಫಾಲ್ಸ್,ಇದು ಭಾರತದ ಎರಡನೇ ಅತಿ ಎತ್ತರದ ಜಲಪಾತ ಮತ್ತು ಅಬ್ಬೆ ಜಲಪಾತಕ್ಕೆ ಭೇಟಿ ನೀಡಿ.
• ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿ.
• ಕಾಫಿ ಮತ್ತು ಕೂರ್ಗ್ ವೈನ್ ಶಾಪಿಂಗ್ ಮಾಡಿ.

ಗೋವಾ :

ವರ್ಷವಿಡೀ ಜನಪ್ರಿಯ ಪ್ರವಾಸಿ ತಾಣವಾಗಿರುವ ಗೋವಾಕ್ಕೆ ಮಳೆಗಾಲದಲ್ಲಿ ಭೇಟಿ ನೀಡಲೇಬೇಕು.ಇಲ್ಲಿ ಕಡಲತೀರಗಳಿಗೆ ಭೇಟಿ ನೀಡಬಹುದು.

ಇಲ್ಲಿ ಏನೆಲ್ಲಾ ಮಾಡಬಹುದು:

• ಬೊಮ್ ಜೀಸಸ್, ವಾಸ್ಕೋ ಚರ್ಚ್‌ನಂತಹ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ.
• ಮಾಂಡೋವಿ ನದಿಯಲ್ಲಿ ಸಂಜೆ ದೋಣಿ ವಿಹಾರ ಮಾಡಿ.

ಕೇರಳ:
ಕೇರಳದ ಮುನ್ನಾರ್ ಪಶ್ಚಿಮ ಘಟ್ಟಗಳ ಮಂಜಿನ ಹಸಿರು ಪರ್ವತಗಳು ಮತ್ತು ಹಸಿರು ಚಹಾ ತೋಟಗಳನ್ನು ಹೊಂದಿದೆ, ಹೀಗಾಗಿ ಇದು ಮಳೆಗಾಲದಲ್ಲಿ ಭೇಟಿ ನೀಡಲು ನೆಚ್ಚಿನ ಪ್ರವಾಸಿ ತಾಣವಾಗಿದೆ.

ಇಲ್ಲಿ ಏನೆಲ್ಲಾ ಮಾಡಬಹುದು:

• ಮುನ್ನಾರ್‌ನಲ್ಲಿ ಚಹಾ ಮತ್ತು ಮಸಾಲೆ ತೋಟಗಳಲ್ಲಿ ವಿಹಾರ ಮಾಡಿ .
• ಕಾರ್ಮೆಲಗಿರಿ ಎಲಿಫೆಂಟ್ ಪಾರ್ಕ್‌ನಲ್ಲಿ ಆನೆ ಸಫಾರಿಯನ್ನು ಆನಂದಿಸಿ.

ಇದನ್ನೂ ಓದಿ: Sleeping Problem:ನಿದ್ರಾ ಹೀನತೆ ಸಮಸ್ಯೆಯೇ ! ಉತ್ತಮ ನಿದ್ರೆಗೆ ಸಹಾಯ ಮಾಡುವ ಸಲಹೆಗಳು ಇಲ್ಲಿವೆ

ಇದನ್ನೂ ಓದಿ: Solo Trip In India:ಭಾರತದಲ್ಲಿ ನೀವು ಸೋಲೋ ಆಗಿ ಪ್ರಯಾಣಿಸಬಹುದಾದ 5 ಸ್ಥಳಗಳು:

(Monsoon Tourism to explore in India )

Comments are closed.