Mysore Ambari Bus : ಅರಮನೆ ನಗರಿಯ ವೀಕ್ಷಣೆಗಿನ್ನು ಅಂಬಾರಿ ಓಪನ್‌ ರೂಫ್‌ ಬಸ್‌

ಮೈಸೂರು : ಅರಮನೆ ನಗರಿ ಮೈಸೂರು ಪ್ರವಾಸಿಗರ ಪಾಲಿನ ಸ್ವರ್ಗ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವ ಸಲುವಾಗಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಅಂಬಾರಿ ಓಪನ್‌ ರೂಫ್‌ ಬಸ್‌ ಸೇವೆ ಆರಂಭಿಸಲು ಮುಂದಾಗಿದೆ.

ಕೆಎಸ್‌ಟಿಡಿಸಿ ಈಗಾಗಲೇ ಬಸ್‌ ಸೇವೆಯನ್ನು ಆರಂಭಿಸಿತ್ತು. ಆದರೆ ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎಪ್ರೀಲ್‌ ತಿಂಗಳಿನಿಂದ ಬಸ್‌ ಸೇವೆಯನ್ನು ಬಂದ್‌ ಮಾಡಿತ್ತು. ಆದ್ರೀಗ ವಾರಾಂತ್ಯದ ಕರ್ಪ್ಯೂ ತೆರವಾದ ಬೆನ್ನಲ್ಲೇ, ಅಂಬಾರಿ ಓಪನ್‌ ಬಸ್‌ ಸೇವೆ ಆರಂಭವಾಗಲಿದೆ. ‘ಹಾಪ್-ಆನ್-ಹಾಪ್-ಆಫ್’ ಬಸ್‌ಗಳು ಪ್ರವಾಸಿಗರನ್ನು ಮೈಸೂರಿನ ಪಾರಂಪರಿಕ ತಾಣಗಳಿಗೆ ಕರೆದೊಯ್ಯುತ್ತವೆ ಎಂದು ಕೆಎಸ್‌ಟಿಡಿಸಿ ಅಧ್ಯಕ್ಷ ಕಾ ಪು ಸಿದ್ದಲಿಂಗಸ್ವಾಮಿ ತಿಳಿಸಿದ್ದಾರೆ.

ಓಪನ್‌ ಬಸ್‌ ಸೇವೆ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಲಭ್ಯವಾಗಿರಲಿದೆ. ಅಂಬಾರಿ ಓಪನ್‌ ಬಸ್‌ ಮೂಲಕ ಮೈಸೂರು ನಗರದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲಿದ್ದು, ಮೈಸೂರಿನ ಸೊಬಗನ್ನು ಪ್ರವಾಸಿಗರಿಗೆ ಉಣಬಡಿಲಿದೆ. ಪ್ರತೀ ಪ್ರಯಾಣಿಕರಿಗೆ 250 ರೂ. ಟಿಕೆಟ್‌ ದರವನ್ನು ನಿಗದಿ ಪಡಿಸಲಾಗಿದೆ. ಪ್ರವಾಸಿಗರಿಗೆ ಆಡಿಯೋ ಕ್ಲಿಪ್‌ಗಳ ಮೂಲಕ ಪ್ರವಾಸಿ ತಾಣದ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ.

ನಿತ್ಯವೂ ಮೈಸೂರು ನಗರದಲ್ಲಿರುವ ಕೆಎಸ್‌ಟಿಡಿಸಿ ಕಚೇರಿಯಿಂದ ಬಸ್‌ ಸವಾರಿ ಆರಂಭವಾಗುತ್ತದೆ, ಉಪ ಆಯುಕ್ತರ ಕಚೇರಿ, ಕುಕ್ಕರಹಳ್ಳಿ ಕೆರೆ, ಕ್ರಾಫರ್ಡ್ ಹಾಲ್, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾತಾಶಾಲೆ, ಕೆಆರ್ ವೃತ್ತ, ದೊಡ್ಡ ಗಡಿಯಾರ (ಸಿಲ್ವರ್ ಜುಬಿಲಿ ಕ್ಲಾಕ್ ಟವರ್), ಅರಮನೆ ದಕ್ಷಿಣ ದ್ವಾರ, ಹಾರ್ಡಿಂಜ್ ಸರ್ಕಲ್, ಮೈಸೂರು ಮೃಗಾಲಯ, ಕಾರಂಜಿ ಕೆರೆ, ಸರ್ಕಾರಿ ಅತಿಥಿ ಗೃಹ, ಸೇಂಟ್ ಫಿಲೋಮಿನಾ ಚರ್ಚ್, ಬನ್ನಿಮಂಟಪ್, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ರೈಲ್ವೇ ನಿಲ್ದಾಣ ವೃತ್ತ ಮತ್ತು ಹೋಟೆಲ್ ಮಯೂರ ಹೊಯ್ಸಳದಲ್ಲಿ ಕೊನೆಗೊಳ್ಳುತ್ತದೆ.

ಇದನ್ನೂ ಓದಿ : ಪ್ರಕೃತಿ ಪ್ರಿಯ ನೆಚ್ಚಿನ ತಾಣ ಒತ್ತಿನೆಣೆ ಬೀಚ್‌ನಲ್ಲಿ ನಿರ್ಮಾಣವಾಗಲಿದೆ ಸೀ ವಾಕ್

ಇದನ್ನೂ ಓದಿ : ಪ್ರಕೃತಿಯ ಅದ್ಭುತ ರಮ್ಯತಾಣ ಕಾಸರಗೋಡಿನ “ಮಾಲಂ”

(KSTDC : Ambari Open Roof Bus Service Start of Palace City Mysore)

Comments are closed.