ಕೊಡಗು ಸುಂದರ ಸ್ಥಳಗಳಿಗೆ ಹೆಸರುವಾಸಿ. ನೂರಾರು ಸುಂದರ ಸ್ಥಳಗಳು ಕೊಡಗಿನಲ್ಲಿವೆ. ಇಂತಹ ಕೊಡಗಿನಲ್ಲಿ ಸುಂದರವಾದ ಚಾರಣದ ಸ್ಥಳಗಳು ಬಹಳಷ್ಟಿವೆ. ಅವುಗಳಲ್ಲಿ ಮುಖ್ಯವಾದುದು ಕೊಡಗಿನ ಭಾಗಮಂಡಲದ ನಿಶಾನಿ ಮೊಟ್ಟೆ ಬೆಟ್ಟ!

ಭಾಗಮಂಡಲದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ನಿಶಾನೆ ಮೊಟ್ಟೆ ಬೆಟ್ಟ ತನ್ನ ಗಮನಸೆಳೆಯುವ ಸೌಂದರ್ಯಕ್ಕೆ ಹೆಸರುವಾಸಿ. ತಲಕಾವೇರಿ ಭಾಗ ಈ ಚಾರಣದ ಪ್ರದೇಶವನ್ನು ಒಳಗೊಳ್ಳುತ್ತದೆ.

ಈ ನಿಶಾನೆ ಮೊಟ್ಟೆ ಬೆಟ್ಟದ ಚಾರಣದಲ್ಲಿ ನಾವು ವಿಪುಲವಾದ ಶೋಲಾ ಕಾಡುಗಳನ್ನು ಕಾಣಬಹುದು. ಸುಮಾರು ಸಮುದ್ರದಿಂದ 4,167 ಮೀಟರ್ ಎತ್ತರದಲ್ಲಿರುವ ಈ ಬೆಟ್ಟ ಮಂಜು, ತಣ್ಣಗಿನ ಗಾಳಿಯ ಮೂಲಕ ಚಾರಣಿಗರಲ್ಲಿ ಸಂತೋಷದ ಭಾವನೆಯನ್ನು ಮೂಡಿಸುತ್ತದೆ.

ರುದ್ರರಮಣೀಯ ತಲಕಾವೇರಿ ವನ್ಯಧಾಮದ ಬೆಟ್ಟಗಳನ್ನು ಈ ಚಾರಣದಲ್ಲಿ ನಾವು ಕಾಣಬಹುದು. ಬಣ್ಣವನ್ನು ಬದಲಾಯಿಸುವ ಈ ಬೆಟ್ಟಗಳು ಚಾರಣಿಗರನ್ನು ಮೂಕವಿಸ್ಮಿತ ರನ್ನಾಗಿಸುವುದರಲ್ಲಿ ಸಂಶಯವಿಲ್ಲ.

ಬಹಳ ಸುಲಭವಾದ ಚಾರಣ ಪ್ರದೇಶವನ್ನು ಇದು ಹೊಂದಿದೆ. ಇಂತಹ ಕೊಡಗಿನ ಭಾಗಮಂಡಲದಲ್ಲಿರುವ ನಿಶಾನಿ ಮೊಟ್ಟೆ ಚಾರಣ ನಮ್ಮ ಜೀವನದಲ್ಲಿ ಒಮ್ಮೆಯಾದರೂ ಕೈಗೊಳ್ಳಬೇಕು.