ಮೈಸೂರಲ್ಲಿ ದಸರಾ ಸಂಭ್ರಮ : ಅರಮನೆಯಲ್ಲಿ ಅಂಬಾರಿಯಷ್ಟೇ ಅಲ್ಲಾ ಇನ್ನೂ ಇದೆ ಹಲವು ವಿಶೇಷತೆ

ಮೈಸೂರು ಅರಮನೆ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ. ಮೈಸೂರಿನ ಭವ್ಯತೆ ಮತ್ತು ರಾಜ ಪರಂಪರೆಯ ಸಂಕೇತ. ಮೈಸೂರು ಅರಮನೆಯನ್ನು 14 ನೇ ಶತಮಾನದ ಆರಂಭದಲ್ಲಿ ಒಡೆಯರ್ ರಾಜಮನೆತನ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು. ಮೂಲ ಅರಮನೆಯನ್ನು ಮರದಿಂದ ನಿರ್ಮಿಸಲಾಗಿತ್ತು.

ಒಮ್ಮೆ ಸಿಡಿಲು ಬಡಿದಾಗ (ಕ್ರಿ.ಶ. 1638 ರಲ್ಲಿ), ಒಮ್ಮೆ ಟಿಪ್ಪು ಸುಲ್ತಾನ್ ದಾಳಿಯಿಂದ (ಕ್ರಿ.ಶ. 1739 ರಲ್ಲಿ) ಮತ್ತು ಕ್ರಿ.ಶ. 1897 ರಲ್ಲಿ ಮತ್ತೊಮ್ಮೆ ಬೆಂಕಿಯಿಂದ ನಾಶವಾಯಿತು. ಪ್ರಸ್ತುತ ಮೈಸೂರು ಅರಮನೆಯುನ್ನು ನಾಲ್ಕನೆಯ ಬಾರಿ ಪುನ ನಿರ್ಮಾಣಗೊಳಿಸಲಾಗಿದೆ. ಮೈಸೂರು ಅರಮನೆಯು ಕೊನೆಯ ನವೀಕರಣವನ್ನು 1912 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ ವಿನ್ಯಾಸದನ್ವಯ ಪೂರ್ಣಗೊಳಿಸಲಾಯಿತು.

ಇದನ್ನೂ ಓದಿ: world most beautiful airports : ಪ್ರಪಂಚದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಿವು !

ಮೈಸೂರು ಅರಮನೆಯ ಪ್ರಮುಖ ಆಕರ್ಷಣೆಯಲ್ಲಿ ಮೊದಲೆನೇಯದು ಎಂದರೆ ಅದು ಚಿನ್ನದ ಅಂಬಾರಿ. ಈ ಅಂಬಾರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಚಿನ್ನದ ಸಿಂಹಾಸನವನ್ನು ಚಿನ್ನದ ಹಾಳೆಗಳಿಂದ ಸಿಂಗರಿಸಲಾಗಿದ್ದು, ಅಂಬಾರಿ ಒಟ್ಟು 750 ಕೆ.ಜಿ. ತೂಕವಿದೆ. ಆಕರ್ಷಣೆಯಲ್ಲಿ ಎರಡನೇಯದ್ದು ಸಾರ್ವಜನಿಕ ದರ್ಬಾರ್ ಹಾಲ್. ಮಹಾರಾಜರು ತನ್ನ ಮಂತ್ರಿಗಳು ಮತ್ತು ಸಂದರ್ಶಕರನ್ನು ಭೇಟಿ ಮಾಡುವ ದೊಡ್ಡ ಪ್ರಾಂಗಣ ಇದಾಗಿತ್ತು.

ಮೈಸೂರು ಪ್ರಮುಖ ಆಕರ್ಷಣೆಯಲ್ಲಿ ಮೂರನೇಯದ್ದು ವರ್ಣಚಿತ್ರಗಳು ಮತ್ತು ಭಾವಚಿತ್ರಗಳು. ಅರಮನೆಯ ಗೋಡೆಗಳಲ್ಲಿ ದಸರಾ ಮೆರವಣಿಗೆಗಳು ಮತ್ತು ಹಿಂದಿನ ಇತರ ಅದ್ಭುತ ಕ್ಷಣಗಳನ್ನು ಚಿತ್ರಿಸುವ ವರ್ಣಚಿತ್ರಗಳಿವೆ. ಮೈಸೂರು ಪ್ರಮುಖ ಆಕರ್ಷಣೆಯಲ್ಲಿ ನಾಲ್ಕನೇಯದ್ದು ಕುಸ್ತಿ ಅಂಗಳ. ಕುಸ್ತಿ ಸ್ಪರ್ಧೆಗಳು ನಡೆವ ಅಖಾಡ ಅದಾಗಿತ್ತು.

ಇದನ್ನೂ ಓದಿ: ಜೇನುಕಲ್ಲು ಗುಡ್ಡ ಪ್ರವಾಸಿಗರ ನೆಚ್ಚಿನ ತಾಣ

ಮೈಸೂರು ಪ್ರಮುಖ ಆಕರ್ಷಣೆಯಲ್ಲಿ ಐದನೇಯದ್ದು ಮದುವೆ ಮಂಟಪ. ರಾಜಮನೆತನದ ವಿವಾಹ ಮತ್ತಿತರ ಪ್ರಮುಖ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದ್ದ ಮಂಟಪ ಇದಾಗಿತ್ತು. ಮೈಸೂರು ಪ್ರಮುಖ ಆಕರ್ಷಣೆಯಲ್ಲಿ ಆರನೇಯದ್ದು ಪೀಠೋಪಕರಣಗಳು. ರಾಜ ಮನೆತನದವರು ಉಪಯೋಗಿಸುತ್ತಿದ್ದ ಪೀಠೋಪಕರಣಗಳನ್ನು ನೋಡಬಹುದಾಗಿದೆ.

(In Mysore Palace is not only Ambari but speculation is special)

Comments are closed.