ಹೆಂಡತಿ ನೆರೆಯವರ ಮನೆಯಲ್ಲಿ ಕುಳಿತಿದ್ದಕ್ಕೆ ಕಿರಿಕ್: ಕಾರ್ಕಳದ ಮಿಯ್ಯಾರಿನಲ್ಲಿ ಗೃಹಿಣಿಯ ಮೇಲೆ ಕಲ್ಲು ತೂರಾಟ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದ ಮಂಜೆರಾಯ್ ನಿವಾಸಿ ಈಶ್ವರಿ (25 ವರ್ಷ) ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ
ಕಾರ್ಕಳ (Karkala) : ತನ್ನ ಹೆಂಡತಿ ನೆರೆಯವರ ಮನೆಯಲ್ಲಿ ಕುಳಿತಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಗೃಹಿಣಿಯ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಗೃಹಿಣಿ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರ್ ಗ್ರಾಮದ ಮಂಜೆರಾಯ್ ನಿವಾಸಿ ಈಶ್ವರಿ (25 ವರ್ಷ) ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಆರೋಪಿ ಮಣಿಯ ಹೆಂಡತಿ ಆಶಾ ಅವರು ಈಶ್ವರಿ ಅವರ ಮನೆಗೆ ಹೋಗಿ ಕುಳಿತುಕೊಳ್ಳುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವನ್ನು ನೆಪವಾಗಿಟ್ಟುಕೊಂಡ ಆರೋಪಿ ಮಣಿ, ಮಾರ್ಚ್ 30ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಈಶ್ವರಿ ಅವರ ಮನೆಯ ಬಳಿ ಬಂದಿದ್ದಾನೆ.
Also Read : ಕಾರ್ಕಳ: ಹೆಂಡತಿ ಬಳಿ ಹಣ ಕೇಳಿದ ಪತಿಗೆ ಭರ್ಜರಿ ಉಡುಗೊರೆ: ಬಾಮೈದ, ಪತ್ನಿಯಿಂದಲೇ ಗಂಡನ ಮೇಲೆ ಅಟ್ಯಾಕ್
ಅವಾಚ್ಯ ನಿಂದನೆ – ಕಲ್ಲು ತೂರಾಟ
ಮನೆಯ ಬಳಿ ಬಂದ ಆರೋಪಿಯು ಈಶ್ವರಿ ಅವರ ವಿರುದ್ಧ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ರಂಪಾಟ ಮಾಡಿದ್ದಾನೆ. ಅಷ್ಟಕ್ಕೆ ನಿಲ್ಲಿಸದೇ, ಕೋಪದಲ್ಲಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ಈಶ್ವರಿ ಅವರ ಮೇಲೆ ಬಿಸಾಡಿದ್ದಾನೆ. ಕಲ್ಲು ತಗುಲಿದ ಪರಿಣಾಮ ಈಶ್ವರಿ ಅವರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Also Read : ಉಡುಪಿ: ದೈವಸ್ಥಾನದ ಕೋಲ ಮುಗಿಸಿ ಬರುತ್ತಿದ್ದ ಯುವಕನ ಮೇಲೆ ಭೀಕರ ಹಲ್ಲೆ; ಬೈಕ್, ಮೊಬೈಲ್ ಕಿತ್ತುಕೊಂಡ ಗ್ಯಾಂಗ್!
ಪೊಲೀಸ್ ದೂರು ಮತ್ತು ಪ್ರಕರಣ ದಾಖಲು
ನೊಂದ ಮಹಿಳೆ ಈಶ್ವರಿ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮಣಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 49/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 118, 352 ಹಾಗೂ 351(2) ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
karkala miyar woman attacked with stone by neighbor mani arrest case



