ಕುಂದಾಪುರ : ಕೆಎಸ್ಆರ್‌ಟಿಸಿ – ಟಿಪ್ಪರ್‌ ಢಿಕ್ಕಿ : ಹಲವು ಕಾಲೇಜು ವಿದ್ಯಾರ್ಥಿಗಳು ಗಂಭೀರ

Kundapura Accident : ಕುಂದಾಪುರ : ಕೆಎಸ್‌ಆರ್‌ಸಿಟಿ ಬಸ್‌ ಹಾಗೂ ಟಿಪ್ಪರ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 20ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೇರಳಕಟ್ಟೆ ಸಮೀಪದ ಶೆಟ್ರಕಟ್ಟೆ ಎಂಬಲ್ಲಿ ನಡೆದಿದೆ.

ಮೃತಪಟ್ಟವರೆಲ್ಲರೂ ಕೂಡ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಕುಂದಾಪುರದಿಂದ ಆಜ್ರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಸಿ ಬಸ್ಸಿಗೆ ವೇಗವಾಗಿ ಬಂದ ಟಿಪ್ಪರ್‌ ಢಿಕ್ಕಿ ಹೊಡೆದಿದೆ. ಬಸ್ಸಿನ ಒಂದು ಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

Also Read : Exclusive Vedio : ಕುಂದಾಪುರ : ಕೆಎಸ್‌ಆರ್‌ಟಿಸಿ ಬಸ್‌ – ಟಿಪ್ಪರ್‌ ಅಪಘಾತ : ಅಷ್ಟಕ್ಕೂ ಆಗಿದ್ದೇನು ? ಇಲ್ಲಿದೆ ಸಿಸಿ ಕ್ಯಾಮೆರಾ ವಿಡಿಯೋ

ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಕ್ರಾಂತವಾಗಿದೆ, 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆಯ ಸಮಯವಾಗಿರುವ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಇದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ : ರೈತ ವಿದ್ಯಾನಿಧಿ ಯೋಜನೆ: ವಿದ್ಯಾರ್ಥಿಗಳಿಗೆ ಸಹಾಯಧನಕ್ಕಾಗಿ ಹೀಗೆ

ಕಿಟಕಿ ಬದಿಯಲ್ಲಿ ಕುಳಿತಿದ್ದ ಹಲವರಿಗೆ ಗಂಭೀರ ಗಾಯವಾಗಿದೆ. ಸ್ಥಳೀಯ ಯುವಕ ಪ್ರಶಾಂತ ಪೂಜಾರಿ ಕರ್ಕಿ ಹಾಗೂ ಸಾರ್ವಜನಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ. ಲಾರಿ ಚಾಲಕನ ವೇಗ ಹಾಗೂ ಅಜಾಗರೂಕತೆಯೇ ಕಾರಣ ಎನ್ನಲಾಗುತ್ತದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Kundapura Neralakatte KSRTC Bus and Tipper Accident 3 college Students death

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories