ಕೃಷ್ಣನಗರಿ ಉಡುಪಿಗೆ ಮೋದಿ ಭೇಟಿ : ಹೇಗಿರಲಿದೆ ಗೊತ್ತಾ ಭದ್ರತೆ ?

Narendra Modi Visit Udupi : ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ಉಡುಪಿ ಜಿಲ್ಲೆಯಾಧ್ಯಂತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದ್ದು, ಕರಾವಳಿಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಹಾದ್ರೆ ನರೇಂದ್ರ ಮೋದಿ ಅವರಿಗಾಗಿ ಭದ್ರತೆ ಹೇಗಿರಲಿದೆ ಗೊತ್ತಾ ?

ಪ್ರಧಾನಮಂತ್ರಿಯಾದ ನಂತರ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಾದ್ಯಂತ ಉನ್ನತ ಮಟ್ಟ ಭದ್ರತೆಯನ್ನು ಒದಗಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಎಸ್.ಪಿ.ಜಿ (Special Protection Group) ಯ ಮಾರ್ಗಸೂಚಿಗಳ ಅಡಿಯಲ್ಲಿ ಭದ್ರತೆ ಕೈಗೊಳ್ಳಲಾಗುತ್ತದೆ.

ಪ್ರNarendra Modi Visit Udupi : ಧಾನಿಗಳಿಗಾಗಿ ಮೂರು ಹಂತದ ಭದ್ರತೆ (Three-Tier Security)

ಭಾರತದ ಪ್ರಧಾನ ಮಂತ್ರಿಗಳು ಎಲ್ಲಿಗೆ ಭೇಟಿ ನೀಡಿದ್ರೂ ಕೂಡ ವಿಶೇಷ ಭದ್ರತೆಯನ್ನು ಒದಗಿಸಲಾಗುತ್ತದೆ. ಅದ್ರಲ್ಲೂ ಎಸ್‌ಪಿಜಿ ಕಮಾಂಡೋಗಳು ಒಟ್ಟು ಮೂರು ಹಂತದಲ್ಲಿ ಭದ್ರತೆಯನ್ನು ಒದಗಿಸಲಿದ್ದಾರೆ.

ಒಳಗಿನ ವಲಯ (Inner Cordorn):

ಇದು ಪ್ರಧಾನಿಯವರಿಗೆ ಅತ್ಯಂತ ಸಮೀಪವಿರುವ ವಲಯ. ಎಸ್.ಪಿ.ಜಿ. ಮತ್ತು ಕೇಂದ್ರದ ಗುಪ್ತಚರ ದಳಗಳು (Central Intelligence) ನೇತೃತ್ವ ವಹಿಸುತ್ತವೆ. ಪ್ರಧಾನಿಯವರ ವಾಹನವು ಹಾದುಹೋಗುವ ಮಾರ್ಗದಲ್ಲಿನ ಕಟ್ಟಡಗಳು ಮತ್ತು ಮಠದ ಆವರಣದ ಆಳವಾದ ಭದ್ರತೆಯನ್ನು ಇದು ಒಳಗೊಂಡಿರುತ್ತದೆ.

ಮಧ್ಯಮ ವಲಯ (Middle Cordorn):

ಈ ವಲಯವು ಸ್ಥಳೀಯ ಜಿಲ್ಲಾ ಪೊಲೀಸರು ಮತ್ತು ರಾಜ್ಯ ಗುಪ್ತಚರ ಇಲಾಖೆ (State Intelligence) ಯಿಂದ ನಿಯಂತ್ರಿಸಲ್ಪಡುತ್ತದೆ. ಮಾರ್ಗದ ಎರಡೂ ಬದಿಗಳಲ್ಲಿರುವ ಕಟ್ಟಡಗಳ ಮೇಲೆ ಪೊಲೀಸರನ್ನು ನಿಯೋಜಿಸಿ, ಶಾರ್ಪ್ ಶೂಟರ್‌ಗಳನ್ನು (Sharp Shooters) ಇರಿಸಲಾಗುತ್ತದೆ.

ಹೊರಗಿನ ವಲಯ (Outer Cordorn):

ಇದು ಸಂಚಾರ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾರ್ಯಕ್ರಮದ ಸ್ಥಳಕ್ಕೆ ಬರುವ ಸಾರ್ವಜನಿಕರ ತಪಾಸಣೆಯನ್ನು ನಿರ್ವಹಿಸುತ್ತದೆ. ಡಿಎಆರ್ (DAR), ಕೆಎಸ್ಆರ್ಪಿ (KSRP) ಮತ್ತು ಹೋಮ್ ಗಾರ್ಡ್‌ಗಳು ಈ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ 3000 ಪೊಲೀಸರು, ಕರಾವಳಿಯಲ್ಲಿ ಹೈ ಅಲರ್ಟ್‌

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಭದ್ರತಾ ವ್ಯವಸ್ಥೆಗೆ ಸುಮಾರು 3,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಈ ಸಿಬ್ಬಂದಿಯಲ್ಲಿ 1000ಕ್ಕೂ ಹೆಚ್ಚು ಸ್ಥಳೀಯ ಉಡುಪಿ ಜಿಲ್ಲಾ ಪೊಲೀಸ್ ಸಿಬ್ಬಂದಿ ಇರುತ್ತಾರೆ.

ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಿಂದ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಡಿಎಆರ್ (DAR) ತುಕಡಿಗಳು ಮತ್ತು ಕೆಎಸ್‌ಆರ್‌ಪಿ (KSRP) ಬೆಟಾಲಿಯನ್ ಸಿಬ್ಬಂದಿಯನ್ನು ಕರೆಸಲಾಗಿದೆ.

ಹಿರಿಯ ಅಧಿಕಾರಿಗಳಲ್ಲಿ ಒಬ್ಬ ಎಡಿಜಿಪಿ (ADGP), ಇಬ್ಬರು ಐಜಿಪಿ (IGP) ಗಳು, 10ಕ್ಕೂ ಹೆಚ್ಚು ಎಸ್ಪಿ (SP) ಗಳು ಮತ್ತು 25 ಕ್ಕೂ ಹೆಚ್ಚು ಡಿವೈಎಸ್ಪಿ (DySP) ಗಳು ಭದ್ರತೆಯ ಉಸ್ತುವಾರಿ ವಹಿಸಲಿದ್ದಾರೆ.

ಶ್ರೀಕೃಷ್ಣ ಮಠಕ್ಕೆ ಬಂದೋಬಸ್ತ್ ವಿವರ

  • ಪ್ರಧಾನಿಯವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದರಿಂದ, ಮಠದ ಸುತ್ತಮುತ್ತ ಮತ್ತು ಕಾರ್ಯಕ್ರಮದ ಸ್ಥಳದಲ್ಲಿ ಅತ್ಯಂತ ಬಿಗಿ ಭದ್ರತೆಯನ್ನು ವಿಧಿಸಲಾಗಿದೆ.
  • ಮಠದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಮತ್ತು ವಸತಿಗೃಹಗಳನ್ನು ಮುಚ್ಚಲು ಆದೇಶಿಸಲಾಗಿದೆ.
  • ಮಠದ ಒಳಗೆ ಮತ್ತು ಹೊರಗೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯು (ಮಠದ ಸಿಬ್ಬಂದಿ ಮತ್ತು ಅರ್ಚಕರು ಸೇರಿದಂತೆ) ಕಡ್ಡಾಯವಾಗಿ ತಪಾಸಣೆಗೆ ಒಳಪಡಬೇಕು.
  • ಮಠದ ಆವರಣ ಮತ್ತು ಪ್ರವೇಶದ್ವಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, 24/7 ಕಣ್ಗಾವಲು ಇರಿಸಲಾಗುತ್ತದೆ.
  • ಮಠಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಬಿಗಿ ಬ್ಯಾರಿಕೇಡಿಂಗ್ ಮಾಡಲಾಗಿದ್ದು, ಪ್ರಧಾನಿಯವರ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತದೆ.
  • ನವೆಂಬರ್‌ 28 ರಂದು ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಅಥವಾ ನಿರ್ದಿಷ್ಟ ಸಮಯಕ್ಕೆ ಸೀಮಿತಗೊಳಿಸಲಾಗಿದೆ.

PM Narendra Modi Visit Udupi: Do you know what the security will be like ?

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories