ಸಾಸ್ತಾನ – ಪಾಂಡೇಶ್ವರದಲ್ಲಿ ಸು ಫ್ರಂ ಸೋ ಮಾದರಿಯ ಕೃತ್ಯ: ಸ್ನಾನಗೃಹ ಇಣುಕಿ ಪರಾರಿ, ಗ್ರಾಮಸ್ಥರಲ್ಲಿ ಆತಂಕ

ಉಡುಪಿ (udupi News) : ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸು ಫ್ರಂ ಸೋ (Su from So ) ಸಿನೆಮಾದಲ್ಲಿನ ದೃಶ್ಯದಂತೆ ಕಿಡಿಗೇಡಿಯೊಬ್ಬನು ಸ್ನಾನಗೃಹಗಳಿಗೆ ಇಣುಕಿ ಪರಾರಿಯಾಗುವ ಘಟನೆಗಳು ಕಳೆದ ಎರಡು ದಿನಗಳಿಂದ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಬ್ರಹ್ಮಾವರ ತಾಲೂಕು ಪಾಂಡೇಶ್ವರ ನಿರಾಡಿಜಡ್ಡು ಪ್ರದೇಶದಲ್ಲಿ ಸೋಮವಾರ ಸಂಜೆ ಮನೆೊಂದರಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ವೇಳೆ ಸ್ನಾನಗೃಹದ ಹಂಚು ತೆಗೆದು ಮೊಬೈಲ್ ಮೂಲಕ ವಿಡಿಯೋ ತೆಗೆಯಲು ಯತ್ನಿಸಿದನು. ಮಹಿಳೆ ಕಿರುಚುತ್ತಿದ್ದಂತೆ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಾದ ಬಳಿಕ ಮಂಗಳವಾರ ಪಾಂಡೇಶ್ವರ ಮುಖ್ಯರಸ್ತೆ ಸಮೀಪದ ಮತ್ತೊಂದು ಮನೆಯಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ಸಂದರ್ಭ ಕಿಟಕಿಯ ಮೂಲಕ ಇಣುಕಿ ಪರಾರಿಯಾದ ಘಟನೆ ನಡೆದಿದೆ. ಆರೋಪಿಯ ಪತ್ತೆಗೆ ಕೋಟ ಪೊಲೀಸರು ಹಾಗೂ ಗ್ರಾಮಸ್ಥರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Also Read : ಶೆಟ್ರಕಟ್ಟೆ ಅಪಘಾತ ಪ್ರಕರಣ: ಪೊಲೀಸ್ ಸಿಬ್ಬಂದಿ ತಲೆದಂಡ…

ಘಟನೆಗೆ ಸಂಬಂಧಿಸಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಪೊಲೀಸ್ ಇಲಾಖೆ ಬಲೆ ಬೀಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Su from So type of act in Pandeshwar Sasthana Man escapes after sneaking into bathroom, villagers worried Udupi News

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories