ಉಡುಪಿ: ಆಟೋ ಗ್ಯಾಸ್ ದರ ದಿಢೀರ್ ಏರಿಕೆ; ಏಜೀಸ್ ಗ್ಯಾಸ್ ವಿರುದ್ಧ ಚಾಲಕರ ಆಕ್ರೋಶ

Udupi News | Aegis Auto Gas Price Hike: ಉಡುಪಿ ನಗರದ ಇತರ ಗ್ಯಾಸ್ ಪಂಪ್‌ಗಳಲ್ಲಿ ಸಾಮಾನ್ಯ ದರ ಮುಂದುವರಿದಿದ್ದರೆ, ಹೊರವಲಯದ ಏಜೀಸ್ (Aegis) ಆಟೋ ಗ್ಯಾಸ್ ಕೇಂದ್ರದಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ ದರದಲ್ಲಿ ಬರೋಬ್ಬರಿ 18 ರೂಪಾಯಿ ಹೆಚ್ಚಳ ಮಾಡಲಾಗಿದೆ. ಪರಿಸ್ಥಿತಿಯ ಲಾಭ ಪಡೆಯಲು ಮಾಲಕರು ಈ ರೀತಿ ಮಾಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ.

Udupi News: ಉಡುಪಿ: ಜಿಲ್ಲೆಯಲ್ಲಿ ಎಲ್‌ಪಿಜಿ ಗ್ಯಾಸ್ ಪೂರೈಕೆಯ ವ್ಯತ್ಯಯದ ನಡುವೆಯೇ, ನಗರದ ಹೊರವಲಯದ ಗ್ಯಾಸ್ ಪಂಪ್‌ವೊಂದರಲ್ಲಿ ದರವನ್ನು ಏಕಾಏಕಿ ಏರಿಕೆ (Aegis Auto Gas Price Hike) ಮಾಡಿರುವುದು ಆಟೋ ಚಾಲಕರ (Auto Drivers Protest) ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಏಕಾಏಕಿ 18 ರೂಪಾಯಿ ಹೆಚ್ಚಳ
ಉಡುಪಿ ನಗರದ ಇತರ ಗ್ಯಾಸ್ ಪಂಪ್‌ಗಳಲ್ಲಿ ಸಾಮಾನ್ಯ ದರ ಮುಂದುವರಿದಿದ್ದರೆ, ಹೊರವಲಯದ ಏಜೀಸ್ (Aegis) ಆಟೋ ಗ್ಯಾಸ್ ಕೇಂದ್ರದಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ ದರದಲ್ಲಿ ಬರೋಬ್ಬರಿ 18 ರೂಪಾಯಿ ಹೆಚ್ಚಳ ಮಾಡಲಾಗಿದೆ. ಪರಿಸ್ಥಿತಿಯ ಲಾಭ ಪಡೆಯಲು ಮಾಲಕರು ಈ ರೀತಿ ಮಾಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ.

ಸುತ್ತೋಲೆಯ ನೆಪ
ದರ ಏರಿಕೆ ಬಗ್ಗೆ ಆಟೋ ಚಾಲಕರು ಪಂಪ್ ಮಾಲಕರನ್ನು ಪ್ರಶ್ನಿಸಿದಾಗ, “ನಮಗೆ ಮೇಲಿಂದ ದರ ಏರಿಕೆಯ ಸುತ್ತೋಲೆ ಬಂದಿದೆ, ಅದರಂತೆ ದರ ಹೆಚ್ಚಿಸಲಾಗಿದೆ” ಎಂಬ ಹಾರಿಕೆ ಉತ್ತರವನ್ನ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ನಗರದ ಇತರ ಕೇಂದ್ರಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸವಿಲ್ಲದಿರುವುದು ಚಾಲಕರ ಅನುಮಾನಕ್ಕೆ ಕಾರಣವಾಗಿದೆ.

ದೇಶದಲ್ಲಿ ಇಂಧನ ಕೊರತೆಯಿಲ್ಲ: ಪೆಟ್ರೋಲ್, ಡೀಸೆಲ್ ಸಂಗ್ರಹಿಸಿಡದಂತೆ ಕೇಂದ್ರ ಸರ್ಕಾರ ಮನವಿ

ಚಾಲಕರ ಅಸಹಾಯಕತೆ
ಪ್ರಸ್ತುತ ಎಲ್‌ಪಿಜಿ ಗ್ಯಾಸ್ ಸರಬರಾಜು ಮಾಡುವ ತೇಜಸ್ ಆಟೋ ಗ್ಯಾಸ್ ಸೇರಿದಂತೆ ಇತರ ಕೇಂದ್ರಗಳಲ್ಲಿ ಸಾಮಾನ್ಯ ದರವಿದೆ. ಆದರೆ ಹೊರವಲಯದ ಪಂಪ್‌ಗಳಲ್ಲಿ ದರ ಜಾಸ್ತಿ ಇರುವುದರಿಂದ ಅನಿವಾರ್ಯವಾಗಿ ಆಟೋಗಳು ಪಂಪ್‌ಗಳ ಎದುರು ಸಾಲುಗಟ್ಟಿ ನಿಂತಿವೆ. “ದಿನವಿಡೀ ದುಡಿದರೂ ಅತಿ ಹೆಚ್ಚು ದರ ನೀಡಿ ಗ್ಯಾಸ್ ತುಂಬಿಸಿದರೆ ನಮಗೆ ಉಳಿತಾಯವೇನೂ ಆಗುವುದಿಲ್ಲ” ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಒತ್ತಾಯ
ಸಂಕಷ್ಟದ ಸಮಯದಲ್ಲಿ ದರ ಏರಿಕೆ ಮಾಡಿ ಆಟೋ ಚಾಲಕರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಪಂಪ್ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಹಳೆಯ ದರವನ್ನೇ ಜಾರಿಗೆ ತರಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories