ISRO PSLV C52 ನಭಕ್ಕೆ ಜಿಗಿದ ವಿಡಿಯೋ ನೋಡಿ; 3 ಉಪಗ್ರಹಗಳು ನಭ ಸೇರಿದ ಶುಭಸುದ್ದಿ ನೀಡಿದ ಇಸ್ರೋ

ಇಸ್ರೋ ಇಂದು (ಫೆಬ್ರವರಿ 14) ರ ಬೆಳಗ್ಗೆ ದೇಶದ ಜನರಿಗೆ ಶುಭ ಸುದ್ದಿಯೊಂದನ್ನು ಉಣಬಡಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ವರ್ಷ ಮೊದಲ ಬಾಹ್ಯಾಕಾಶ ಯೋಜನೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸೋಮವಾರ ಉಡಾವಣೆ ಮಾಡಿದೆ. ಇಒಎಸ್‌-04 ಮತ್ತು ಇನ್ನೆರಡು ಸಣ್ಣ ಉಪಗ್ರಹಗಳನ್ನುಹೊತ್ತ ಪಿಎಸ್ಎಲ್‌ವಿ-ಸಿ5 (ISRO PSLV C52) ರಾಕೇಟ್‌ನಲ್ಲಿ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಉಡಾವಣಾ ವೇದಿಕೆಯಿಂದ ಬೆಳಿಗ್ಗೆ 5.59ಕ್ಕೆ ನಭಕ್ಕೆ ಚಿಮ್ಮಿತು. ಈ ಉಡಾವಣೆಯ 25 ತಾಸಿನ ಕ್ಷಣ ಗಣನೆ ಶನಿವಾರದಿಂದಲೇ ಶುರುವಾಗಿತ್ತು. ಪಿಎಸ್‌ಎಲ್‌ವಿ ರಾಕೇಟ್‌ ಮೂಲಕ ಉಡಾವಣೆಯಾದ 23ನೇ ಯೋಜನೆ ಇದಾಗಿದೆ. ನೀವು ಇಲ್ಲಿ ವಿಡಿಯೋ ವೀಕ್ಷಿಸಬಹುದಾಗಿದೆ. ISRO PSLV C52 watch video here

ಉಡಾವಣಾ ವಾಹನವನ್ನು ಭೂಮಿಯ ವೀಕ್ಷಣಾ EOS-04 ಮಿಷನ್‌ನ ಭಾಗವಾಗಿ ಪಿಎಸ್ ಎಲ್ ವಿ-ಸಿ 52 ಉಪಗ್ರಹವನ್ನು ಕಕ್ಷೆಗೆ ಸೇರುವಂತೆ ವಿನ್ಯಾಸಗೊಳಿಸಲಾಗಿದೆ. 1,710 ಕೆಜಿ ತೂಕದ ಸೂರ್ಯನ ಸಿಂಕ್ರೊನಸ್ ಧ್ರುವೀಯ ಕಕ್ಷೆಯಲ್ಲಿ 529 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ.

ಭೂ ಸರ್ವೇಕ್ಷಣೆ ಮಾಡುವ ಕರಾರುವಕ್ಕಾದ ರೇಡಾರ್‌ ಇಮೇಜ್‌ಗಳನ್ನು ಕಳುಹಿಸುವ ಭೂ ನಿಗಾ ಸ್ಯಾಟಲೈಟ್‌ (ಇಒಎಸ್‌) ಸರಣಿಯಲ್ಲಿ ನಾಲ್ಕನೇ ಮಿಷನ್‌ ಇದಾಗಿದೆ.ಇಒಎಸ್‌ ಜತೆಗೆ ಉಡಾವಣೆ ಆಗುತ್ತಿರುವ ಇನ್ನೆರಡು ಸ್ಯಾಟಲೈಟ್‌ಗಳಲ್ಲಿ ಇನ್‌ಸ್ಪೈರ್‌-1 ಹೆಸರಿನ ಸಣ್ಣ ಉಪಗ್ರಹವನ್ನು ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನದ ಈ (ಐಐಎಸ್‌ಟಿ) ವಿದ್ಯಾರ್ಥಿಯೊಬ್ಬ ಅಭಿವೃದ್ಧಿ ಪಡಿಸಿದ್ದಾರೆ. ಅವರಿಗೆ ಅಮೆರಿಕದ ಕೊಲರಾಡೊ ವಿವಿ ಮತ್ತು ಸಿಂಗಾಪುರದ ಎನ್‌ಟಿಯು ಮತ್ತು ತೈವಾನ್‌ನ ಎನ್‌ಸಿಯು ಸಹಕಾರ ನೀಡಿದೆ.

ಐಎನ್‌ಎಸ್‌2ಟಡಿ ಉಪಗ್ರಹವು ತಂತ್ರಜ್ಞಾನ ಪ್ರದರ್ಶಕ ಸ್ಯಾಟಲೈಟ್‌ ಆಗಿದ್ದು, ಭಾರತ-ಭೂತಾನ್‌ ಸಹಯೋಗದಲ್ಲಿ ಅಭಿವೃದ್ಧಿಗೊಂಡಿದೆ. ಥರ್ಮಲ್‌ ಇಮೇಜಿಂಗ್‌ ಕ್ಯಾಮರವನ್ನು ಇದು ತನ್ನೊಡಲೊಳಗೆ ಇರಿಸಿಕೊಂಡಿದೆ. ಇದರಿಂದ ಭೂ ಮೇಲ್ಮೈ ಉಷ್ಣತೆ, ಜಲ ಮೇಲ್ಮೈ ಉಷ್ಣತೆ, ಅರಣ್ಯ ಮತ್ತು ಬೆಳೆ ಪ್ರದೇಶದ (ಆಹಾರ) ಹಾಗೂ ಉಷ್ಣದ ಜಡತ್ವವನ್ನು ಅಧ್ಯಯನ ಮಾಡಬಹುದಾಗಿದೆ.

1,710 ಕೆ.ಜಿ. ತೂಕದ ಈ ಉಪಗ್ರಹವು ಭೂಮಿಯಿಂದ 529 ಕಿ.ಮೀ. ದೂರದ ಸೂರ್ಯನ ಸಿಂಕ್ರೊನಸ್‌ ಧ್ರುವ ಕಕ್ಷೆಯಲ್ಲಿ ಸ್ಥಿತವಾಗಲಿದೆ. ಇಒಎಸ್‌-04 ಎಲ್ಲ ಋತುಮಾನದಲ್ಲೂ ಭೂ ಮಲ್ಮೈನ ಉತ್ಕೃಷ್ಟ ದರ್ಜೆಯ ಚಿತ್ರಗಳನ್ನು ಕಳುಹಿಸಲಿದೆ. ಇದರಿಂದ ನಿಖರ ನಕ್ಷೆ, ಕೃಷಿ, ಅರಣ್ಯ, ಬೆಟ್ಟಗುಟ್ಟ ಪ್ರದೇಶಗಳ ಮ್ಯಾಪಿಂಗ್‌, ಮಣ್ಣಿನ ಫಲವತ್ತತೆ, ಜಲ ಮೂಲ, ಖನಿಜ ನಿಕ್ಷೇಪಗಳ ಶೋಧ, ಮಳೆ, ಪ್ರವಾಹವನ್ನು ಮೊದಲ ಅಂದಾಜು ಮಾಡಬಹುದು ಎಂದು ಇಸ್ರೊ ಹೇಳಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ 2022 ರ ಮೊದಲ ಉಪಗ್ರಹ ಪಿಎಸ್ ಎಲ್ ವಿ-ಸಿ 52 ಉಡಾವಣೆಯನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಇಸ್ರೋ ತಿಳಿಸಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

ISRO PSLV C52 Launch successful watch video here

Comments are closed.