ಯಕ್ಷಗಾನದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ವಿಧಿವಶ

ಉಡುಪಿ : ಯಕ್ಷಗಾನದ ಹಿರಿಯ ಕಲಾವಿದರಾದ ಮಲ್ಪೆ ವಾಸುದೇವ ಸಾಮಗ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಲ್ಪಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರ ತಾಲೂಕು ಕೋಟೇಶ್ವರದ ಸ್ವಗೃಹದಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದ ಮಲ್ಪೆ ವಾಸುದೇವ ಸಾಮಗರು, ಕಲಾವಿದರಾಗಿಯಷ್ಟೇ ಅಲ್ಲಾ ಯಕ್ಷಗಾನದ ತಾಳಮದ್ದಲೆಯಲ್ಲಿಯೂ ತಮ್ಮದೇ ಆದ ವಿಶಿಷ್ಟ ಅರ್ಥಗಾರಿಕೆಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.

ಕೋಟ ಶ್ರೀಧರ ಹಂದೆಯವರ ಒತ್ತಾಸೆಯ ಮೇರೆಗೆ ಅವರದೇ ಯಜಮಾನಿಕೆಯ ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಮೂಲಕ ಯಕ್ಷಗಾನ ವೃತ್ತಿ ಜೀವನವನ್ನು ಆರಂಭಿಸಿದವರುಮಲ್ಪೆ ವಾಸುದೇವ ಸಾಮಗ.

ತದನಂತರದಲ್ಲಿ ಧರ್ಮಸ್ಥಳ. ಕದ್ರಿ, ಕರ್ನಾಟಕ, ಸುರತ್ಕಲ್ ಮೇಳಗಳಲ್ಲಿಯೂ ಸೇವೆಯನ್ನು ಸಲ್ಲಿಸಿದ್ದರು. ಗುಂಡ್ಮಿ ಕಾಳಿಂಗ ನಾವಡದ ಅವಧಿಯಲ್ಲಿ ಸಾಲಿಗ್ರಾಮ ಮೇಳವನ್ನು ಸೇರಿದ್ದ ಸಾಮಗರಿಗೆ ನಾಗಶ್ರೀಯ ಶುಭ್ರಾಂಗ, ಭಾನುತೇಜಸ್ವಿ, ಚೈತ್ರಪಲ್ಲವಿ ಸೇರಿದಂತೆ ಹಲವು ಪಾತ್ರಗಳ ಮೂಲಕ ಪ್ರಖ್ಯಾತಿಯನ್ನುತಂದುಕೊಟ್ಟಿತ್ತು. ಅಲ್ಲದೇ ಸ್ವಲ್ಪ ಸಮಯದ ಕಾಲ ಪೆರ್ಡೂರು ಮೇಳದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

ಯಕ್ಷಗಾನ ಕಲಾವಿದರಾಗಿ, ಅರ್ಥಧಾರಿಯಾಗಷ್ಟೇ ಅಲ್ಲಾ ಸೌಕೂರು ಹಾಗೂ ಬಗ್ವಾಡಿ ಬಯಲಾಟ ಯಕ್ಷಗಾನದ ಮೇಳಗಳ ಯಜಮಾನ ರಾಗಿಯೂ ಮೇಳಗಳನ್ನು ಮುನ್ನೆಡೆಸಿ ಸಿಹಿ, ಕಹಿಯನ್ನು ಉಂಡಿದ್ದಾರೆ.

Comments are closed.