ಭಾನುವಾರ, ಏಪ್ರಿಲ್ 27, 2025
Homekarnatakaಅರಬ್‌ ನಾಡಲ್ಲಿ ಕೆಎಂಎಫ್ ನಂದಿನಿ, ದುಬೈನಲ್ಲಿ ನೂತನ ನಂದಿನಿ ಕಫೆ ಮೂ ಆರಂಭ‌

ಅರಬ್‌ ನಾಡಲ್ಲಿ ಕೆಎಂಎಫ್ ನಂದಿನಿ, ದುಬೈನಲ್ಲಿ ನೂತನ ನಂದಿನಿ ಕಫೆ ಮೂ ಆರಂಭ‌

- Advertisement -

ದುಬೈ : ಕೆಎಂಎಫ್‌ (KMF) ನಂದಿನಿ (Nandini) ಕನ್ನಡಿಗರ ಹೆಮ್ಮೆ. ರುಚಿ, ಗುಣಮಟ್ಟದಿಂದಲೇ ಕರ್ನಾಟಕದ ಮನೆಮಾತಾಗಿರುವ ನಂದಿನ ಉತ್ಪನ್ನಗಳಿಗೆ ದೇಶ, ವಿದೇಶಗಳಲ್ಲಿಯೂ ಬಾರೀ ಬೇಡಿಕೆಯಿದೆ. ತಿಮ್ಮಪ್ಪನ ಪ್ರಸಾದಕ್ಕೆ ಅರ್ಪಿತವಾಗುತ್ತಿದ್ದ ನಂದಿನಿ ಇದೀಗ ತನ್ನ ವ್ಯಾಪ್ತಿಯನ್ನು ಅರಬ್‌ ರಾಷ್ಟ್ರಕ್ಕೂ ವ್ಯಾಪಿಸಿದೆ. ದುಬೈನಲ್ಲಿ (Dubai)  ಕೆಎಂಎಫ್‌ ನಂದಿನಿಯ ಮೊದಲ ನಂದಿನಿ ಕಫೆ ಮೂ (KMF Nandini Cafe Moo) ಆರಂಭಗೊಂಡಿದೆ.

KMF Nandini Cafe moo Opend in Dubai Good Response
Image Credit To Original Source

ದುಬೈನ ಪಸನ್ಸ್‌ ಸೂಪರ್‌ ಮಾರ್ಕೆಟ್‌ ನಲ್ಲಿ ನಂದಿನಿ ಕಫೆ ಮೂ ನೂತನ ಮಳಿಗೆಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸರಕಾರದ ರಾಯಭಾರಿಗಳು ಹಾಗೂ ದುಬೈನಲ್ಲಿ ನೆಲೆಸಿರುವ ಭಾರತೀಯರ ಜೊತೆಗೆ ಉದ್ಘಾಟಿಸಲಾಗಿದೆ ಎಂದು ಕೆಎಂಎಫ್‌ ನಂದಿನಿ ಟ್ವೀಟ್‌ ಮಾಡಿದೆ.‌

ಇದನ್ನೂ ಓದಿ : Shivarajkumar : ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಆಯ್ಕೆಗೊಂಡ ನಟ ಶಿವ ರಾಜ್‌ಕುಮಾರ್‌

ಇನ್ನು ನಂದಿನಿ ಉತ್ಪನ್ನ ಅರಬ್‌ ರಾಷ್ಟ್ರಕ್ಕೆ ಎಂಟ್ರಿ ಕೊಟ್ಟಿರುವುದು ಅಲ್ಲಿನ ನಿವಾಸಿಗಳಿಗೆ ಸಖತ್‌ ಖುಷಿ ಕೊಟ್ಟಿದೆ. ಅದ್ರಲ್ಲೂ ಕರ್ನಾಟಕದ ಜನತೆಗೆ ಮನೆಯ ಉತ್ಪನ್ನಗಳೇ ಸಿಕ್ಕಷ್ಟು ಸಂಭ್ರಮಿಸಿದ್ದಾರೆ. ನೂತನ ಮಳಿಗೆಗೆ ಉತ್ತಮ ಸ್ಪಂದನೆ ದೊರೆತಿದ್ದು, ನಂದಿನಿ ನಮ್ಮ ಹೆಮ್ಮೆ. ಸಪ್ತ ಸಾಗರದಾಚೆ ಹೀಗೆ ಸಾಗಲಿ ಅಂತಾನೂ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ :  ರಾಜ್ಯದಲ್ಲಿ ನಂದಿನಿ ಹಾಲು ಮೊಸರು ದುಬಾರಿ : ಎಷ್ಟೆಷ್ಟು ಏರಿಕೆಯಾಗಿದೆ ಗೊತ್ತಾ ?

ದುಬೈನಲ್ಲಿ ಆರಂಭವಾಗಿರುವ ನೂತನ ಮಳಿಗೆಯಲ್ಲಿ ನಂದಿನಿ ತುಪ್ಪ, ನಂದಿನಿ ಮಿಲ್ಕ್‌ ಶೇಖ್‌, ಐಸ್‌ ಕ್ರೀಂ, ಪೇಡಾ, ಸಲಾಡ್‌, ಪನ್ನಿರ್‌, ಸೇರಿದಂತೆ ವಿವಿಧ ಬಗೆಯ ಸ್ವೀಟ್‌ಗಳು, ನಂದಿನಿ ಖಾದ್ಯಗಳು ದೊರೆಯಲಿದೆ. ಕಫೆಯಲ್ಲಿ ಗ್ರಾಹಕರು ಕುಳಿತು ನಂದಿನಿಯ ಸವಿಯನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕೆಎಂಎಫ್‌ ರಾಜ್ಯದಲ್ಲಿ 13, ಹೊರ ರಾಜ್ಯದಲ್ಲಿ 8 ನಂದಿನಿ ಕಫೆ ಮೂಗಳನ್ನು ಆರಂಭಿಸಿದೆ.

KMF Nandini Cafe moo Opend in Dubai Good Response
Image credit To Original Source

ಇದನ್ನೂ ಓದಿ : ತಿರುಪತಿ ಲಡ್ಡಿಗಿಲ್ಲ ನಂದಿನಿ ತುಪ್ಪ 

1974 ರಲ್ಲಿ ಆರಂಭಗೊಂಡ ಕೆಎಂಎಫ್‌ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟವು ಸಹಕಾರಿ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಪ್ರತೀ ಜಿಲ್ಲೆಗಳಿಂದಲೂ ಕೆಎಂಎಫ್‌ ರೈತರಿಂದ ಹಾಲನ್ನು ಸಂಗ್ರಹಿಸುತ್ತಿದೆ. ಮಹಾನಗರಗಳಲ್ಲಿ ಕೆಎಂಎಫ್‌ ಸ್ವತಃ ಕಾರ್ಖಾನೆಯನ್ನು ಹೊಂದಿದ್ದು, ವಿವಿಧ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಹಾಸನ, ಮಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಡೈರಿಯನ್ನು ಹೊಂದಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಸರಕಾರದ ಈ ನಂಬರ್‌ಗೆ ಮೆಸೇಜ್‌ ಮಾಡಿದ್ರೆ ಜಮೆ ಆಗುತ್ತೆ ಹಣ

ಕೆಎಂಎಫ್‌ ನಂದಿನಿ ಬ್ರ್ಯಾಂಡ್‌ಗಳ ಮೇಲೆ ತುಪ್ಪ, ಹಾಲು, ಮೊಸರು, ಪೇಡಾ, ಪನ್ನಿರ್‌, ಮೈಸೂರ್‌ ಪಾಕ್‌, ಬರ್ಫಿ, ಸುವಾಸಿತ ಹಾಲು, ಐಸ್‌ ಕ್ರೀಂ, ಹಾಲಿನ ಪುಡಿ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ರೈತರಿಂದ ಹಾಲನ್ನು ನೇರವಾಗಿ ಪಡೆದು ಹಾಲಿನ ವಿವಿಧ ಉತ್ಪನ್ನಗಳನ್ನು ಸಿದ್ದ ಪಡಿಸುತ್ತಿದೆ. ಭಾರತದಲ್ಲಿ ನಂದಿನಿ ಉತ್ಪನ್ನಗಳಿಗೆ ಬಾರೀ ಬೇಡಿಕೆಯಿದೆ.

KMF Nandini Cafe moo Opend in Dubai Good Response. Karnataka Milk Federation Brand Nandini Produced Milk, Ghee and Milk Products

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular