Google Pixel 8 Series Launch LIVE : ಗೂಗಲ್ (Google Smart Phone) ಈಗಾಗಲೇ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದುಘೊಒಗಲೆ, ಈಗಾಗಲೇ ಗೂಗಲ್ ಫಿಕ್ಸೆಲ್ ಮೊಬೈಲ್ (Google Pixel Mobile) ಗ್ರಾಹಕರಿಗೆ ಪರಿಚಯಿಸಿದೆ. ಇಂದು ಗೂಗಲ್‌ನ ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 8 (Google Pixel 8) ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ (Google Pixel 8 Pro ) ಇಂದು ಭಾರತದಲ್ಲಿ ಬಿಡುಗಡೆ ಆಗಲಿದ್ದು, ಕಾರ್ಯಕ್ರಮವನ್ನು ಗೂಗಲ್ ವೆಬ್‌ಸೈಟ್ ( Google website ) ಮತ್ತು ಗೂಗಲ್ ಯೂಟ್ಯೂಬ್ ಚಾನೆಲ್ ನಲ್ಲಿ ( Google Youtube ನೇರಪ್ರಸಾರ ಮಾಡಲಿದೆ.

ಗೂಗಲ್ ಪಿಕ್ಸೆಲ್ 8 (Google Pixel 8 ) ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ (Google Pixel 8 Pro ) ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇಂದು ಸಂಜೆ 7:30ಕ್ಕೆ ಬಿಡುಗಡೆ ಸಮಾರಂಭವು ನಡೆಯಲಿದ್ದು, ಗೂಗಲ್‌ನ ಅಧಿಕೃತ ವೆಬ್‌ಸೈಟ್ ಹಾಗೂ ಯೂಟ್ಯೂಬ್ ಮೂಲಕ ನೇರಪ್ರಸಾರವನ್ನು ಗ್ರಾಹಕರು ವೀಕ್ಷಣೆ ಮಾಡಬಹುದಾಗಿದೆ.

ಈಗಾಗಲೇ ಗೂಗಲ್ ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಲಾಂಚಿಂಗ್ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ. Pixel 8 Pro Pixel 7 Pro ನಂತೆಯೇ 6.7-ಇಂಚಿನ ಡಿಸ್ಪ್ಲೇ ಒಳಗೊಂಡಿದೆ. ಆದ್ರೆ ಫಿಕ್ಸೆಲ್ 8 ಡಿಸ್ಪ್ಲೈ ಪ್ರೋಗಿಂತ ಸ್ವಲ್ಪ ಕಡಿಮೆ ಇದ್ದು, 6.17 ಇಂಚನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಕೇವಲ ರೂ.2999ಕ್ಕೆ ಐಪೋನ್ ಖರೀದಿಸಿ : ಐಪೋನ್ 15 ಲಾಂಚ್ ಬೆನ್ನಲ್ಲೇ ಐಪೋನ್ 11ರ ಮೇಲೆ ಬಾರೀ ಡಿಸ್ಕೌಂಟ್

ಫಿಕ್ಸೆಲ್ 8 ಪ್ರೋ (Pixel 8 Pro 50MP ವೈಡ್ ಲೆನ್ಸ್, ಮ್ಯಾಕ್ರೋ ಫೋಕಸ್‌ನೊಂದಿಗೆ 48MP ಅಲ್ಟ್ರಾವೈಡ್ ಲೆನ್ಸ್ ಮತ್ತು 5x ಟೆಲಿಫೋಟೋ ಲೆನ್ಸ್‌ನೊಂದಿಗೆ 48MP ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಗೂಗಲ್ ಫಿಕ್ಸೆಲ್ (Pixel 8 Pro) ದೇಹದ ಉಷ್ಣತೆಯನ್ನು ಓದುವ ವೈಶಿಷ್ಟ್ಯವನ್ನು ಹೊಂದಿದೆ.
ಸ್ಟ್ಯಾಂಡರ್ಡ್ ಪಿಕ್ಸೆಲ್ 8 ಅದರ ಹಿಂಭಾಗದಲ್ಲಿ 50MP ವೈಡ್ ಕ್ಯಾಮೆರ, ಅಲ್ಲದೇ 12MP ಅಲ್ಟ್ರಾವೈಡ್ ಲೆನ್ಸ್ ಜೊತೆಗೆ ಮ್ಯಾಕ್ರೋ ಫೋಕಸ್ ಒಳಗೊಂಡಿರಲಿದೆ. ಜೊತೆಗೆ ಮುಂಭಾದಲ್ಲಿ ಸೆಲ್ಪೀ ಪ್ರಿಯರಿಗಾಗಿ 10.5MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಈ ಹಿಂದೆ ಬಿಡುಗಡೆ ಆಗಿರುವ Pixel 7 ಮತ್ತು 7 Pro ನಲ್ಲಿ ಬಂದ 10.8MP ಸೆಲ್ಫಿ ಕ್ಯಾಮೆರಾಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8
Pixel 8 ಮತ್ತು 8 Pro HDR ತಂತ್ರಜ್ಞಾನವನ್ನು ಒಳಗೊಂಡಿದ್ದು, DSLR ರೀತಿಯಲ್ಲಿ ಪೋಟೋಗಳನ್ನು ಸೆರೆ ಹಿಡಿಯಲು ಸಹಕಾರಿಯಾಗಲಿದೆ. ಸದ್ಯಕ್ಕೆ ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ಗೂಗಲ್ ಹೊಸ ಮೊಬೈಲ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಗ್ರಾಹಕರ ಮನ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ.

ಇಷ್ಟೇ ವೈಶಿಷ್ಟ್ಯತೆಗಳು ಮಾತ್ರವಲ್ಲದೇ ಮ್ಯಾಜಿಕ್ ಎಡಿಟರ್ ಮತ್ತು “ಬೆಸ್ಟ್ ಟೇಕ್” ಅನ್ನೋ ವೈಶಿಷ್ಠ್ಯತೆಯನ್ನು ಒಳಗೊಂಡಿದೆ. ಜೊತೆಗೆ ಪಿಕ್ಸೆಲ್ 8 ಲೈನ್‌ಅಪ್‌ಗೆ ಬರುವ AI-ಚಾಲಿತ ಫೋಟೋ ಎಡಿಟಿಂಗ್ ವೈಶಿಷ್ಟ್ಯಯನ್ನು ಹೊಂದಿದೆ. ಗೂಗಲ್ ತನ್ನ ಇತ್ತೀಚಿನ ಪಿಕ್ಸೆಲ್ ಶ್ರೇಣಿ ಏಳು ವರ್ಷಗಳ ಸಾಫ್ಟವೇರ್‌ಗೆ ಬೆಂಬಲ ನೀಡಲಿದೆ. ಪಿಕ್ಸೆಲ್ 8 ಪ್ರೊ ಖರೀದಿಯೊಂದಿಗೆ ಉಚಿತ ಪಿಕ್ಸೆಲ್ ವಾಚ್ 2 ಅನ್ನು ಸಹ ಒಳಗೊಂಡಿರಬಹುದು.
ಇದನ್ನೂ ಓದಿ : ಕೇವಲ 10,399 ರೂ. ಖರೀದಿಸಿ ಐಪೋನ್ 13 : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಭರ್ಜರಿ ಆಫರ್
ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ Google Pixel 8, Google Pixel 8 Pro ಬೆಲೆ ಎಷ್ಟಿರಬಹುದು ಅನ್ನೋದನ್ನು ಇನ್ನೂ ನಿರ್ಧಾರ ಮಾಡಿಲ್ಲ. ಆದರೆ Google ನ ವರದಿಯ ಪ್ರಕಾರ, Google Pixel 8 ನ ಮೂಲ ಬೆಲೆ $ 699 (ಸುಮಾರು ರೂ 58,186) ಮತ್ತು Google Pixel 8 ನ ಆರಂಭಿಕ ಬೆಲೆ $ 999 ( ಸುಮಾರು 83,144 ರೂ) ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
Google Pixel 8 and pixel 8 pro Series Launch today LIVE in Google Website and Google Youtube Channel