ಕೇವಲ 10,399 ರೂ. ಖರೀದಿಸಿ ಐಪೋನ್‌ 13 : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಭರ್ಜರಿ ಆಫರ್‌

ಆಪಲ್‌ ಐಪೋನ್‌ 13 (Apple iPhone 13) ಸದ್ಯವೇ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ಸದ್ಯದಲ್ಲಿಯೇ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (flipkart big billion days sale 2023) ಆರಂಭಗೊಳ್ಳಲಿದೆ.

ಆಪಲ್‌ ಐಪೋನ್‌ 13 (Apple iPhone 13) ಸದ್ಯವೇ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ಸದ್ಯದಲ್ಲಿಯೇ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ (flipkart big billion days sale 2023) ಆರಂಭಗೊಳ್ಳಲಿದ್ದು, ದುಬಾರಿ ಐಪೋನ್‌ ಕೇವಲ 10,399 ರೂ.ಗೆ ಲಭ್ಯವಾಗಲಿದೆ.  2021 ರಲ್ಲಿ ಆಪಲ್‌ ಐಪೋನ್‌ 13 (Apple iPhone 13) ಬಿಡುಗಡೆ ಮಾಡಿದೆ.

ಆಪಲ್‌ ಐಪೋನ್‌ 13 ಆರಂಭಿಕ ಬೆಲೆ 79,900 ರೂಪಾಯಿ ಇದ್ದು, ಇದೀಗ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ರಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಲಿದೆ. ದಸರಾ ಹಬ್ಬ ಸಮೀಪಿಸುತ್ತಿದ್ದಂತೆಯೇ ಅಮೇಜಾನ್‌, ಫ್ಲಿಪ್‌ಕಾರ್ಟ್‌ ರಿಯಾಯಿತಿ ದರದಲ್ಲಿ ಮೊಬೈಲ್‌, ಟಿವಿ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಮೇಲೆ ಬಿಗ್‌ ಆಫರ್‌ ನೀಡುತ್ತಿದೆ.

Apple IPhone 13 Price Is Just Rs 10,399 Flipkart Big Billion Days Sale big Offer
Image Credit to Original Source

ಅದ್ರಲ್ಲೂ ಐ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಆಪಲ್‌ ಐಪೋನ್‌ 10,399 ರೂ. ಲಭ್ಯವಾಗಲಿದೆ. ಐಪೋನ್‌ ಖರೀದಿ ಮಾಡಲು ಆಸಕ್ತಿ ಹೊಂದಿರುವವರಿಗೆ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಅತ್ಯುತ್ತಮ ಅವಕಾಶವನ್ನು ಕಲ್ಪಿಸಲಿದೆ. ಕಳೆದ ವರ್ಷ ಫ್ಲಿಪ್‌ ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಭಾರೀ ರಿಯಾಯಿತಿಯನ್ನು ಘೋಷಣೆ ಮಾಡಿತ್ತು.

ಕಳೆದ ವರ್ಷ, Apple iPhone 13 ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗಿತ್ತು. ಆದರೆ ಈ ಬಾರಿ iPhone 13 ಜೊತೆಗೆ iPhone 14 ಕೂಡ ಆಕರ್ಷಕ ಬೆಲೆಯ ರಿಯಾಯಿತಿಯನ್ನು ನೀಡಲಿದೆ. ಸದ್ಯ Apple iPhone 13 ಇದೀಗ ಆಪಲ್‌ ಸ್ಟೋರ್‌ನಲ್ಲಿಯೂ ಅಗ್ಗದ ಬೆಲೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ : Googe Pixel 7 ಬೆಲೆಯಲ್ಲಿ ಇಳಿಕೆ : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಬಾರೀ ರಿಯಾಯಿತಿ

ಆಪಲ್‌ ಐಪೋನ್‌ 13 (Apple iPhone 13) ಇಲ್ಲಿಯ ವರೆಗೆ ಅತೀ ಹೆಚ್ಚು ಮಾರಾಟವಾದ ಐಪೋನ್‌ ಮಾದರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಕಳೆದ ಬಾರಿಯ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. Apple iPhone 15 ಸರಣಿ ಬಿಡುಗಡೆಯಾದ ಬೆನ್ನಲ್ಲೇ Apple iPhone 13 ಬೆಲೆಯಲ್ಲಿ ಗಣನೀಯವಾದ ಇಳಿಕೆಯನ್ನು ಕಂಡಿದೆ.

Apple IPhone 13 Price Is Just Rs 10,399 Flipkart Big Billion Days Sale big Offer
Image Credit to Original Source

ಅಕ್ಟೋಬರ್ 8 ರಿಂದ ಆರಂಭವಾಗಲಿರುವ ಫ್ಲಿಪ್‌ ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಆಪಲ್ ಐಫೋನ್ 14 ಪ್ರಮುಖ ಆಕರ್ಷಣೆಯಾಗಿದೆ. ಅದ್ರಲ್ಲೂ ಐಪೋನ್‌ 13 ಬೆಲೆ ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ ಎನ್ನಲಾಗುತ್ತಿದೆ. ಫ್ಲಿಪ್‌ಕಾರ್ಟ್ ಹಂಚಿಕೊಂಡ ಟೀಸರ್ ಪ್ರಕಾರ, Apple iPhone 13 ಇದುವರೆಗೆ ಕಡಿಮೆ ಬೆಲೆಗೆ ಮಾರಾಟದಲ್ಲಿ ಲಭ್ಯವಿರುತ್ತದ ಎಂದಿದೆ.

ಇದನ್ನೂ ಓದಿ : OnePlus ಸ್ಮಾರ್ಟ್‌ಪೋನ್‌ ಮೇಲೆ ಬಾರೀ ಡಿಸ್ಕೌಂಟ್‌ : ದೀಪಾವಳಿ ಡಿಸ್ಕೌಂಟ್‌ನಲ್ಲಿ ಯಾವ ಪೋನ್‌ಗೆ ಎಷ್ಟು ಬೆಲೆ

ಆದರೆ ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿರುವ ಟೀಸರ್ ನಲ್ಲಿ ಸ್ಮಾರ್ಟ್‌ ಪೋನ್‌ನ ನಿಜವಾದ ಬೆಲೆಯನ್ನು ರಿವೀಲ್‌ ಮಾಡಿಲ್ಲ. Apple iPhone 13 ಫ್ಲಿಪ್‌ಕಾರ್ಟ್‌ ನಲ್ಲಿ 49,501 ರೂಪಾಯಿಗಳ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಈ ಬಾರಿ ಹಬ್ಬದಲ್ಲಿ ಕೇವಲ 10,399 ರೂಗಳಲ್ಲಿ ಲಭ್ಯವಿರಲಿದೆ. Apple iPhone 13 ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 7,401 ರೂ ರಿಯಾಯಿತಿಯ ನಂತರ 52,499 ರೂಗಳಿಗೆ ಪಟ್ಟಿ ಮಾಡಲಾಗಿದೆ.

ಅಷ್ಟೇ ಅಲ್ಲದೇ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು Apple iPhone 13 ಬೆಲೆಯಲ್ಲಿ ಹೆಚ್ಚುವರಿಯಾಗಿ 2000 ರೂ. ಕೊಡುಗೆಯನ್ನು ಪಡೆಯಲಿದ್ದಾರೆ. ಜೊತೆಗೆ ಹಳೆಯ ಸ್ಮಾರ್ಟ್‌ಫೋನ್ ಅನ್ನು ರೂ.40,100 ಗೆ ವಿನಿಮಯ ಮಾಡಿಕೊಳ್ಳಬಹುದು.

Apple IPhone 13 Price Is Just Rs 10,399 Flipkart Big Billion Days Sale big Offer
Image Credit to Original Source

ಅಲ್ಲದೇ ಎಲ್ಲಾ ಕೊಡುಗೆಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ಖರೀದಿದಾರರು Apple iPhone 13 ಅನ್ನು ಫ್ಲಿಪ್‌ಕಾರ್ಟ್ ಮಾರಾಟದಿಂದ ಕೇವಲ 10,399 ರೂಗಳಿಗೆ ಪಡೆಯಬಹುದು.

Apple iPhone 13 ವೈಶಿಷ್ಟ್ಯಗಳು:
ಐಪೋನ್‌ ಖರೀದಿ ಮಾಡಲು ಆಸಕ್ತಿ ಹೊಂದಿರುವವರು Apple iPhone 13 ಮೊದಲ ಆಯ್ಕೆ ಮಾಡಬಹುದು. ಆಪಲ್‌ ಐಪೋನ್‌ (Apple iPhone 13) 4K Dolby Vision HDR ರೆಕಾರ್ಡಿಂಗ್‌ನೊಂದಿಗೆ 12MP ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

ಜೊತೆಗೆ ರಾತ್ರಿ ಮೋಡ್‌ನೊಂದಿಗೆ 12MP TrueDepth ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಈ ಮೊಬೈಲ್‌ನಲ್ಲಿ 17 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಸೌಲಭ್ಯವನ್ನು ಒಳಗೊಂಡಿದೆ. Apple iPhone 14 ಬೆಲೆಗೆ ಹೋಲಿಕೆ ಮಾಡಿದ್ರೆ iPhone 13 ಕಡಿಮೆ ಬೆಲೆಗೆ ಲಭ್ಯವಾಗಲಿದೆ.

Apple IPhone 13 Price Is Just Rs 10,399 Flipkart Big Billion Days Sale big Offer

Comments are closed.