ಇಂದು ಅಕ್ಟೋಬರ್ 07 2023, ಶನಿವಾರ. ದ್ವಾದಶ ರಾಶಿಗಳ ಮೇಲೆ ಇಂದು ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಜೊತೆಗೆ ಶಿವಯೋಗದಿಂದ (Shiva Yoga) ಹಲವು ರಾಶಿಗಳಿಗೆ ಅನುಕೂಲ ಕಲ್ಪಿಸುತ್ತದೆ. ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.
ಮೇಷರಾಶಿ ದಿನಭವಿಷ್ಯ
ಸಾಮಾಜಿಕ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತೀರಿ. ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ನಿಮ್ಮದಾಗಲಿದೆ. ತಂದೆಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಸ್ನೇಹಿತರ ಜೊತೆಗೆ ಶುಭ ಸಮಾರಂಭದಲ್ಲಿ ಭಾಗಿಯಾಗುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ವೃಷಭರಾಶಿ ದಿನಭವಿಷ್ಯ
ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ನಿರ್ಲಕ್ಷ್ಯದಿಂದ ನೀವು ಬಾರೀ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಕ್ಕೆ ತೆರಳುವಿರಿ. ಪಾಲುದಾರಿಕೆ ವ್ಯವಹಾರವನ್ನು ಮುಂದೂಡಿಕೆ ಮಾಡಿ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಹಾಗಾದ್ರೆ ಗುಡ್‌ನ್ಯೂಸ್, ಸರಕಾರದಿಂದ ಹೊಸ ರೂಲ್ಸ್
ಮಿಥುನರಾಶಿ ದಿನಭವಿಷ್ಯ
ವ್ಯಾಪಾರಿಗಳಿಗೆ ಹೊಸ ಉದ್ಯಮ ಆರಂಭಿಸಲು ಸಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಬೆಂಬಲ ದೊರೆಯಲಿದೆ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳು ಸಹಕಾರ ನೀಡಲಿದ್ದಾರೆ. ಈ ರಾಶಿಯವರು ಇಂದು ಯಾವುದೇ ಕೆಲಸ ಮಾಡಿದರೂ ಯಶಸ್ವಿ ಆಗುತ್ತಾರೆ.
ಕರ್ಕಾಟಕರಾಶಿ ದಿನಭವಿಷ್ಯ
ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ ಇರಲಿದೆ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ವಿಚಾರದಲ್ಲಿ ಇಂದು ಶುಭ ಸುದ್ದಿಯೊಂದನ್ನು ಕೇಳುವಿರಿ.
ಸಿಂಹರಾಶಿ ದಿನಭವಿಷ್ಯ
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಸಂಜೆಯ ವೇಳೆಗೆ ಅತಿಥಿಗಳು ಮನೆಗೆ ಆಗಮಿಸುವ ಸಾಧ್ಯತೆಯಿದೆ. ಇತರರಿಗೆ ಸಹಾಯ ಮಾಡುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಕನ್ಯಾರಾಶಿ ದಿನಭವಿಷ್ಯ
ಯಾವುದೇ ಕಾರಣಕ್ಕೂ ಆತುರದ ಕಾರ್ಯವನ್ನು ಮಾಡಬೇಡಿ. ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ ಕೂಡಿಬರಲಿದೆ. ಕುಟುಂಬದ ಸದಸ್ಯರ ಜೊತೆಗೆ ಜಗಳವಾಗುವ ಸಾಧ್ಯತೆಯಿದೆ. ದೂರ ಪ್ರಯಾಣ ನಿಮಗೆ ಇಂದು ಲಾಭವಾಗಿ ಪರಿಣಮಿಸಲಿದೆ

ತುಲಾರಾಶಿ ದಿನಭವಿಷ್ಯ
ಹೊಸ ಕೆಲಸ ಕಾರ್ಯಗಳಿಂದ ಇಂದು ಆರ್ಥಿಕ ಲಾಭ. ಆಸ್ತಿಗೆ ಸಂಬಂಧಿಸಿದ ವಿವಾದವೊಂದು ಬಗೆ ಹರಿಯಲಿದೆ. ಕುಟುಂಬದ ಸದಸ್ಯರ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಿ.
ವೃಶ್ಚಿಕರಾಶಿ ದಿನಭವಿಷ್ಯ
ಕುಟುಂಬ ಸದಸ್ಯರ ಜೊತೆಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳಲಿದೆ. ಮಕ್ಕಳ ಶಿಕ್ಷಣದ ವಿಚಾರವಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ನಿಮಗೆ ಇಂದು ಸುಲಭವಾಗಿ ಸಾಲ ದೊರೆಯಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಹಲವು ರೀತಿಯಲ್ಲಿ ಅನುಕೂಲರ.
ಇದನ್ನೂ ಓದಿ : ಹೊಸ ರೇಷನ್ ಕಾರ್ಡ್ : ರೇಷನ್ ಕಾರ್ಡ್ ತಿದ್ದುಪಡಿಗೆ ಈ ದಾಖಲೆಗಳು ಕಡ್ಡಾಯ
ಯಾರನ್ನೇ ನಂಬುವ ಮೊದಲು ಎಚ್ಚರಿಕೆಯನ್ನು ವಹಿಸಿ. ಸ್ನೇಹಿತರ ಜೊತೆಗೆ ದ್ವೇಷ ಮೂಡುವ ಸಾಧ್ಯತೆಯಿದೆ. ನಿಮ್ಮ ಕುಟುಂಬದವರಿಗಾಗಿ ಹಣವನ್ನು ಖರ್ಚು ಮಾಡುವಿರ ವ್ಯಾಪಾರಿಗಳಿಗೆ ಇಂದು ಹೊಸ ಅವಕಾಶಗಳು ದೊರೆಯಲಿದೆ.
ಮಕರರಾಶಿ ದಿನಭವಿಷ್ಯ
ಪಾಲುದಾರಿಕೆಯ ವ್ಯವಹಾರ ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ. ಮಕ್ಕಳ ಮದುವೆಗೆ ಇದ್ದ ಅಡೆತಡೆಗಳು ನಿವಾರಣೆ ಆಗಲಿದೆ. ಅವಿವಾಹಿತರಿಗೆ ಯೋಗ್ಯ ಮದುವೆಯ ಪ್ರಸ್ತಾಪಗಳು ಬರಲಿವೆ. ಉದ್ಯೋಗಿಗಳು ಕೆಲವೊಂದು ವಿಚಾರದಲ್ಲಿ ಚಿಂತೆಗೆ ಒಳಗಾಗುತ್ತಾರೆ.
ಇದನ್ನೂ ಓದಿ : ಸಪ್ತಪದಿ ತುಳಿಯದಿದ್ದರೆ ಹಿಂದೂ ವಿವಾಹ ಮಾನ್ಯವಲ್ಲ: ಹೈಕೋರ್ಟ್ ಆದೇಶ
ಕುಂಭರಾಶಿ ದಿನಭವಿಷ್ಯ
ಸಹೋದರರ ಸಲಹೆಯ ಮೇಲೆ ಹೊಸ ಉದ್ಯೋಗವನ್ನು ಆರಂಭಿಸಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಆಹಾರದ ವಿಚಾರದಲ್ಲಿ ಹೆಚ್ಚು ಜಾಗೃತೆಯನ್ನು ವಹಿಸಿ. ಹೊಂದಾಣಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮ.
ಮೀನರಾಶಿ ದಿನಭವಿಷ್ಯ
ಸ್ನೇಹಿತರಿಗೆ ಇಂದು ಸಹಾಯವನ್ನು ಮಾಡುವಿರಿ. ಹೊಸ ಹೂಡಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ಬುದ್ದಿವಂತಿಕೆಯಿಂದ ಮಾಡುವ ಕೆಲಸ ಕಾರ್ಯಗಳು ಇಂದು ನಿಮಗೆ ಫಲವನ್ನು ಕೊಡಲಿದೆ. ಕುಟುಂಬ ಸದಸ್ಯರ ಜೊತೆಗೂಡಿ ಭವಿಷ್ಯದ ಹೂಡಿಕೆಯನ್ನು ಮಾಡುವುದರಿಂದ ಲಾಭವಿದೆ.
Horoscope Today October 07 2023 Zordic Sign