ಸೋಮವಾರ, ಏಪ್ರಿಲ್ 28, 2025
HomeSportsCricketವಿಶ್ವಕಪ್‌ನಲ್ಲಿ 7-0 ಅಂತರ : ಭಾರತ ವಿರುದ್ದ ಇನ್ನೂ ಗೆದ್ದಿಲ್ಲ ಪಾಕಿಸ್ತಾನ : ಏನ್‌ ಹೇಳುತ್ತೆ...

ವಿಶ್ವಕಪ್‌ನಲ್ಲಿ 7-0 ಅಂತರ : ಭಾರತ ವಿರುದ್ದ ಇನ್ನೂ ಗೆದ್ದಿಲ್ಲ ಪಾಕಿಸ್ತಾನ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌, ಯಾರಿಗೆ ಗೆಲುವು ?

- Advertisement -

ಅಹಮದಾಬಾದ್‌ : ವಿಶ್ವಕಪ್‌ನಲ್ಲಿ (world Cup 2023) ಇಂದು ಭಾರತ – ಪಾಕಿಸ್ತಾನದ (India Vs Pakistan) ವಿರುದ್ದ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ (  Ahamedabad Narendra Modi stadium )ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು 1.20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಒಂದೆರಡು ಬದಲಾವಣೆಗಳ ಜೊತೆಗೆ ಕಣಕ್ಕೆ ಇಳಿಯಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ವಿಶ್ವಕಪ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಜಯಿಸಿವೆ. ಸದ್ಯ ಭಾರತ ವಿಶ್ವಕಪ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಭಾರತ ವಿರುದ್ದ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯ ಗೆದ್ದಿಲ್ಲ ಪಾಕಿಸ್ತಾನ

ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಹಲವು ಬಾರಿ ಮುಖಾಮುಖಿಯಾಗಿವೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಅತೀ ಹೆಚ್ಚು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ವಿಶ್ವಕಪ್‌ ಅಂಕಿ ಅಂಶಗಳನ್ನು ನೋಡಿದ್ರೆ ಭಾರತದ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪಾಕಿಸ್ತಾನ ಇದುವರೆಗೂ ಒಂದೇ ಒಂದು ಪಂದ್ಯಗಳನ್ನು ಜಯಿಸಿಲ್ಲ.

india vs pakistan 7-0 in World Cup Still not won against India Pakistan How is the pitch and weather report, who will win
Image Credit : BCCI

ಭಾರತ – ಪಾಕಿಸ್ತಾನ ಪಂದ್ಯ ಪಿಚ್‌ ರಿಪೋರ್ಟ್‌ :

ನರೇಂದ್ರ ಮೋದಿ ಸ್ಟೇಡಿಯಂನ ಹವಾಮಾನ ವರದಿಯ (Ahamedabad Stadium Weather Report) ಪ್ರಕಾರ  36 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ವಿದೆ. ಹಗಲು ರಾತ್ರಿಯ ಪಂದ್ಯವಾಗಿರುವ ಹಿನ್ನೆಲೆಯಲ್ಲಿ ಇಬ್ಬನಿಯು ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ. ಪಿಚ್‌ ಕಪ್ಪು ಬಣ್ಣದಿಂದ ಕೂಡಿದ್ದು, ಹಸಿರು ಹೊದಿಕೆಯನ್ನು ಒಳಗೊಂಡಿದೆ. ಇಲ್ಲಿನ ಪಿಚ್‌ನಲ್ಲಿ 330-340 ರನ್‌ ಗಳಿಸಲು ನೆರವಾಗಲಿದೆ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ಈ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಗ್‌ ಸ್ನೇಹಿಯಾಗಿದೆ. ಒಟ್ಟು 29 ಏಕದಿನ ಪಂದ್ಯಗಳು ನಡೆದಿದ್ದು, ಈ ಪೈಕಿ 16 ಬಾರಿ ಮೊದಲ ಬಾರಿಗೆ ಬ್ಯಾಟಿಂಗ್‌ ನಡೆಸಿದ ತಂಡ ಗೆಲುವು ದಾಖಲಿಸಿದ್ರೆ, 13 ಬಾರಿ ಎರಡನೇ ಬ್ಯಾಟಿಂಗ್‌ ನಡೆಸಿದ ತಂಡ ಜಯಿಸಿದೆ. ಈ ಮೈದಾನದಲ್ಲಿ 365 ಸರ್ವಾಧಿಕ ರನ್‌ ದಾಖಲಿಸಿದೆ. ಜೊತೆಗೆ ಎರಡನೇ ಬಾರಿಗೆ ಬ್ಯಾಟಿಂಗ್‌ ಮಾಡಿದ ತಂಡ 325 ರನ್‌ ಬಾರಿಸಿತ್ತು. ಈ ಪಿಚ್‌ನಲ್ಲಿ 85 ರನ್‌ ಕನಿಷ್ಠ ಮೊತ್ತವಾಗಿದೆ.

ಭಾರತ ತಂಡದಲ್ಲಿ ಏನು ಬದಲಾವಣೆ ?

ಭಾರತ ತಂಡಕ್ಕೆ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಸೇರ್ಪಡೆಯಾಗಲಿದ್ದಾರೆ. ಎರಡು ದಿನಗಳ ಕಾಲ ಅರ್ಧ ಗಂಟೆಗೂ ಅಧಿಕ ಕಾಲ ಅವರು ಅಭ್ಯಾಸ ನಡೆಸಿದ್ದಾರೆ. ನಾಯಕ ರೋಹಿತ್‌ ಶರ್ಮಾ ಕೂಡ ಶುಭಮನ್‌ ಗಿಲ್‌ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಗಿಲ್‌ ತಂಡಕ್ಕೆ ಸೇರಿಕೊಂಡ್ರೆ ಇಶಾನ್‌ ಕಿಶನ್‌ ತಂಡದಿಂದ ಹೊರ ನಡೆಯಲಿದ್ದಾರೆ. ಇನ್ನೊಂದೆಡೆಯಲ್ಲಿ ಶಾರ್ದೂಲ್‌ ಠಾಕೂರ್‌ ಹಾಗೂ ಆರ್‌.ಅಶ್ವಿನ್‌ ನಡುವೆ ಪೈಪೋಟಿ ಯಿದೆ.

india vs pakistan 7-0 in World Cup Still not won against India Pakistan How is the pitch and weather report, who will win
Image Credit : BCCI

ಇನ್ನು ಕುಲದೀಪ್‌ ಯಾದವ್‌ ಪಾಕಿಸ್ತಾನ ತಂಡದ ವಿರುದ್ದ ಉತ್ತಮ ಫರ್ಫಾಮೆನ್ಸ್‌ ನೀಡಿದ್ದಾರೆ. ಅದ್ರಲ್ಲೂ ಪಾಕಿಸ್ತಾನ ತಂಡದ ನಾಯಕ ಬಾಬಬರ್‌ ಅಜಂ ಅವರನ್ನು ಎರಡು ಬಾರಿ ಔಟ್‌ ಮಾಡಿದ್ದಾರೆ. ಇನ್ನೊಂದೆಡೆಯಲ್ಲಿ ಭಾರತ ಇಂದಿನ ಪಂದ್ಯದಲ್ಲಿ ವೇಗದ ಬೌಲರ್‌ಗಳನ್ನು ನೆಚ್ಚಿಕೊಳ್ಳುವ ಸಾಧ್ಯತೆಯಿದೆ.

ಭಾರತ ಸಂಭಾವ್ಯ XI :

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌

ಇದನ್ನೂ ಓದಿ : ಭಾರತ-ಪಾಕಿಸ್ತಾನ ಐಸಿಸಿ ವಿಶ್ವಕಪ್ ಪಂದ್ಯ : ಶುಭಮನ್‌ ಗಿಲ್ ಶೇ.99 ರಷ್ಟು ಲಭ್ಯ ಎಂದ ನಾಯಕ ರೋಹಿತ್ ಶರ್ಮಾ

ಪಾಕಿಸ್ತಾನ ತಂಡದಲ್ಲಿ ಏನು ಬದಲಾವಣೆ ?

ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ದ ಆಡಿದ ತಂಡವನ್ನೇ ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಶಾಹೀನ್‌ ಅಫ್ರಿದಿ ಭಾರತ ವಿರುದ್ದ ಉತ್ತಮ ಫರ್ಪಾಮೆನ್ಸ್‌ ತೋರಿಸಿದ್ದಾರೆ. ಹೀಗಾಗಿ ಪಾಕಿಸ್ತಾನ ಶಾಹಿನ್‌ ಅಫ್ರಿದಿ ಅವರನ್ನು ನೆಚ್ಚಿಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಬ್ಯಾಲೆನ್ಸ್‌ ಮಾಡುವ ಸಾಧ್ಯತೆಯಿದೆ.

india vs pakistan 7-0 in World Cup Still not won against India Pakistan How is the pitch and weather report, who will win
Image Credit : PCB

ಪಾಕಿಸ್ತಾನ ಸಂಭಾವ್ಯ XI : 

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (wk), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್

ಭಾರತ – ಪಾಕಿಸ್ತಾನ ಪಂದ್ಯ : ನಿಮಗಿದು ಗೊತ್ತೆ ?

ರೋಹಿತ್‌ ಶರ್ಮಾ ಅವರು ಈ ವರ್ಷ ಆಡಿದ ಏಕದಿನ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ 23 ಸಿಕ್ಸರ್‌ ಬಾರಿಸಿದ್ದಾರೆ. ಪಾಕಿಸ್ತಾನ ತಂಡ ಆಡಿದ ಕೊನೆಯ 20 ಏಕದಿನ ಪಂದ್ಯಗಳ ಪೈಕಿ ಪವರ್‌ ಪ್ಲೇನಲ್ಲಿ ಒಂದೇ ಒಂದೇ ಸಿಕ್ಸರ್‌ ಬಾರಿಸಿಲ್ಲ. ಪಾಕಿಸ್ತಾನ ವಿರುದ್ದ ಒಟ್ಟು ಎಂಟು ಪಂದ್ಯಗಳ ಪೈಕಿ ವಿರಾಟ್‌ ಕೊಹ್ಲಿ 50 ಕ್ಕೂ ಕಡಿಮೆ ಮೊತ್ತಕ್ಕೆ ಔಟಾಗಿದ್ದು ಒಂದು ಬಾರಿ ಮಾತ್ರ.

ವಿಶ್ವಕಪ್‌ 2023 ಕ್ಕೆ ತಂಡಗಳು :

ಭಾರತ ತಂಡ: ರೋಹಿತ್ ಶರ್ಮಾ (ನಾಯಕ ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್‌ ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ , ಸೂರ್ಯಕುಮಾರ್ ಯಾದವ್

ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್‌ ಕೀಪರ್)‌ , ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಘಾ ಸಲ್ಮಾನ್, ಫಖರ್ ಜಮಾನ್ , ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂ.

india vs pakistan 7-0 in World Cup Still not won against India Pakistan How is the pitch and weather report, who will win

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular