ಭಾರತ-ಪಾಕಿಸ್ತಾನ ಐಸಿಸಿ ವಿಶ್ವಕಪ್ ಪಂದ್ಯ : ಶುಭಮನ್‌ ಗಿಲ್ ಶೇ.99 ರಷ್ಟು ಲಭ್ಯ ಎಂದ ನಾಯಕ ರೋಹಿತ್ ಶರ್ಮಾ

ಶುಭಮನ್‌ ಗಿಲ್‌ (Shubman Gill Fit) ಡೆಂಗ್ಯೂ ಜ್ವರದ ಕಾರಣದಿಂದ ವಿಶ್ವಕಪ್‌ನಲ್ಲಿ(World Cup 2023)  ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಮಿಸ್‌ ಮಾಡಿಕೊಂಡಿದ್ದರು. ಆದ್ರೆ ಇದೀಗ ಭಾರತ ಹಾಗೂ ಪಾಕಿಸ್ತಾನ (india vs Pakistan) ವಿರುದ್ದದ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಖಚಿತ.

ಭಾರತ ಕ್ರಿಕೆಟ್‌ ತಂಡ ಯುವ ಪ್ರತಿಭಾನ್ವಿತ ಕ್ರಿಕೆಟ್‌ ಆಟಗಾರ ಶುಭಮನ್‌ ಗಿಲ್‌ (Shubman Gill Fit) ಡೆಂಗ್ಯೂ ಜ್ವರದ ಕಾರಣದಿಂದ ವಿಶ್ವಕಪ್‌ನಲ್ಲಿ(World Cup 2023)  ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಮಿಸ್‌ ಮಾಡಿಕೊಂಡಿದ್ದರು. ಆದ್ರೆ ಇದೀಗ ಭಾರತ ಹಾಗೂ ಪಾಕಿಸ್ತಾನ (india vs Pakistan) ವಿರುದ್ದದ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಖಚಿತ.

ಇಂದು ಭಾರತ ತಂಡ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವಕಪ್‌ 2023 ರಲ್ಲಿ ಭಾರತ ಮೂರನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ದ ಆಡಲಿದೆ. ಪಂದ್ಯಕ್ಕೂ ಮೊದಲು ಶುಕ್ರವಾರ ಭಾರತದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಅಭ್ಯಾಸದ ಅವಧಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಂ ಇಂಡಿಯಾ ಆಟಗಾರರ ಜೊತೆಗೆ ಶುಭಮನ್‌ ಗಿಲ್‌ ಅವರು ಕಠಿಣ ಅಭ್ಯಾಸವನ್ನು ನಡೆಸಿದ್ದಾರೆ. ಅಲ್ಲದೇ ಗಿಲ್‌ ಪಾಕಿಸ್ತಾನ ವಿರುದ್ದದ ಪಂದ್ಯವನ್ನು ಆಡಲು ಫಿಟ್‌ ಆಗಿದ್ದಾರೆ ಎಂಬ ಮಾಹಿತಿ ಟೀಂ ಇಂಡಿಯಾ ಮೂಲಗಳಿಂದ ಲಭ್ಯವಾಗಿದೆ. ಇನ್ನೊಂದೆಡೆಯಲ್ಲಿ ಭಾರತದ ತಂಡ ನಾಯಕ ರೋಹಿತ್‌ ಶರ್ಮಾ ಖುದ್ದು ಶುಭಮನ್‌ ಗಿಲ್‌ ಅವರ ಲಭ್ಯತೆಯನ್ನು ಬಹಿರಂಗ ಪಡಿಸಿದ್ದು, ಶೇ.99 ರಷ್ಟು ಅವರು ಇಂದಿನ ಪಂದ್ಯದಲ್ಲಿ ಆಡುತ್ತಾರೆ ಎಂದಿದ್ದಾರೆ.

Shubman gill 99 percent Available in india vs pakistan match ICC world Cup 2023 Says Rohit Sharma
Image Credit : iCC Twitter

ಪಾಕಿಸ್ತಾನ ವಿರುದ್ದದ ಪಂದ್ಯಕ್ಕೆ ಶುಭಮನ್‌ ಗಿಲ್‌ ಲಭ್ಯತೆಯಿಂದಾಗಿ ಭಾರತಕ್ಕೆ ದೊಡ್ಡ ತಲೆನೋವು ತಪ್ಪಿದಂತಾಗಿದೆ. ಶುಭಮನ್‌ ಗಿಲ್‌ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅದ್ರಲ್ಲೂ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಅವರು ಸಿಡಿದೇಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಈಗಾಗಲೇ ಹಲವರು ಬಾರಿ ದಾಖಲೆಯ ಜೊತೆಯಾಟವನ್ನು ನೀಡಿದ್ದಾರೆ.

ಇದನ್ನೂ ಓದಿ : ಶುಭಮನ್‌ ಗಿಲ್‌ ಇನ್‌, ಇಶಾನ್‌ ಕಿಶನ್‌ ಔಟ್‌, ಆದ್ರೆ ಭಾರತ – ಪಾಕಿಸ್ತಾನ ಪಂದ್ಯ ನಡೆಯೋದೇ ಅನುಮಾನ !

ಶುಭಮನ್‌ ಗಿಲ್‌ ಇಂದಿನ ಪಂದ್ಯವನ್ನು ಆಡುವುದರಿಂದ ಭಾರತ ತಂಡಕ್ಕೆ ಆರಂಭಿಕವಾಗಿ ಆನೆ ಬಲ ಬಂದಂತಾಗಿದೆ. ಭಾರತದ ಈ ಯುವ ಆಟಗಾರ ಆಸ್ಟ್ರೇಲಿಯಾ ವಿರುದ್ದ ಸರಣಿಯಿಂದಲೂ ಡೆಂಗ್ಯೂ ಜ್ವರದಿಂದ ಅವರು ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ವಿಶ್ವಕಪ್‌ನ ಆರಂಭಿಕ ಎರಡು ಪಂದ್ಯಗಳನ್ನು ಅವರು ಮಿಸ್‌ ಮಾಡಿಕೊಂಡಿದ್ದರು.

ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ದದ ಆಡಿದೆ. ಈ ವೇಳೆಯಲ್ಲಿ ಶುಭಮನ್‌ ಗಿಲ್‌ ಅವರು ಚೆನ್ನೈಗೆ ಆಗಮಿಸಿದ ವೇಳೆಯಲ್ಲಿ ಅವರಿಗೆ ಡೆಂಗ್ಯೂ ಸೋಂಕು ಉಲ್ಭಣಿಸಿತ್ತು. ಅಲ್ಲದೇ ಪ್ಲೇಟ್ಲೆಟ್‌ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ  ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ಮರುದಿನವೇ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದರೂ ಕೂಡ ಅವರನ್ನು ಬಿಸಿಸಿಐ ದೆಹಲಿಯಲ್ಲಿ ನಡೆದ ಅಪ್ಘಾನಿಸ್ತಾನ ವಿರುದ್ದ ಪಂದ್ಯದಿಂದ ಅವರನ್ನು ಹೊರಗಿಟ್ಟಿತ್ತು. ಆದರೆ ಅವರು ಗುರುವಾರ ಅಹಮದಾಬಾದ್‌ಗೆ ಆಗಮಿಸಿದ್ದರು. ನೇರವಾಗಿ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿ ಒಂದು ಗಂಟೆಗೂ ಅಧಿಕ ಕಾಲ ಅಭ್ಯಾಸವನ್ನು ನಡೆಸಿದ್ದಾರೆ.

Shubman gill 99 percent Available in india vs pakistan match ICC world Cup 2023 Says Rohit Sharma
Image Credit : Rohit Sharma Twitter

ಅಲ್ಲದೇ ನಂತರ ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (GCA) ಜೊತೆಗೆ ಆರು ನೆಟ್ ಬೌಲರ್‌ಗಳನ್ನು ಮತ್ತು ಸ್ಟಾರ್ ಓಪನರ್‌ಗಾಗಿ ಥ್ರೋಡೌನ್ ಸ್ಪೆಷಲಿಸ್ಟ್ ಅನ್ನು ವ್ಯವಸ್ಥೆಗೊಳಿಸಿದ್ದು, ಬ್ಯಾಟಿಂಗ್‌ ನೆಟ್‌ನಲ್ಲಿ ಕಠಿಣ ಅಭ್ಯಾಸವನ್ನು ನಡೆಸಿದ್ದಾರೆ.ಶುಭಮನ್‌ ಗಿಲ್‌ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದು ಟೀಂ ಇಂಡಿಯಾಕ್ಕೆ ಹೊಸ ಹುಮ್ಮಸ್ಸು ತಂದಿದೆ.

ಶುಭಮನ್‌ ಗಿಲ್‌ 2023ರಲ್ಲಿ ಅವರು 72.35ರ ಸರಾಸರಿಯನ್ನು ಹೊಂದಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು ಅರ್ಧ ಶತಕದೊಂದಿಗೆ ಅವರು 1230 ರನ್ ಗಳಿಸಿದ್ದಾರೆ. ಇನ್ನು ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅವರು ಐದು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಒಟ್ಟು 280 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಒಳಗೊಂಡಿವೆ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ಇನ್ನು ಐಪಿಎಲ್ ನಲ್ಲಿ ಶುಭಮನ್‌ ಗಿಲ್‌ ಗುಜರಾತ್ ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅದ್ರಲ್ಲೂ ಐಪಿಎಲ್ ಋತುವಿನಲ್ಲಿ ಒಂದೇ ಸ್ಥಳದಲ್ಲಿ (ಅಹಮದಾಬಾದ್) 572 ರನ್‌ ಗಳಿಸಿದ್ದಾರೆ. ಇದು ಒಂದೇ ಸ್ಥಳದಲ್ಲಿ ಆಟಗಾರ ಓರ್ವ ಬಾರಿಸಿರುವ ಅತ್ಯಧಿಕ ರನ್‌ ಆಗಿದೆ. ಅದ್ರಲ್ಲೂ ಐಪಿಎಲ್‌ನಲ್ಲಿ ಅಹಮದಾಬಾದ್‌ ಸ್ಟೇಡಿಯಂ ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ತವರು ಮೈದಾನ.

ಇನ್ನು ಶುಭಮನ್‌ ಗಿಲ್‌ ಆಡುವ ಬಳಗದಲ್ಲಿ ಕಾಣಿಸಿಕೊಂಡ್ರೆ ಇಶಾನ್‌ ಕಿಶನ್‌ ಅವರು ಬೆಂಚ್‌ ಕಾಯಬೇಕಾಗುತ್ತದೆ. ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಇಶಾನ್‌ ಕಿಶನ್‌ ಶೂನ್ಯಕ್ಕೆ ಔಟಾಗಿದ್ದರೆ, ಅಫ್ಘಾನಿಸ್ತಾನ ವಿರುದ್ಧ 47 ರನ್ ಗಳಿಸಿದ್ದರು. ಇಶಾನ್‌ ಕಿಶನ್‌ಗೆ ಹೋಲಿಕೆ ಮಾಡಿದ್ರೆ ಶುಭಮನ್‌ ಗಿಲ್‌ ಅತ್ಯಂತ ಪ್ರಭಾವಿ ಆಟಗಾರ ಎನಿಸಿಕೊಂಡಿದ್ದಾರೆ.

Shubman gill 99 percent Available in india vs pakistan match ICC world Cup 2023 Says Rohit Sharma

Comments are closed.