ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

Rachin Ravindra will join RCB for IPL 2024 : ಐಪಿಎಲ್‌ ಟ್ರೋಫಿಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB)  ತಂಡ ಇನ್ನೂ ಗೆದ್ದಿಲ್ಲ. ಈ ಬಾರಿ ತಂಡದಲ್ಲಿ ಬದಲಾವಣೆಗೆ ಆರ್‌ಸಿಬಿ ಮುಂದಾಗಿದ್ದು, ಬೆಂಗಳೂರು ಮೂಲದ ನ್ಯೂಜಿಲೆಂಡ್‌ ಆಟಗಾರ ರಾಚಿನ್‌ ರವೀಂದ್ರ (Rachin Ravindra) ಆರ್‌ಸಿಬಿ ಸೇರುವ ಸಾಧ್ಯತೆಯಿದೆ.

ಇಂಡಿಯನ ಪ್ರೀಮಿಯರ್‌ ಲೀಗ್‌ ( IPL 2024) ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲೊಂದು. ಇಂತಹ ಐಪಿಎಲ್‌ ಟ್ರೋಫಿಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB)  ತಂಡ ಇನ್ನೂ ಗೆದ್ದಿಲ್ಲ. ಈ ಬಾರಿ ತಂಡದಲ್ಲಿ ಬದಲಾವಣೆಗೆ ಆರ್‌ಸಿಬಿ ಮುಂದಾಗಿದ್ದು, ಬೆಂಗಳೂರು ಮೂಲದ ನ್ಯೂಜಿಲೆಂಡ್‌ ಆಟಗಾರ ರಚಿನ್‌ ರವೀಂದ್ರ (Rachin Ravindra) ಆರ್‌ಸಿಬಿ ಸೇರುವ ಸಾಧ್ಯತೆಯಿದೆ.

ಬೆಂಗಳೂರು ಮೂಲದ ರಚಿನ್‌ ರವೀಂದ್ರ ನ್ಯೂಜಿಲೆಂಡ್‌ ತಂಡದ ಆರಂಭಿಕ ಆಟಗಾರ. ಅಷ್ಟೇ ಅಲ್ಲಾ ಖ್ಯಾತ ಆಲ್‌ರೌಂಡರ್‌ ಕೂಡ ಹೌದು. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಮಿಂಚು ಹರಿಸುತ್ತಿರುವ ರಚಿನ್‌ ರವೀಂದ್ರ ಚೊಚ್ಚಲ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ.

Rachin Ravindra will join RCB for IPL 2024
Image Credit to Original Source

ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ರವೀಂದ್ರ, ಆರ್ಥೋಡಾಕ್ಸ್‌ ಲೆಫ್ಟ್‌ ಆರ್ಲ್‌ ಬೌಲರ್.‌ ಈಗಾಗಲೇ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿಯೂ ರಾಚಿನ್‌ ರವೀಂದ್ರ ನ್ಯೂಜಿಲೆಂಡ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಸದ್ಯ ನ್ಯೂಜಿಲೆಂಡ್‌ ತಂಡದ ಖಾಯಂ ಆಟಗಾರನಾಗುವತ್ತ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ ಕ್ರಿಕೆಟ್‌ : ಇಂಗ್ಲೆಂಡ್‌ ವಿರುದ್ದ ನ್ಯೂಜಿಲೆಂಡ್‌ಗೆ ಗೆಲುವು, ಕಿವೀಸ್ ಪರ ಬೆಂಗಳೂರಿನ ರಾಚಿನ್‌ ರವೀಂದ್ರ ಚೊಚ್ಚಲ ಶತಕ

ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ 96 ಎಸೆತಗಳನ್ನು ಎದುರಿಸಿರುವ ರಾಚಿನ್‌ ರವೀಂದ್ರ 123 ರನ್‌ ಬಾರಿಸಿದ್ದಾರೆ. ಇದರಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್‌ ಒಳಗೊಂಡಿದೆ. ಇನ್ನು ಬೌಲಿಂಗ್‌ನಲ್ಲಿಯೂ ಮಿಂಚು ಹರಿಸಿದ್ದು, ಪಂದ್ಯದಲ್ಲಿ ಒಟ್ಟು 10 ಓವರ್‌ ಬೌಲಿಂಗ್‌ ಮಾಡಿದ್ದು, 76 ರನ್‌ ನೀಡಿ 1 ವಿಕೆಟ್‌ ಕಬಳಿಸಿದ್ದಾರೆ.

ಇನ್ನು ನೆದರ್‌ಲ್ಯಾಂಡ್‌ (nedrarland) ವಿರುದ್ದದ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿರುವ ರಾಚಿನ್‌ ರವೀಂದ್ರ 51 ರನ್‌ ಬಾರಿಸಿದ್ದಾರೆ. ಇದರಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಬಾರಿಸಿದ್ದಾರೆ. ಅಲ್ಲದೇ 10 ಓವರ್‌ ಬೌಲಿಂಗ್‌ ಮಾಡಿದ್ದು 46 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ. ಇಂದು ನ್ಯೂಜಿಲೆಂಡ್‌ ತಂಡ ಬಾಂಗ್ಲಾದೇಶದ (New Zealand Vs Bangladesh) ವಿರುದ್ದ ಪಂದ್ಯಗಳನ್ನು ಆಡಲಿದೆ.

ಆರ್‌ಸಿಬಿ ತಂಡಕ್ಕೆ ರಚಿನ್‌ ರವೀಂದ್ರ ?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಇದುವರೆಗೂ ಪ್ರಶಸ್ತಿ ಗೆದ್ದಿಲ್ಲ. ನಾಯಕತ್ವ, ತಂಡ ಬದಲಾವಣೆ ಮಾಡಲು ಇದು ಸಾಧ್ಯವಾಗಿರಲಿಲ್ಲ. ಇದೀಗ ಟೀಂ ಮ್ಯಾನೇಜ್ಮೆಂಟ್‌, ಕೋಚ್‌ ಎಲ್ಲಾ ವಿಭಾಗದಲ್ಲಿಯೂ ಬದಲಾವಣೆ ಮಾಡಿದೆ.

Rachin Ravindra will join RCB for IPL 2024
Image Credit to Original Source

ಶತಾಯಗತಾಯ 2024 ರ ಐಪಿಎಲ್‌ ಪಂದ್ಯಾವಳಿಯನ್ನು ಗೆಲ್ಲಲೇ ಬೇಕು ಅಂತಾ ಹಠತೊಟ್ಟಿರುವ ಆರ್‌ಸಿಬಿ ತಂಡ ಇದೀಗ ಬೆಂಗಳೂರು ಮೂಲಕ ನ್ಯೂಜಿಲೆಂಡ್‌ ಆಟಗಾರ ರಾಚಿನ್‌ ರವೀಂದ್ರ ಮೇಲೆ ಕಣ್ಣಿಟ್ಟಿದೆ. ಮುಂದಿನ ಐಪಿಎಲ್‌ನಲ್ಲಿ ರಾಚಿನ್‌ ರವೀಂದ್ರ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ : ಇಲ್ಲಿದೆ ಭಾರತದ ಪ್ಲೇಯಿಂಗ್‌ XI

ನ್ಯೂಜಿಲೆಂಡ್‌ನಲ್ಲಿ ಜನಿಸಿದ್ದರೂ ಕೂಡ ರಾಚಿನ್‌ ರವೀಂದ್ರ ಭಾರತಕ್ಕೆ ಬಂದಾಗ ಇಲ್ಲಿನ ಅಭ್ಯಾಸವನ್ನು ನಡೆಸಿದ್ದಾರೆ. ಇನ್ನು ಭಾರತದ ಪಿಚ್‌ ಬಗ್ಗೆಯೂ ರಾಚಿನ್‌ ರವೀಂದ್ರ ಅವರಿಗೆ ಅನುಭವವಿದೆ. ಭಾರತದ ಪಿಚ್‌ಗಳಿಗೆ ರಚಿನ್‌ ಬಹುಬೇಗನೇ ಹೊಂದಿಕೊಳ್ಳುತ್ತಾರೆ.

ಆರ್‌ಸಿಬಿ ತಂಡಕ್ಕೆ ರಾಚಿನ್‌ ರವೀಂದ್ರ ಉತ್ತಮ ಆಯ್ಕೆಯಾಗಲಿದ್ದಾರೆ. ಆರಂಭಿಕ ಆಟಗಾರನಾಗಿ ಜೊತೆಗೆ ಸ್ಪಿನ್‌ ಬೌಲಿಂಗ್‌ ನಲ್ಲಿ ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಈ ಯುವ ಆಲ್‌ರೌಂಡರ್‌ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ.

ಯಾರು ಈ ರಾಚಿನ್‌ ರವೀಂದ್ರ ?

ರಾಚಿನ್‌ ರವೀಂದ್ರ ಬೆಂಗಳೂರು ಮೂಲದ ರವಿಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ. 2021 ರಲ್ಲಿಯೇ ಭಾರತದಲ್ಲಿಯೇ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಟೆಸ್ಟ್‌, ಏಕದಿನ ಹಾಗೂ ಟಿ20 ತಂಡದಲ್ಲಿಯೂ ಸ್ಥಾನ ಪಡೆದಿರುವ ರಾಚಿನ್‌ ರವೀಂದ್ರ ಇದೀಗ ಭಾರತದಲ್ಲಿಯೇ ಚೊಚ್ಚಲ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ರಾಚಿನ್‌ ರವೀಂದ್ರ ಅವರ ತಂದೆ ತಾಯಿ ವೆಲ್ಲಿಂಗ್ಟನ್‌ನಲ್ಲಿ ನೆಲೆಸಿದ್ದಾರೆ. ರಾಚಿನ್‌ ರವೀಂದ್ರ ಅವರ ತಂದೆ ರವಿಕಷ್ಣಮೂರ್ತಿ ಅವರು ರಾಹುಲ್‌ ದ್ರಾವಿಡ್‌ (Rahul Dravid) ಹಾಗೂ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ಅಭಿಮಾನಿ. ಇದೇ ಕಾರಣಕ್ಕೆ ತಮ್ಮ ಮಗನಿಗೆ ರಾಹುಲ್‌ ದ್ರಾವಿಡ್‌ ಅವರ ಮೊದಲ ಅಕ್ಷರ RA ಹಾಗೂ ಸಚಿನ್‌ ಹೆಸರಿನ ಕೊನೆಯ ಎರಡು ಅಕ್ಷರವನ್ನು Chin ಸೇರಿಸಿಕೊಂಡು ರಾಚಿನ್‌ ರವೀಂದ್ರ ಎಂದು ಹೆಸರಿಟ್ಟಿದ್ದಾರೆ.

ನ್ಯೂಜಿಲೆಂಡ್‌ ತಂಡದ ಯುವ ಭರವಸೆಯ ಆಟಗಾರ ಎನಿಸಿಕೊಂಡಿರುವ 23 ವರ್ಷದ ರಾಚಿನ್‌ ರವೀಂದ್ರ ಆಟಕ್ಕೆ ಭಾರತೀಯರು ಫಿದಾ ಆಗಿದ್ದಾರೆ. ರಾಚಿನ್‌ ರವೀಂದ್ರ ಕೇವಲ ಬ್ಯಾಟ್ಸಮನ್‌ ಮಾತ್ರವಲ್ಲ, ಆಲ್‌ರೌಂಡರ್‌ ಕೂಡ. ಮೂರು ಮಾದರಿಯ ಕ್ರಿಕೆಟ್‌ನಲ್ಲಿಯೂ ರಾಚಿನ್‌ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.

IPL 2023 : RCB ತಂಡ

ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಜೋಶ್‌ ಹಜಲ್‌ವುಡ್ ಕೌಲ್, ಆಕಾಶ್ ದೀಪ್, ಹಿಮಾಂಶು ಶರ್ಮಾ, ವಿಜಯ್‌ಕುಮಾರ್ ವೈಶಾಕ್, ಮೈಕಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.

Rachin Ravindra will join RCB for IPL 2024

Comments are closed.