ಭಾನುವಾರ, ಏಪ್ರಿಲ್ 27, 2025
Homeagricultureಕೇವಲ 3.5 ಗಂಟೆಗಳ ವೇಗದ ಚಾರ್ಜಿಂಗ್‌ : ಸೋನಾಲಿಕಾ ಎಲೆಕ್ಟ್ರಿಕ್‌ ಹೊಸ ಟ್ರ್ಯಾಕ್ಟರ್ ಬಿಡುಗಡೆ ಮಾಡಿದ...

ಕೇವಲ 3.5 ಗಂಟೆಗಳ ವೇಗದ ಚಾರ್ಜಿಂಗ್‌ : ಸೋನಾಲಿಕಾ ಎಲೆಕ್ಟ್ರಿಕ್‌ ಹೊಸ ಟ್ರ್ಯಾಕ್ಟರ್ ಬಿಡುಗಡೆ ಮಾಡಿದ ಐಟಿಎಲ್

- Advertisement -

ಎಲೆಕ್ಟ್ರಿಕ್‌ ಕಾರು, ಬಸ್ಸುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಮಾಡಿವೆ. ಇದೀಗ ಎಲೆಕ್ಟ್ರಿಕ್‌ ಕಾರುಗಳು ಕೂಡ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸೋನಾಲಿಯಾ ಟ್ರ್ಯಾಕ್ಟರ್‌ ( Sonalika Electric tractor ITL) ಹೆಸರಲ್ಲಿ ಇಂಟರ್‌ನ್ಯಾಷನಲ್‌ ಟ್ರ್ಯಾಕ್ಟರ್‌ ಲಿಮಿಟೆಡ್‌ (ITL) ಅತ್ಯಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಅನ್ನು ಮುಂದಿನ ಮೂರು ವರ್ಷಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಕಂಪೆನಿಯು ಯೋಜನೆಯನ್ನು ರೂಪಿಸಿದೆ. ಐಟಿಎಲ್‌ ಸದ್ಯದಲ್ಲಿಯೇ ಐದು ಹೊಸ ಟ್ರ್ಯಾಕ್ಟರ್‌ಗಳನ್ನು ಬಿಡುಗಡೆ ಮಾಡಲಿದ್ದು, ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ಗಳನ್ನು ಎಸ್‌ಬಿ ಮಾದರಿಯಲ್ಲಿ ಬಿಡುಗಡೆ ಮಾಡಲಿದೆ.

ITL ಕಂಪೆನಿಯ ಸೋಲಿಸ್‌ ( Solis) ಬ್ರ್ಯಾಂಡ್ ಟ್ರಾಕ್ಟರ್‌ಗಳು ಅಮೇರಿಕಾ, ಯುರೋಪ್‌, ಆಫ್ರಿಕಾ ಹಾಗೂ ಸೌತ್‌ ಅಮೇರಿಕಾದಲ್ಲಿ ಲಭ್ಯವಿದೆ. ಐಟಿಎಲ್‌ ಸೋಲಿಸ್‌ ಮಾದರಿಯಲ್ಲಿ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಲಭ್ಯವಿದ್ದು, ಎಸ್‌ ಸರಣಿ, ಸಿ ಸರಣಿ, ಎಚ್‌ ಸರಣಿ ಹಾಗೂ ಎನ್‌ ಸರಣಿಯಲ್ಲಿ ಟ್ರ್ಯಾಕ್ಟರ್‌ ಬಿಡುಗಡೆ ಆಗಲಿದೆ.

ಇದನ್ನೂ ಓದಿ : ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಅಡ್ವೆಂಚರ್ ಹೊಸ ಬೈಕ್: ಮೊದಲ ಲುಕ್‌ಗೆ ಗ್ರಾಹಕರು ಫೀದಾ

ಅಕ್ಟೋಬರ್‌ 14 ರಂದು ಗುರ್‌ಗಾವ್‌ನಲ್ಲಿ ನಡೆದ ಸಮಾರಂಭದಲ್ಲಿ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ. ಅದ್ರಲ್ಲೂ ಎಸ್‌ವಿ ಸರಣಿ ಯಲ್ಲಿನ ಟ್ರ್ಯಾಕ್ಟರ್‌ಗಳು ಅತ್ಯಂತ ವೇಗದ ಚಾರ್ಜಿಂಗ್‌ ಸಪೋರ್ಟ್‌ ನೀಡಲಿದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಸಂಪೂರ್ಣ ಚಾರ್ಜ್‌ ಆಗಲು ಕನಿಷ್ಠ 8 ಗಂಟೆಯ ಸಮಯವನ್ನು ತೆಗೆದುಕೊಳ್ಳುತ್ತದೆ.

Fast charging in just 3.5 hours Sonalika Electric launches new tractor ITL
Image Credit to Original Source

ಆದರೆ ಸೋನಾಲಿಕಾ ಎಸ್‌ವಿ ಟ್ರ್ಯಾಕ್ಟರ್‌ ಕೇವಲ 3 ರಿಂದ 3.5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್‌ ಆಗುತ್ತದೆ. ಫಾಸ್ಟ್‌ ಚಾರ್ಜಿಂಗ್‌ ಅನುಕೂಲರವಾದ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎಚ್‌ ಸರಣಿ, ಎಸ್‌ ಸರಣಿ ಹಾಗೂ ಸೊಲಿಸ್‌ ಸರಣಿಯ ಟ್ತ್ಯಾಕ್ಟರ್‌ಗಳು ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ದೊರೆಯಲಿವೆ.

ಇದನ್ನೂ ಓದಿ : ಕೇವಲ ರೂ 6.50 ಲಕ್ಷ ಬೆಲೆಗೆ ಭಾರತದಲ್ಲಿ ಬಿಡುಗಡೆ ಆಯ್ತು ನಿಸ್ಸಾನ್ ಮ್ಯಾಗ್ನೈಟ್ EZ-Shift AMT

ಆದರೆ ಸಿ ಸರಣಿಯ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಯುರೋಪ್‌ ಹಾಗೂ ಎನ್‌ ಸರಣಿಯ ಟ್ರ್ಯಾಕ್ಟರ್‌ ಯೂರೋಪ್‌, ಅಮೇರಿಕಾ, ಸೌತ್‌ ಅಮೇರಿಕಾ ಹಾಗೂ ಆಫ್ರಿಕಾಗಳಲ್ಲಿ ದೊರೆಯಲಿದೆ. ಸದ್ಯ ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಜೊತೆಗೆ ಕೃಷಿ ಕಾರ್ಯಗಳಲ್ಲಿ ಹೆಚ್ಚಾಗಿ ಬಳಕೆ ಆಗುತ್ತಿದೆ.

ಈ ಕುರಿತು ಮಾತನಾಡಿರುವ, ಐಟಿಎಲ್‌ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಸುಶಾಂತ್‌ ಸಾಗರ್‌ ಮಿತ್ತಲ್‌, ಮಾತನಾಡಿ, ಕಂಪೆನಿಯು ಟ್ರ್ಯಾಕ್ಟರ್‌ ಉತ್ಪಾದನೆಗಾಗಿ 850 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡುತ್ತಿದೆ. ಈ ಹಣದಲ್ಲಿ ಹೊಸ ಟ್ರ್ಯಾಕ್ಟರ್‌ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಸಂಶೋಧನೆ ತ್ತು ತಂತ್ರಜ್ಞಾನದ ಅಭಿವೃದ್ದಿಗಾಗಿ ಹೆಚ್ಚುವರಿಯಾಗಿ 150 ಕೋಟಿ ಹಣವನ್ನು ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಪಿಎಂ ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 8,000 ರೂ.: ಪ್ರಧಾನಿ ನರೇಂದ್ರ ಮೋದಿ ಬಿಗ್‌ ಗಿಫ್ಟ್‌

ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಬಿಡುಗಡೆ ಮಾಡಿರುವ ಐಟಿಲೆ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ರಾಹುಲ್‌ ಮಿತ್ತಲ್‌ ಅವರು ಮಾತನಾಡಿ, ಯುರೋಪ್‌ನ ವಿನ್ಯಾಸ, ಜಪಾನಿನ ಕ್ವಾಲಿಟಿ ಹಾಗೂ ಭಾರತದ ಉತ್ಪಾದನಾ ವೆಚ್ಚವನ್ನು ಸಂಯೋಜಿಸುವ ಮೂಲಕ ನಾವು ಲಾಭವನ್ನು ಕಂಡಿದ್ದೇವೆ. ಭವಿಷ್ಯದಲ್ಲಿ ವಿಶ್ವ ಅತೀ ದೊಡ್ಡ ಟ್ರ್ಯಾಕ್ಟರ್‌ ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಲು ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.

Fast charging in just 3.5 hours Sonalika Electric launches new tractor ITL
Image Credit to Original Source

ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ನ ವೈಶಿಷ್ಟ್ಯಗಳು :

  1. ಉತ್ತಮ ಗುಣಮಟ್ಟದ ಬ್ಯಾಟರಿಯನ್ನು 10 ಗಂಟೆಗಳಲ್ಲಿ ಸಾಮಾನ್ಯ ಹೋಮ್ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸುಲಭವಾಗಿ ಚಾರ್ಜ್ ಮಾಡಬಹುದು.
  2. ಟೈಗರ್ ಎಲೆಕ್ಟ್ರಿಕ್ ಅನ್ನು ಕೇವಲ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದಾದ ವೇಗದ ಚಾರ್ಜಿಂಗ್ ಆಯ್ಕೆಯನ್ನು ಕಂಪನಿಯು ನೀಡುತ್ತದೆ.
  3. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳಿಗೆ ಹೋಲಿಸಿದರೆ ಇದು ಪರಿಸರ ಸ್ನೇಹ ಜೊತೆಗೆ ಆರ್ಥಿಕವಾಗಿಯೂ ಲಾಭದಾಯಕ. ಚಾಲನೆಯ ವೆಚ್ಚದಲ್ಲಿ ಸುಮಾರು 75% ರಷ್ಟು ಕಡಿಮೆಯಾಗಿದೆ.
  4. ಶಕ್ತಿ-ಸಮರ್ಥ, ಜರ್ಮನ್ ವಿನ್ಯಾಸ ಎಟ್ರಾಕ್ ಮೋಟಾರ್ ಹೆಚ್ಚಿನ ಶಕ್ತಿ ಸಾಂದ್ರತೆ ಮತ್ತು ಗರಿಷ್ಠ ಟಾರ್ಕ್ ಅನ್ನು 24.93 kmph ಮತ್ತು 8 ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ನೀಡುತ್ತದೆ.
  5. ಟ್ರಾಕ್ಟರ್ ಅನ್ನು ಸೋನಾಲಿಕಾದ ಟ್ರಾಕ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ, ಇದು ರೈತ ಸ್ನೇಹಿ ಮತ್ತು ಎಲ್ಲಾ ಸಮಯದಲ್ಲೂ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಬಳಸಲು ಸುಲಭವಾಗಿದೆ.
  6. ಸೋನಾಲಿಕಾ ಟೈಗರ್ ಎಲೆಕ್ಟ್ರಿಕ್ ಟ್ರಾಕ್ಟರ್ 5000 ಗಂಟೆಗಳ/5 ವರ್ಷಗಳ ವಾರಂಟಿಯನ್ನು ನೀಡುತ್ತದೆ.
  7. ಟೈಗರ್ ಎಲೆಕ್ಟ್ರಿಕ್ ರೈತರಿಗೆ ಉತ್ತಮ ಸೌಕರ್ಯವನ್ನು ನೀಡುತ್ತದೆ.
  8. ಟ್ರಾಕ್ಟರ್ ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಒಳಗೊಂಡಿದೆ.

Fast charging in just 3.5 hours Sonalika Electric launches new tractor ITL

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular