ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ : 3.5 ಕೋಟಿ Realtime ವೀಕ್ಷಣೆ : ಜಾಗತಿಕ ಸ್ಟ್ರೀಮಿಂಗ್‌ ದಾಖಲೆ ಬರೆದ ಡಿಸ್ನಿ ಹಾಟ್‌ಸ್ಟಾರ್‌

ರೋಹಿತ್‌ ಶರ್ಮಾ (Rohit Sharma) ಸಿಕ್ಸರ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಇದೀಗ ಭಾರತ - ಪಾಕಿಸ್ತಾನ ಪಂದ್ಯವನ್ನು 3.5 ಕೋಟಿ ಏಕಕಾಲದಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ ಡಿಸ್ನಿ ಹಾಟ್‌ಸ್ಟಾರ್‌ (Disney+ Hotstar)  ಜಾಗತಿಕ ಸ್ಟ್ರೀಮಿಂಗ್‌ನಲ್ಲಿ ವಿಶ್ವದಾಖಲೆ ಬರೆದಿದೆ.

ವಿಶ್ವಕಪ್‌ನಲ್ಲಿ (world Cup 2023) ಭಾರತ ಪಾಕಿಸ್ತಾನ (india vs Pakistan)ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. ರೋಹಿತ್‌ ಶರ್ಮಾ (Rohit Sharma) ಸಿಕ್ಸರ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಇದೀಗ ಭಾರತ – ಪಾಕಿಸ್ತಾನ ಪಂದ್ಯವನ್ನು 3.5 ಕೋಟಿ ಏಕಕಾಲದಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ ಡಿಸ್ನಿ ಹಾಟ್‌ಸ್ಟಾರ್‌ (Disney+ Hotstar)  ಜಾಗತಿಕ ಸ್ಟ್ರೀಮಿಂಗ್‌ನಲ್ಲಿ ವಿಶ್ವದಾಖಲೆ ಬರೆದಿದೆ.

ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವನ್ನು ಮೈದಾನದಲ್ಲಿಯೇ 1.20 ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡಿದ್ದಾರೆ. ಇದೀಗ ಆನ್‌ಲೈನ್‌ ಸ್ಟ್ರೀಮಿಂಗ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಕಾಳಗವನ್ನು ಬರೋಬ್ಬರಿ 3.5 ಕೋಟಿ ಮಂದಿ ಏಕಕಾಲದಲ್ಲಿ ವೀಕ್ಷಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.

india vs Pakistan world Cup match Realtime watching 3.50 crore views Breaks Global Streaming Record Disney Hotstar
Image Credit : Disney+ Hotstar

ವಿಶ್ವದ ಪ್ರಸಿದ್ದ ಸ್ಟ್ರೀಮಿಂಗ್‌ ಫ್ಲ್ಯಾಟ್‌ಫಾರ್ಸ್‌ ಡಿಸ್ನಿ ಹಾಟ್‌ಸ್ಟಾರ್‌ (Disney+ Hotstar) ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತಿದೆ. ಇದೀಗ ಐಸಿಸಿ ವಿಶ್ವಕಪ್‌ನ ಭಾರತ ಪಾಕಿಸ್ತಾನ ವಿರುದ್ದ ಪಂದ್ಯವನ್ನು 3.5 ಕೋಟಿ ಏಕಕಾಲೀನ ವೀಕ್ಷಣೆ ಮಾಡುವ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದೆ.

ಕ್ರಿಕೆಟ್‌ ಇತಿಹಾಸದಲ್ಲಿಯೇ ಏಕದಿನ, ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ನ ಅತ್ಯುನ್ನತ ಗರಿಷ್ಠ ಏಕಕಾಲಿಕ ದಾಖಲೆಯ ಸಂಖ್ಯೆ ಎನಿಸಿಕೊಂಡಿದೆ. ಇದುವರೆಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅತೀ ಹೆಚ್ಚು ಏಕಕಾಲೀನ ವೀಕ್ಷಕರನ್ನು ಒಳಗೊಂಡಿರುವ ದಾಖಲೆಯನ್ನು ಹೊಂದಿತ್ತು.

ಇದನ್ನೂ ಓದಿ : ಭಾರತ – ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆ ಎಡವಟ್ಟು : ತಪ್ಪಾದ ಜರ್ಸಿ ತೊಟ್ಟು ಮೈದಾನಕ್ಕೆ ಬಂದ ವಿರಾಟ್‌ ಕೊಹ್ಲಿ

2023 ರಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಟೈಟಾನ್ಸ್‌ ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್‌ ಪಂದ್ಯವನ್ನು 3.2 ಕೋಟಿ ಏಕಕಾಲೀನ ವೀಕ್ಷಕರು ವೀಕ್ಷಣೆ ಮಾಡಿದ್ದರು. ಈ ದಾಖಲೆಯನ್ನು ಭಾರತ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯ ಅಳಿಸಿ ಹಾಕಿದೆ.

india vs Pakistan world Cup match Realtime watching 3.50 crore views Breaks Global Streaming Record Disney Hotstar
Image Credit to Original Source

ಇನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಣೆ ಮಾಡಲು ಡಿಸ್ನಿ+ ಹಾಟ್‌ಸ್ಟಾರ್‌ ಟ್ಯೂನ್‌ ಮಾಡಿದ ಎಲ್ಲಾ ಅಭಿಮಾನಿಗಳಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಆಟದ ಮೇಲಿನ ನಿಮ್ಮ ಪ್ರೀತಿಯಿಂದಾಗಿ ಡಿಸ್ನಿ+ ಹಾಟ್‌ಸ್ಟಾರ್ ಎಲ್ಲಾ ಕ್ರಿಕೆಟ್ ಸ್ವರೂಪಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಗರಿಷ್ಠಮಟ್ಟದ ದಾಖಲೆ ಸೃಷ್ಟಿಸಲು ಸಾಧ್ಯವಾಗಿದೆ ಎಂದು ಡಿಸ್ನಿ+ ಹಾಟ್‌ಸ್ಟಾರ್ ಇಂಡಿಯಾ ಮುಖ್ಯಸ್ಥ ಸಜಿತ್ ಶಿವಾನಂದನ್ ಹೇಳಿದ್ದಾರೆ.

ಡಿಸ್ನಿ ಸ್ಟಾರ್ ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ICC ವಿಶ್ವಕಪ್‌ಗಾಗಿ ವಿಶೇಷ ಪ್ರಸಾರ ಮಾಡಲು ಮತ್ತು ಮಾಧ್ಯಮ ಹಕ್ಕುಗಳನ್ನು ಹೊಂದಿದೆ. ಪಂದ್ಯವನ್ನು ಡಿಸ್ನಿ ಸ್ಟಾರ್ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಿದೆ. ಸ್ಟಾರ್‌ ಸ್ಪೋರ್ಟ್ಸ್‌ ವೀಕ್ಷರಕ ಸಂಖ್ಯೆಯನ್ನು ನಂತರದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಭಾರತಕ್ಕೆ 8-0 ಗೆಲುವಿನ ಮುನ್ನಡೆ : ರೋಹಿತ್‌ ಸಿಕ್ಸರ್‌ ಆರ್ಭಟಕ್ಕೆ ಪಾಕ್‌ ತತ್ತರ

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ನಂತರದಲ್ಲಿ ನಾಯಕ ರೋಹಿತ್‌ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಭಾರತ ತಂಡ 30.3 ಓವರ್‌ಗಳಲ್ಲಿ 192 ರನ್‌ ಬಾರಿಸುವ ಮೂಲಕ ಪಾಕಿಸ್ತಾನದ ವಿರುದ್ದ 8-0 ಅಂತರದ ಗೆಲುವು ದಾಖಲಿಸಿದೆ.

india vs Pakistan world Cup match Realtime watching 3.5crore views Breaks Global Streaming Record Disney+ Hotstar

Comments are closed.