IPL Auction 2024 : ಇಂಡಿಯನ್ ಪ್ರೀಮಿಯರ್ ಲೀಗ್ 2024 ( ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ನಡೆಯುವ ಸಾಧ್ಯತೆಯಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ 2024 ಹರಾಜು (IPL 2024) ಈ ಬಾರಿ ದುಬೈನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಒಟ್ಟು 10 ಐಪಿಎಲ್ ತಂಡಗಳಿಗೂ ತಾವು ಉಳಿಸಿಕೊಂಡಿರುವ (Retain Playes List) ಹಾಗೂ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಕೇಳಲಾಗಿದೆ.
ಐಪಿಎಲ್ ಎಲ್ಲಾ ತಂಡಗಳು ನವೆಂಬರ್ 15ರ ಒಳಗಾಗಿ ತಾವು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಲಿರುವ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡಬೇಕಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಹರಾಜಿಗೆ ಒಳಪಡುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಕಳೆದ ಬಾರಿ ವಿದೇಶದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಲು ಯೋಜನೆಯನ್ನು ರೂಪಿಸಿತ್ತು. ಆದರೆ ಅಂತಿಮವಾಗಿ ಬಿಸಿಸಿಐ ಚೆನ್ನೈನಲ್ಲಿ ಐಪಿಎಲ್ ಹರಾಜು ನಡೆಸಿದೆ. ಆದರೆ ಈ ಬಾರಿಯೂ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ನಡೆಸಲು ಸಿದ್ದತೆ ನಡೆಸಿದೆ.
ಇದನ್ನೂ ಓದಿ : ಐಪಿಎಲ್ 2024 ರಲ್ಲಿ ಆರ್‌ಸಿಬಿ ಪರ ಆಡಲ್ವಂತೆ ವಿರಾಟ್ ಕೊಹ್ಲಿ !
ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಸಿಸಿಐ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಪ್ರತೀ ತಂಡವು 100 ಕೋಟಿ ರೂಪಾಯಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಕಳೆದ ವರ್ಷದ 95 ಕೋಟಿ ರೂಪಾಯಿ ಪರ್ಸ್‌ನಿಂದ ಏರಿಕೆ ಮಾಡಲಾಗಿದೆ.
ಪ್ರತೀ ತಂಡಗಳು ಉಳಿಸಿಕೊಂಡಿರುವ ಆಟಗಾರರು, ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯ ಆಧಾರದ ಮೇಲೆ ಯಾವ ತಂಡಗಳು ಎಷ್ಟು ಹಣವನ್ನು ಹರಾಜು ಪ್ರಕ್ರಿಯೆಯಲ್ಲಿ ತೊಡಗಿಸಬಹುದು ಅನ್ನೋದು ನಿರ್ಧಾರವಾಗಲಿದೆ.
ಇದನ್ನೂ ಓದಿ : 5 ಪಂದ್ಯದಲ್ಲಿ ಸತತ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ : ಭಾರತಕ್ಕೆ ಸುಲಭವಲ್ಲ ವಿಶ್ವಕಪ್ ಸೆಮಿಫೈನಲ್ ಹಾದಿ
ಪಂಜಾಬ್ ಕಿಂಗ್ಸ್ ತಂಡದ ಬಳಿಯಲ್ಲಿ ಆಟಗಾರರ ಖರೀದಿಗೆ ಹೆಚ್ಚಿನ ಹಣವಿದೆ. ಪಂಜಾಬ್ ಕಿಂಗ್ಸ್ ಬಳಿಯಲ್ಲಿ 12.20 ಕೋಟಿ ರೂಪಾಯಿ ಇದ್ರೆ, ಸನ್ ರೈಸಸ್ ಹೈದ್ರಾಬಾದ್ 6.55 ಕೋಟಿ, ಗುಜರಾತ್ ಟೈಟಾನ್ಸ್ 4.45 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ 4.45 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ 3.55 ಕೋಟಿ, ರಾಜಸ್ಥಾನ ರಾಯಲ್ಸ್ ತಂಡ 3.35 ಕೋಟಿ ರೂಪಾಯಿ ಹೊಂದಿದೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬಳಿ 1.75 ಕೋಟಿ ರೂಪಾಯಿ, ಕೋಲ್ಕತ್ತಾ ನೈಟ್ ರೈಡರ್ಸ್ 1.65 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ 1.59 ಕೋಟಿ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಬಳಿಯಲ್ಲಿ 0.05 ಕೋಟಿ ರೂಪಾಯಿ ಹಣವಿದೆ.
ಇದನ್ನೂ ಓದಿ : ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ? ವಿಶ್ವಕಪ್ ಫಲಿತಾಂಶದ ಮೇಲೆ ಬಿಸಿಸಿಐ ನಿರ್ಧರಿಸುತ್ತೆ ರಾಹುಲ್ ದ್ರಾವಿಡ್ ಭವಿಷ್ಯ
ಇನ್ನು ಕಳೆದ ಐಪಿಎಲ್ ಆವೃತ್ತಿಯಲ್ಲಿ ಸ್ಯಾಮ್ ಕರನ್ ಅತ್ಯಂದ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ತಂಡ ಬರೋಬ್ಬರಿ 18.5 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈ ಬಾರಿ ಹಲವು ವಿದೇಶಿ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಸೇರ್ಪಡೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮಹಿಳೆಯ ಐಪಿಎಲ್‌ಗೂ ಹರಾಜು :
ಮಹಿಳೆಯ ಪ್ರೀಮಿಯರ್ ಲೀಗ್‌ಗೆ ಕೂಡ ಈ ಬಾರಿ ಹರಾಜು ಪ್ರಕ್ರಿಯೆ ನಡೆಯಲಿದೆ. ಬಿಸಿಸಿಐ ಡಿಸೆಂಬರ್ ಮೊದಲ ವಾರದಲ್ಲಿಯೇ ಹರಾಜು ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಆದರೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜು ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ನಡೆಯುವ ಸಾಧ್ಯತೆಯಿದೆ.
IPL Auction 2024 : December 19 indian premier league 2024 Auction in Dubai