ಐಪಿಎಲ್‌ 2024 ರಲ್ಲಿ ಆರ್‌ಸಿಬಿ ಪರ ಆಡಲ್ವಂತೆ ವಿರಾಟ್‌ ಕೊಹ್ಲಿ !

IPL 2024 Virat Kohli : ವಿರಾಟ್‌ ಕೊಹ್ಲಿ (Virat Kohli) ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವನ್ನು ಪ್ರತಿನಿಧಿಸುವುದು ಅನುಮಾನ.

IPL 2024 Virat Kohli : ವಿರಾಟ್‌ ಕೊಹ್ಲಿ ಟೀಂ ಇಂಡಿಯಾದ ಶ್ರೇಷ್ಟ ಆಟಗಾರ. ಟೆಸ್ಟ್‌, ಏಕದಿನ, ಟಿ20 ಪಂದ್ಯಗಳಲ್ಲಿ ಹಲವು ವಿಶ್ವದಾಖಲೆಯನ್ನು ಬರೆದಿರುವ ಆಟಗಾರ. ಸದ್ಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಆಧಾರಸ್ತಂಬ. ಆದರೆ ವಿರಾಟ್‌ ಕೊಹ್ಲಿ (Virat Kohli) ಈ ಬಾರಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವನ್ನು ಪ್ರತಿನಿಧಿಸುವುದು ಅನುಮಾನ.

Virat Kohli not play for RCB in IPL 2024 indian Premier
Image Credit to Orginal Source

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL )  ಉದ್ಘಾಟನೆಯಿಂದ ಹಿಡಿದು ಇಂದಿನ ವರೆಗೂ ಒಂದೇ ತಂಡವನ್ನು ಪ್ರತಿನಿಧಿಸಿದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ವಿರಾಟ್‌ ಕೊಹ್ಲಿ ಬೆಂಗಳೂರಿಗೆ ಟಾಟಾ ಹೇಳುವ ಸಾಧ್ಯತೆಯಿದೆ. ಸುಮಾರು 16ನೇ  IPL ಆವೃತ್ತಿಗಳಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಕೊಹ್ಲಿ ಪ್ರತಿನಿಧಿಸಿದ್ದಾರೆ.

ಇದೀಗ ಐಪಿಎಲ್‌ 17ನೇ ಆವೃತ್ತಿಯಲ್ಲಿ (IPL 2024) ವಿರಾಟ್‌ ಕೊಹ್ಲಿ ಬೆಂಗಳೂರು ಬದಲು ಬೇರೆ ತಂಡದ ಪರ ಆಡುತ್ತಾರೆ ಅನ್ನೋ ಸುದ್ದಿ ಕ್ರಿಕೆಟ್‌ ವಲಯದಲ್ಲಿ ಕೇಳಿಬರುತ್ತಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 2013- 2021ರ ವರೆಗೆ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡ ನಾಯಕರಾಗಿದ್ದರು. ಈ ವೇಳೆ ಒಟ್ಟು 140 ಪಂದ್ಯಗಳಲ್ಲಿ ತಂಡವನ್ನು ಮುನ್ನೆಡೆಸಿದ್ದು ಪೈಕಿ 66 ಪಂದ್ಯಗಳಲ್ಲಿ ಗೆಲವು ದಾಖಲಿಸಿ 70 ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು.

ಇದನ್ನೂ ಓದಿ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ ಸ್ಟೋರಿ

ದೆಹಲಿ ಮೂಲದ ವಿರಾಟ್‌ ಕೊಹ್ಲಿಗೆ ಕನ್ನಡಿಗರು ಅಪಾರ ಅಭಿಮಾನವನ್ನು ತೋರಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್‌ ಟ್ರೋಫಿ ಗೆಲ್ಲಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಕಳೆದ ಎರಡು ವರ್ಷಗಳ ಹಿಂದೆ ನಾಯಕತ್ವವನ್ನು ತ್ಯೆಜಿಸಿದ್ದರು. ಅಲ್ಲದೇ ಕಳೆದ ಬಾರಿಯ ಐಪಿಎಲ್‌ ಮಹಾ ಹರಾಜಿನ ವೇಳೆಯಲ್ಲಿಯೇ ಐಪಿಎಲ್‌ ತೊರೆಯುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

Virat Kohli not play for RCB in IPL 2024 indian Premier
Image Credit to Original Source

ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ ವಿರಾಟ್‌ ಕೊಹ್ಲಿ ಅವರನ್ನು 2019 ರಿಂದಲೂ 17 ಕೋಟಿ ರೂಪಾಯಿ ಕೊಟ್ಟು ರಿಟೈನ್‌ ಮಾಡಿಕೊಂಡಿತ್ತು, ಕಳೆದ ಮಹಾ ಹರಾಜಿನ ವೇಳೆಯಲ್ಲಿ 15 ಕೋಟಿ ರೂಪಾಯಿಗೆ ಮತ್ತೆ ರಿಟೈನ್‌ ಮಾಡಿಕೊಂಡಿದೆ. ಆದರೆ ಈ ಬಾರಿ ಐಪಿಎಲ್‌ ವೇಳೆಯಲ್ಲಿ ಕೊಹ್ಲಿ ಆರ್‌ಸಿಬಿ ತಂಡವನ್ನು ತೊರೆದ್ರೆ ಅತ್ಯಧಿಕ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ICC World Cup 2023 : ಅಫ್ಘಾನಿಸ್ತಾನ ಗೆಲುವಿನ ಹಿಂದಿದೆ ಟೀಂ ಇಂಡಿಯಾ ಆಟಗಾರ‌ ಅಜಯ್ ಜಡೇಜಾ ಚಾಣಾಕ್ಷತೆ !

ವಿರಾಟ್‌ ಕೊಹ್ಲಿ ವಿಶ್ವಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡಕ್ಕೆ ಅನಿವಾರ್ಯ. ಆದರೆ ಕೊಹ್ಲಿ ಇದುವರೆಗೂ ಐಪಿಎಲ್‌ ಗೆಲ್ಲದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನೊಂದೆಡೆಯಲ್ಲಿ ಹೊಸ ತಂಡ ಕಟ್ಟಲು ಆರ್‌ಸಿಬಿ ಮ್ಯಾನೇಜ್ಮೆಂಟ್‌ ಸಿದ್ದತೆ ನಡೆಸಿದೆ ಎನ್ನಲಾಗುತ್ತಿದೆ.

ವಿರಾಟ್‌ ಕೊಹ್ಲಿ ಮುಂದಿನ ಆವೃತ್ತಿಯಲ್ಲಿ ತಮ್ಮ ತವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಬ್ಯಾಟ್‌ ಬೀಸುವ ಸಾಧ್ಯತೆಯಿದೆ. ಕಳೆದ ಎರಡು ಸೀಸನ್‌ ಗಳಲ್ಲಿಯೂ ಡೆಲ್ಲಿ ಅದ್ಬುತ ಪ್ರದರ್ಶನ ನೀಡಿದೆ. ಆದರೆ ಅನುಭವದ ಕೊರತೆಯಿಂದಾಗಿ ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ವಿರಾಟ್‌ ಕೊಹ್ಲಿ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಡೆಲ್ಲಿ ಹವಣಿಸುತ್ತಿದೆ ಎನ್ನಲಾಗುತ್ತಿದೆ.

Virat Kohli not play for RCB in IPL 2024 indian Premier
Image Credit to Original Source

ಆದರೆ ಆರ್‌ಸಿಬಿ ತಂಡ ಅಷ್ಟು ಸುಲಭಕ್ಕೆ ವಿರಾಟ್‌ ಕೊಹ್ಲಿ ಅವರನ್ನು ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ. ಐಪಿಎಲ್‌ ಟ್ರೋಫಿ ಗೆಲ್ಲದೇ ಇದ್ದರೂ ಕೂಡ ಆರ್‌ಸಿಬಿ ತಂಡದ ಬ್ರ್ಯಾಂಡ್‌ ಮೌಲ್ಯ ಹೆಚ್ಚಾಗಿರುವುದಕ್ಕೆ ವಿರಾಟ್‌ ಕೊಹ್ಲಿಯೇ ಕಾರಣ ಎನ್ನಲಾಗುತ್ತಿದೆ. ಒಂದೊಮ್ಮೆ ವಿರಾಟ್‌ ಕೊಹ್ಲಿ ತಂಡವನ್ನು ತೊರೆದ್ರೆ ಬ್ರ್ಯಾಂಡ್‌ ವ್ಯಾಲ್ಯೂ ಕುಸಿತವಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ನ್ಯೂಜಿಲೆಂಡ್‌ ವಿರುದ್ದ ಭಾರತ ಗೆಲ್ಲಿಸಿದ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ವಿರುದ್ದ ಅಭಿಮಾನಿಗಳು ಗರಂ

ವಿರಾಟ್‌ ಕೊಹ್ಲಿ ತಂಡವನ್ನು ಬಿಡುವ ಕುರಿತು ಇದುವರೆಗೂ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡವನ್ನು ಎರಡು ಬಾರಿ ಗೆಲುವಿನ ದಡ ಸೇರಿಸಿದ್ದಾರೆ. ಒಂದೊಮ್ಮೆ ವಿಶ್ವಕಪ್‌ ಗೆಲುವು ಸಾಧಿಸಿದ್ರೆ ಕೊಹ್ಲಿ ಬ್ರ್ಯಾಂಡ್‌ ಮೌಲ್ಯ ಹೆಚ್ಚಲಿದ್ದು, ಐಪಿಎಲ್‌ನಲ್ಲಿ ದಾಖಲೆಯ ಮೊತ್ತಕ್ಕೆ ಬಿಡ್‌ ಆಗುವ ಸಾಧ್ಯತೆಯಿದೆ ಅನ್ನೋದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ.

ಭಾರತ ಕಿರಿಯರ ತಂಡವನ್ನು ಪ್ರತಿನಿಧಿಸಿದ್ದ ವಿರಾಟ್‌ ಕೊಹ್ಲಿ ಭಾರತಕ್ಕೆ ವಿಶ್ವಕಪ್‌ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ಆರ್‌ಸಿಬಿ ನಾಯಕನಾದ ಎರಡನೇ ವರ್ಷಗಳಲ್ಲಿ ಕೊಹ್ಲಿ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಎಂಎಸ್‌ ಧೋನಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಕೊಹ್ಲಿಗೆ ಅದೃಷ್ಟ ಒಲಿದು ಬಂದಿತ್ತು. ಆರಂಭದಲ್ಲಿ ಟೆಸ್ಟ್‌ ತಂಡ ನಾಯಕನಾದ್ರೆ ನಂತರ ಟಿ20 ಹಾಗೂ ಏಕದಿನದ ನಾಯಕನಾದ್ರು.

Virat Kohli not play for RCB in IPL 2024 indian Premier
Image Credit to Original Source

ಐಪಿಎಲ್‌ ಇತಿಹಾಸದಲ್ಲೇ ಅತ್ಯಧಿಕ ರನ್‌ ಬಾರಿಸಿರುವ ಕೊಹ್ಲಿ

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಅನ್ನೋ ಖ್ಯಾತಿಗೆ ಪಾತ್ರವಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿರುವ ದಾಖಲೆ ವಿರಾಟ್‌ ಕೊಹ್ಲಿ ಅವರ ಹೆಸರಿನಲ್ಲಿದೆ. ಜೊತೆಗೆ ಒಂದೇ ತಂಡದ ಪರ ಅತೀ ಹೆಚ್ಚು ರನ್‌ ಬಾರಿಸಿದ ದಾಖಲೆಯನ್ನೂ ತಮ್ಮ ಹೆಸರಲ್ಲೇ ಕೊಹ್ಲಿ ಉಳಿಸಿಕೊಂಡಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ಪರವಾಗಿ 7263 ರನ್‌ ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಶಿಖರ್‌ ಧವನ್‌ ಇದ್ದು ಅವರು ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯ್ಸ್‌, ಡೆಕ್ಕನ್‌ ಚಾರ್ಜಸ್‌, ಸನ್‌ರೈಸ್‌ ಹೈದ್ರಾಬಾದ್‌ ತಂಡದ ಪರ ಒಟ್ಟಿ 6617 ರನ್‌ ಬಾರಿಸಿದ್ದಾರೆ. ಇನ್ನು ಮೂರನೇ ಸ್ಥಾನ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರ ಹೆಸರಿನಲ್ಲಿದೆ.

ಇದನ್ನೂ ಓದಿ : ‌ಶತಕದಲ್ಲೇ ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ : ಸಚಿನ್‌ ದಾಖಲೆ ಸರಿಗಟ್ಟುತ್ತಾರಾ ಕಿಂಗ್‌ ಕೊಹ್ಲಿ

ಡೇವಿಡ್‌ ವಾರ್ನರ್‌ ಒಟ್ಟು 6397 ರನ್‌ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ರೈಸಸ್‌ ಹೈದ್ರಾಬಾದ್‌ ತಂಡದ ಪರ ಆಡಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ಹಾಗೂ ಡೆಕ್ಕನ್‌ ಚಾರ್ಜಸ್‌ ತಂಡವನ್ನು ಮುನ್ನೆಡೆಸಿದ್ದು, 6211 ರನ್‌ ಬಾರಿಸಿದ್ದಾರೆ. ಐದನೇ ಸ್ಥಾನದಲ್ಲಿ ಭಾರತ ಸುರೇಶ್‌ ರೈನಾ 5528 ರನ್‌ ಸಿಡಿಸಿದ್ದು, ಅವರು ಚೆನ್ನೈ ಸೂಪರ್‌ ಕಿಂಗ್ಸ್‌, ಗುಜರಾತ್‌ ಟೈಟಾನ್ಸ್‌ ತಂಡದ ಪರ ಆಡಿದ್ದಾರೆ.

Virat Kohli not play for RCB in IPL 2024 indian Premier
Image Credit to Original Source

ವಿರಾಟ್‌ ಕೊಹ್ಲಿ ಐಪಿಎಲ್‌ ಸಂಭಾವನೆ :

2008 – 12 ಲಕ್ಷ , 2009-12 ಲಕ್ಷ , 2010-12 ಲಕ್ಷ , 2011- 8 ಕೋಟಿ 28 ಲಕ್ಷ, 2012- 8 ಕೋಟಿ 28 ಲಕ್ಷ, 2013- 8 ಕೋಟಿ 28 ಲಕ್ಷ, 2014- 12 ಕೋಟಿ 50 ಲಕ್ಷ, 2015- 12 ಕೋಟಿ 50 ಲಕ್ಷ, 2016- 12 ಕೋಟಿ 50 ಲಕ್ಷ, 2017-12 ಕೋಟಿ 50 ಲಕ್ಷ, 2018- 17 ಕೋಟಿ, 2019 -17 ಕೋಟಿ, 2020-17 ಕೋಟಿ, 2021- 17 ಕೋಟಿ, 2022-15 ಕೋಟಿ, 2023 -15 ಕೋಟಿ.

Virat Kohli who has written many world records in Test, ODI and T20 matches. Currently the pillar of Team India in the World Cup. But it is doubtful that Virat Kohli will represent Royal Challengers Bangalore this time. Virat Kohli, who has the distinction of being the player who has represented a single team since the inception of the Indian Premier League till date. but virat Kohli not Playing RCB for next IPL 2024. Kohli has represented Royal Challengers Bangalore in around 16 editions of IPL.

In the 17th edition of IPL, Virat Kohli will play for a different team instead of Bangalore, the news is heard in the cricket circle. Virat Kohli was the captain of the RCB team from 2013-2021 in the Indian Premier League. During this time, he led the team in a total of 140 matches, out of which he won 66 matches and lost 70 matches.

Comments are closed.