ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಕೋಚ್‌ ? ವಿಶ್ವಕಪ್‌ ಫಲಿತಾಂಶದ ಮೇಲೆ ಬಿಸಿಸಿಐ ನಿರ್ಧರಿಸುತ್ತೆ ರಾಹುಲ್‌ ದ್ರಾವಿಡ್‌ ಭವಿಷ್ಯ

ಟೀಂ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌  ಅವರ ಒಪ್ಪಂದದ ಅವಧಿ ವಿಶ್ವಕಪ್‌ಗೆ ಕೊನೆಗೊಳ್ಳುತ್ತದೆ. ಆದರೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ಮುಂದುವರಿಯುತ್ತಾರಾ ಅನ್ನುವ ಬಗ್ಗೆ ಬಿಸಿಸಿಐ (BCCI)  ಆಗಲಿ, ರಾಹುಲ್‌ ದ್ರಾವಿಡ್‌ (Team india Coach Rahul Dravid) ಅವರಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ

ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸತತ ಗೆಲುವಿನ ಅಲೆಯಲ್ಲಿ ಬೀಗುತ್ತಿರುವ ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲುವ ಫೇವರೆಟ್‌ ತಂಡ. ಆದರೆ ವಿಶ್ವಕಪ್‌ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ ( Rahul Dravid) ಬದಲು ಹೊಸ ಕೋಚ್‌ ನೇಮಕವಾಗುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಟೀಂ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌  ಅವರ ಒಪ್ಪಂದದ ಅವಧಿ ವಿಶ್ವಕಪ್‌ಗೆ ಕೊನೆಗೊಳ್ಳುತ್ತದೆ. ಆದರೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ಮುಂದುವರಿಯುತ್ತಾರಾ ಅನ್ನುವ ಬಗ್ಗೆ ಬಿಸಿಸಿಐ (BCCI)  ಆಗಲಿ, ರಾಹುಲ್‌ ದ್ರಾವಿಡ್‌ (Team india Coach Rahul Dravid) ಅವರಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ವಿಶ್ವಕಪ್‌ (world Cup 2023) ಫಲಿತಾಂಶದ ಮೇಲೆ ರಾಹುಲ್‌ ದ್ರಾವಿಡ್‌ ಅವರ ಭವಿಷ್ಯ ನಿರ್ಧಾರವಾಗಲಿದೆ.

New coach for Indian cricket team Rahul Dravids future will be decided by BCCI based on the World Cup 2023 result
Image Credit to Original Source

 

ವಿಶ್ವಕಪ್‌ ಮುಗಿದ ಬೆನ್ನಲ್ಲೇ ರಾಹುಲ್‌ ದ್ರಾವಿಡ ಅವರು ಒಪ್ಪಂದ ಮುಕ್ತಾಯವಾಗಲಿದೆ. ಹೀಗಾಗಿ ರಾಹುಲ್‌ ದ್ರಾವಿಡ್‌ ಅವರು ಐಪಿಎಲ್‌ಗೆ ಮರಳುತ್ತಾರೆ ಎನ್ನಲಾಗುತ್ತಿದೆ. ಈ ಹಿಂದೆ ರಾಜಸ್ತಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಐಪಿಎಲ್‌ ೧೦ ತಂಡಗಳ ಪೈಕಿ ಒಂದು ತಂಡಕ್ಕೆ ರಾಹುಲ್‌ ಕೋಚ್‌ ಆಗುವ ಸಾಧ್ಯತೆಯೂ ಇದೆ. ʼ

ಇದನ್ನೂ ಓದಿ : ಐಪಿಎಲ್‌ 2024 ರಲ್ಲಿ ಆರ್‌ಸಿಬಿ ಪರ ಆಡಲ್ವಂತೆ ವಿರಾಟ್‌ ಕೊಹ್ಲಿ !

ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಯಿಂದ ಕೆಳಗೆ ಇಳಿದ್ರೆ ಅವರ ಸ್ಥಾನಕ್ಕೆ ವಿವಿಎಸ್‌ ಲಕ್ಷಣ್‌ ಅವರು ನೇಮಕವಾಗುವ ಸಾಧ್ಯತೆಯಿದೆ. ಕಳೆದ ಅವಧಿಯಲ್ಲಿಯೇ ಲಕ್ಷ್ಮಣ್‌ ಆಸಕ್ತರಾಗಿದ್ದರು. ಆದ್ರೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿ ನೇಮಕವಾದ ಬೆನ್ನಲ್ಲೇ ಲಕ್ಷ್ಮಣ್‌ ಅವರನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.

51 ವರ್ಷದ ರಾಹುಲ್‌ ದ್ರಾವಿಡ್‌ ಅವರು ಟೀಂ ಇಂಡಿಯಾ ಕೋಚ್‌ ಆಗುವ ಅವಕಾಶವನ್ನು ತಿರಸ್ಕರಿಸಿದ್ರೆ ಬಿಸಿಸಿಐ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಿದೆ. ನಂತರ ಬಿಸಿಸಿಐ ಅರ್ಹ ಅಭ್ಯರ್ಥಿಯನ್ನು ಕೋಚ್‌ ಆಗಿ ನೇಮಕ ಮಾಡಲಿದೆ. ಒಂದೊಮ್ಮೆ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯೇ ಇದ್ರೆ ವಿಶ್ವಕಪ್‌ ಅವರ ಪಾಲಿಗೆ ಕೊನೆಯ ಪಂದ್ಯವಾಗಲಿದೆ.

ಇದನ್ನೂ ಓದಿ :KL Rahul Captain : ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಕ್ಕೆ ಕನ್ನಡಿಗ ಕೆಎಲ್‌ ರಾಹುಲ್‌ ನಾಯಕ !

ವಿಶ್ವಕಪ್‌ ಪಂದ್ಯಾವಳಿಯಲ್ಲಿ ರಾಹುಲ್‌ ದ್ರಾವಿಡ್‌ ಅವರು ಬ್ಯುಸಿಯಾಗಿದ್ದಾರೆ. ಬಿಸಿಸಿಐ ಕೂಡ ವಿಶ್ವಕಪ್‌ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇರಿಸಿಕೊಂಡಿದೆ. ಹೀಗಾಗಿ ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಹುದ್ದೆಯಲ್ಲಿ ಮುಂದುವರಿಸುವ ಕುರಿತು ಯಾವುದೇ ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ತಿಳಿಸಿರುವ ಕುರಿತು ಇನ್‌ಸೈಡ್‌ ಸ್ಪೋರ್ಟ್ಸ್‌ ವರದಿ ಮಾಡಿದೆ.

New coach for Indian cricket team Rahul Dravids future will be decided by BCCI based on the World Cup 2023 result
image Credit to Original Source

2021 ರಲ್ಲಿ ಭಾರತ ತಂಡದ ಕೋಚ್‌ ಆಗಿದ್ದ ರವಿಶಾಸ್ತ್ರಿ ಅವರನ್ನು ಕೋಚ್‌ ಹುದ್ದೆಯಿಂದ ಕೆಳಗಿಳಿಸಿದ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿ ನೇಮಕವಾಗಿದ್ದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಯುವ ಆಟಗಾರರನ್ನು ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : 5 ಪಂದ್ಯದಲ್ಲಿ‌ ಸತತ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ : ಭಾರತಕ್ಕೆ ಸುಲಭವಲ್ಲ ವಿಶ್ವಕಪ್‌ ಸೆಮಿಫೈನಲ್‌ ಹಾದಿ

ರಾಹುಲ್‌ ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಸ್ವದೇಶಗಳಿಗಿಂತ ವಿದೇಶಗಳಲ್ಲಿಯೇ ಅತೀ ಹೆಚ್ಚು ಪಂದ್ಯಾವಳಿಗಳನ್ನು ಜಯಿಸಿದೆ. ಆದರೆ ಪ್ರಮುಖ ಸರಣಿಗಳನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. 2022 ರ ಏಷ್ಯಾ ಕಪ್ ಸೋಲಿನ ಬೆನ್ನಲ್ಲೇ ಟಿ 20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ನಲ್ಲೇ ಔಟ್‌ ಆಗಿತ್ತು. 2023ರ WTC ಫೈನಲ್ಸ್‌ನಲ್ಲಿ ಸೋಲು ಕಂಡಿದೆ.

2016 ರ ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ರನ್ನರ್‌ ಅಪ್‌ ಆಗಿತ್ತು. ನಂತರ 2019 ರಲ್ಲಿ ಅಂಡರ್‌ 19 ವಿಶ್ವಕಪ್‌ ಗೆಲುವಿನಲ್ಲಿ ರಾಹುಲ್‌ ದ್ರಾವಿಡ್‌ ಅವರ ಪಾತ್ರ ಮಹತ್ತರವಾದುದು. ಟೀಂ ಇಂಡಿಯಾಕ್ಕೆ ಯುವ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ರಾಹುಲ್‌ ದ್ರಾವಿಡ್‌ ಇನ್ನಷ್ಟು ವರ್ಷಗಳ ಕಾಲ ಕೋಚ್‌ ಆಗಿ ಮುಂದುವರಿಯಬೇಕು ಅನ್ನೋ ಮಾತು ಕೇಳಿಬರುತ್ತಿದೆ.

New coach for Indian cricket team ? Rahul Dravid’s future will be decided by BCCI based on the World Cup 2023 result

Comments are closed.