ಭಾನುವಾರ, ಏಪ್ರಿಲ್ 27, 2025
Homeautomobileದೀಪಾವಳಿ ಹಬ್ಬಕ್ಕೆ ಇಲ್ಲಿದೆ ಬಂಪರ್​ : ಒಂದು ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಗೆ ಇನ್ನೊಂದು ಇ ಸ್ಕೂಟರ್​...

ದೀಪಾವಳಿ ಹಬ್ಬಕ್ಕೆ ಇಲ್ಲಿದೆ ಬಂಪರ್​ : ಒಂದು ಎಲೆಕ್ಟ್ರಿಕ್​ ಸ್ಕೂಟರ್​ ಖರೀದಿಗೆ ಇನ್ನೊಂದು ಇ ಸ್ಕೂಟರ್​ ಉಚಿತ

- Advertisement -

Bgauss Deepavali Offer : ದೇಶದಲ್ಲಿ ಹಬ್ಬದ ಸೀಸನ್​ ನಡೀತಾ ಇದೆ . ಹೀಗಾಗಿ ವಿವಿಧ ಆಟೋ ಮೊಬೈಲ್​ ಕಂಪನಿಗಳು ತನ್ನ ಗ್ರಾಹಕರನ್ನು ಸೆಳೆಯಲು ಒಂದಿಲ್ಲೊಂದು ಆಫರ್​ಗಳನ್ನು ನೀಡುತ್ತಲೇ ಇವೆ. ಈ ಹಬ್ಬದ ಸೀಸನ್​ನಲ್ಲಿ ನೀವು ಎಲೆಕ್ಟ್ರಿಕ್​ ಸ್ಕೂಟರ್​ (Electric Scooters) ಒಂದನ್ನ ಖರೀದಿ ಮಾಡಬೇಕು ಅಂತಾ ಪ್ಲಾನ್​ ಮಾಡಿದ್ದರೆ ನಿಮಗೊಂದು ಸುವರ್ಣ ಅವಕಾಶವಿದೆ. ಈ ಕಂಪನಿಯ ಸ್ಕೂಟರ್​ ಒಂದು ಖರೀದಿ ಮಾಡಿದ್ರೆ ನಿಮಗೆ ಇನ್ನೊಂದು ಸ್ಕೂಟರ್​ ಫ್ರೀ (Buy One Scooter Get One Free) ಆಗಿ ಸಿಗಲಿದೆ

Deepavali Big Offer buy one Scooter get One Scooter free for Bgauss Electric Scooters in India
Image Credit to Original Source

ಅಂದಹಾಗೆ ಈ ಆಫರ್​ ದೀಪಾವಳಿ ಹಬ್ಬದವರೆಗೆ ಮಾತ್ರ ಲಭ್ಯವಿದೆ. ಎಲೆಕ್ಟ್ರಿಕ್​ ಬೈಕ್​ಗಳ ತಯಾರಿಕಾ ಕಂಪನಿಗಳ ಪೈಕಿ ಜನಪ್ರಿಯ ಕಂಪನಿಗಳಲ್ಲಿ ಒಂದಾದ ಬಿಗಾಸ್ (Bgauss Electric Scooters in India)​ ತನ್ನ ಗ್ರಾಹಕರಿಗೆ ಇಂತಹದ್ದೊಂದು ಆಫರ್​ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಗಾಸ್​ ಎಲೆಕ್ಟ್ರಿಕ್​ ಬೈಕ್​ನ ಹೊಸ ಮಾಡೆಲ್​ನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.

ಬಿಗಾಸ್​ ಕಂಪನಿಯು . BG C120 ಎಂಬ ಎಲೆಕ್ಟ್ರಿಕ್​ ಬೈಕ್​ಗಳ ಖರೀದಿಗೆ ನಿಮಗೆ ಇನ್ನೊಂದು ಸ್ಕೂಟರ್​ನ್ನು ಉಚಿತವಾಗಿ ಪಡೆಯುವ ಸುವರ್ಣಾವಕಾಶ ವನ್ನು ನೀಡುತ್ತದೆ. ಈ ಸ್ಕೂಟರ್​ ಖರೀದಿ ಮಾಡಿದವರ ಅದೃಷ್ಟ ಚೆನ್ನಾಗಿದ್ದರೆ ಅವರಿಗೆ BG C12i EX ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಉಚಿತವಾಗಿ ಸಿಗಲಿದೆ.

ಇದನ್ನೂ ಓದಿ : ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಾರು ಲೋನ್‌ ಆಫರ್‌ ನೀಡುತ್ತಿವೆ ಈ ಬ್ಯಾಂಕ್‌ಗಳು

ದೀಪಾವಳಿ ಹಬ್ಬದ ಪ್ರಯುಕ್ತ ಬಿಗಾಸ್​ ಕಂಪನಿಯು ತನ್ನ ಗ್ರಾಹಕರಿಗೆ ಸ್ಕ್ರ್ಯಾಚ್ & ವಿನ್​ ಎಂಬ ಸ್ಪರ್ಧೆ ಆಯೋಜಿಸಿದ್ದು BG C120 ಎಲೆಕ್ಟ್ರಿಕ್​ ಬೈಕ್ ಖರೀದಿ ಮಾಡಿದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಗ್ರಾಹಕರಿಗೆ ಉಚಿತವಾಗಿ ಸಿಗಲಿರುವ BG C12i EX ಎಲೆಕ್ಟ್ರಿಕ್ ಸ್ಕೂಟರ್​ನ ಬೆಲೆ 1, 05, 000 ರೂಪಾಯಿ ಎಂದು ಬಿಗಾಸ್​ ಕಂಪನಿ ತಿಳಿಸಿದೆ.

ಸ್ಕ್ರ್ಯಾಚ್​ & ವಿನ್​ ಸ್ಪರ್ಧೆಯಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​ಗಳ ಹೊರತಾಗಿ ಇನ್ನೂ ಅನೇಕ ಬಗೆಯ ಉತ್ಪನ್ನಗಳನ್ನು ಉಚಿತವಾಗಿ ಪಡೆಯುವ ಸದಾವಕಾಶ ನೀಡಲಾಗಿದೆ.8750 ರೂಪಾಯಿ ಮೌಲ್ಯದ ವಿಐಪಿ ಟ್ರಾಲಿ ಬ್ಯಾಗ್​ ಕೂಡ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಟ್ರಾಲಿ ಬ್ಯಾಗುಗಳಿಗೆ ವಿಸ್ತ್ರತ ವ್ಯಾರಂಟಿ ಕೂಡ ಇರಲಿದೆ ಎಂದು ಬಿಗಾಸ್​ ಕಂಪನಿ ತಿಳಿಸಿದೆ.

ಇದನ್ನೂ ಓದಿ : ಟಾಟಾ ಮೋಟಾರ್ಸ್‌ ವಿರುದ್ದ ದೀದಿಗೆ ಮುಖಭಂಗ : ಸಿಂಗೂರು ಭೂ ವಿವಾದ, ಪಶ್ಚಿಮ ಬಂಗಾಲ ಸರಕಾರಕ್ಕೆ 766 ಕೋಟಿ ದಂಡ

ಆರ್​ಆರ್​​ಬಿಎಲ್​ಸಿ ಕಂಪನಿಯ 5500 ರೂಪಾಯಿ ಮೌಲ್ಯದ ಸೀಲಿಂಗ್​ ಫ್ಯಾನ್​ ಕೂಡ ಈ ಆಫರ್​ನ ಅಡಿಯಲ್ಲಿ ಬರುತ್ತದೆ. ರಿಮೋಟ್​ ಕಂಟ್ರೋಲ್​ನಲ್ಲಿ ಕೆಲಸ ಮಾಡುವ ಈ ಫ್ಯಾನ್​ ಕೂಡ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ. ಇನ್ನು ಒಂದು ಗ್ರಾಂ ಚಿನ್ನದ ನಾಣ್ಯವನ್ನೂ ಸಹ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Deepavali Big Offer buy one Scooter get One Scooter free for Bgauss Electric Scooters in India
Image Credit to Original Source

ಬಿಗಾಸ್​ ಕಂಪನಿಯು ಕರ್ನಾಟಕ , ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಛತ್ತೀಸಗಢ, ಮಧ್ಯಪ್ರದೇಶ, ದೆಹಲಿ. ಪುದುಚೇರಿಯಲ್ಲಿರುವ ತನ್ನ ಶಾಖೆಗಳಿಗೆ ಮಾತ್ರ ಈ ಸುವರ್ಣಾವಕಾಶವನ್ನು ನೀಡಿದೆ. ನೀವೇನಾದರೂ ಹೊಸ ಎಲೆಕ್ಟ್ರಿಕ್​ ಬೈಕ್ ಖರೀದಿ ಮಾಡುವ ಕನಸು ಕಾಣ್ತಿದ್ರೆ ಇದಕ್ಕಿಂತ ಒಳ್ಳೆ ಆಫರ್​ ನಿಮಗೆ ಬೇರೆ ಕಡೆ ಸಿಗಲು ಸಾಧ್ಯವೇ ಇಲ್ಲ.

ಇದನ್ನೂ ಓದಿ : ಕೇವಲ 8.69 ಲಕ್ಷ ರೂ.ಬೆಲೆಗೆ ಟಾಟಾ ಟಿಯಾಗೊ ಇವಿ : ಎಲೆಕ್ಟ್ರಿಕ್ ಕಾರಿನ ಮಾರಾಟದ ಮೇಲೆ ಭರ್ಜರಿ ಆಫರ್‌

ಇನ್ನು ಬಿಗಾಸ್​ ಕಂಪನಿಯ ಈ ಎಲೆಕ್ಟ್ರಿಕ್​ ಸ್ಕೂಟರ್​ 16 ಇಂಚಿನ ವ್ಹೀಲ್​, ಡಿಇಟಿ ಸ್ಮಾರ್ಟ್ ಕನೆಕ್ಡೆಟ್​, ಐಪಿ 67 ಬ್ಯಾಟರಿ , ಮೆಟಲ್​ ಬಾಡಿಯನ್ನು ಹೊಂದಿದೆ. ಈ ಎಲೆಕ್ಟ್ರಿಕ್​ ಸ್ಕೂಟರ್​ಗಳಿಗೆ ಬಿಗಾಸ್​ ಕಂಪನಿಯು ಮೂರು ವರ್ಷಗಳ ವಾರಂಟಿ ಕೂಡ ನೀಡುತ್ತದೆ. ಮೊಬೈಲ್​​ನಲ್ಲಿ ಬಿಗಾಸ್​ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಳ್ಳುವ ಮೂಲಕ ಈ ಸ್ಕೂಟರ್​ನ್ನು ಮೊಬೈಲ್​ನೊಂದಿಗೂ ಗ್ರಾಹಕರು ಕನೆಕ್ಟ್​ ಮಾಡಿಕೊಳ್ಳಬಹುದು ಅಂತಾ ಬಿಗಾಸ್​ ಕಂಪನಿ ತಿಳಿಸಿದೆ.

Deepavali Big Offer buy one Scooter get One Scooter free for Bgauss Electric Scooters in India

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular