ಮುಂಬೈ : ವಿಶ್ವಕಪ್‌ನ ಮೊದಲ ಸೆಮಿಫೈನಲ್ (World Cup 2023 Semi Final) ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohili) ವಿಶ್ವದಾಖಲೆಯ ಶತಕ, ಮೊಹಮ್ಮದ್ ಸೆಮಿ (Mohamed Sami) ಬೌಲಿಂಗ್ ಆರ್ಭಟಕ್ಕೆ ನ್ಯೂಜಿಲೆಂಡ್ ತಂಡ ತತ್ತರಿಸಿ ಹೋಗಿದೆ. ಈ ಮೂಲಕ ಭಾರತ ನ್ಯೂಜಿಲೆಂಡ್ (IND vs NZ ವಿರುದ್ದ 70 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ್ದು, ವಿಶ್ವಕಪ್ ಫೈನಲ್‌ಗೆ (World Cup 2023 Final) ಎಂಟ್ರಿ ಕೊಟ್ಟಿದೆ.
ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ಮೊದಲು ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ರೋಹಿತ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವೊದಗಿಸಿದ್ರು. ಮೊದಲ ವಿಕೆಟ್‌ಗೆ ಈ ಜೋಡಿ 71 ರನ್‌ಗಳ ಜೊತೆಯಾಟ ಆಡಿದೆ.

ರೋಹಿತ್ ಶರ್ಮಾ 47 ರನ್ ಗಳಿಸಿ ಔಟಾದ್ರೆ, ಶುಭಮನ್ ಗಿಲ್ 80 ರನ್ ಗಳಿಸಿ ರಿರ್ಟೈರ್ಡ್ ಹರ್ಟ್ ಆದ್ರು. ನಂತರ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಆರ್ಭಟಿಸೋದಕ್ಕೆ ಶುರು ಮಾಡಿದ್ರು. ವಿರಾಟ್ ಕೊಹ್ಲಿ 113 ಎಸೆತಗಳಲ್ಲಿ 117 ರನ್ ಬಾರಿಸಿ ವಿಶ್ವದಾಖಲೆಯ ಶತಕ ಸಿಡಿಸಿದ್ರೆ, ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 105 ರನ್ ಗಳಿಸುವ ಮೂಲಕ ಸತತ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದ್ರು.
ಇದನ್ನೂ ಓದಿ : ವಿಶ್ವಕಪ್ 2023 ತಂಡ ಪ್ರಕಟ : ವಿರಾಟ್ ಕೊಹ್ಲಿ ನಾಯಕ, ರೋಹಿತ್ ಶರ್ಮಾಗಿಲ್ಲ ಸ್ಥಾನ
ನಂತರ ಬಂದ ಕನ್ನಡಿಗ ಕೆಎಲ್ ರಾಹುಲ್ 39 ರನ್ ಗಳಿಸಿದ್ರು. ಭಾರತ ಅಂತಿಮವಾಗಿ 50 ಓವರ್‌ಗಳಲ್ಲಿ 4ವಿಕೆಟ್ ಕಳೆದುಕೊಂಡು 397 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಟೀಂ ಸೌಥಿ 3 ವಿಕೆಟ್ ಪಡೆದುಕೊಂಡ್ರೆ, ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದುಕೊಂಡಿದ್ದಾರೆ. ಭಾರತಗಳಿಸಿದ ಸವಾಲಿನ ಮೊತ್ತವನ್ನು ಬೆನ್ನತ್ತಲು ಹೊರಟ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಆರಂಭಿಕ ಆಘಾತ ನೀಡಿದ್ರು.
ಡ್ವೇನ್ ಕಾನ್ವೆ 13 ರನ್ ಗಳಿಸಿ ಆಡುತ್ತಿದ್ದಾಗ ಮೊಹಮ್ಮದ್ ಸೆಮಿ ಬಲಿ ಪಡೆದ್ರು. ನಂತರ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಅವರನ್ನು ಕೂಡ ಸೆಮಿ ಔಟ್ ಮಾಡಿದ್ರು. ನಂತರ ನಾಯಕ ಕೇನ್ ವಿಲಿಯಂಸನ್ ಜೊತೆಯಾದ ಮಿಚೆಲ್ ಇನ್ನಿಂಗ್ಸ್ ಕಟ್ಟಲು ಮುಂದಾದ್ರು. ಈ ಜೋಡಿ 2ನೇ ವಿಕೆಟ್‌ಗೆ ಬರೋಬ್ಬರಿ 190 ರನ್ ಗಳ ಜೊತೆಯಾಟ ಆಡಿದೆ.
ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಅಫ್ಘಾನಿಸ್ತಾನ : ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ
ವಿಲಿಯಂಸನ್ 69 ರನ್ ಗಳಿಸಿದ್ರೆ, ಡ್ವೇನ್ ಕಾನ್ವೆ 119 ಎಸೆತಗಳಲ್ಲಿ 134 ರನ್ ಸಿಡಿಸಿದ್ದಾರೆ. ಆದರೆ ಈ ಜೋಡಿಯನ್ನು ಕೂಡ ಮೊಹಮ್ಮದ್ ಸೆಮಿ ಬಲಿ ಪಡೆದಿದ್ದಾರೆ. ನಂತರ ಗ್ಲೇನ್ ಫಿಲಿಫ್ 41 ರನ್ ಗಳಿಸಿದ್ದು ಹೊರತು ಪಡಿಸಿದ್ರೆ ಉಳಿದ ಯಾವುದೇ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶವನ್ನೇ ನೀಡಲಿಲ್ಲ.

ಮೊಹಮ್ಮದ್ ಸೆಮಿ ಬೌಲಿಂಗ್ ಆರ್ಭಟಕ್ಕೆ ನ್ಯೂಜಿಲೆಂಡ್ ಆಟಗಾರರು ತತ್ತರಿಸಿ ಹೋಗಿದ್ದಾರೆ. ಸೆಮಿ 9.5 ಓವರ್ ಬೌಲಿಂಗ್ ಮಾಡಿದ್ದು, 57 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ಆಟಗಾರರನ್ನು ಕಟ್ಟಿ ಹಾಕಿದ್ದಾರೆ. ಅಂತಿಮವಾಗಿ ನ್ಯೂಜಿಲೆಂಡ್ ತಂಡ 48.5 ಓವರ್‌ಗಳಲ್ಲಿ 327 ರನ್ ಗಳಿಸುವ ಮೂಲಕ ಆಲೌಟ್ ಆಗಿದೆ.
india vs New Zealand World Cup 1st Semi final india Win by 70 runs, Enter Worl Cup final Virat Kohli century, mohammed shami 7 wicket