ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಅಫ್ಘಾನಿಸ್ತಾನ : ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ

ಪಾಕಿಸ್ತಾನದಲ್ಲಿ 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ 2025 (ICC champions trophy 2025 ) ಗೆ ಅರ್ಹತೆ ಪಡೆದಿದೆ. ಐಸಿಸಿ ಏಕದಿನ ವಿಶ್ವಕಪ್‌ ನಲ್ಲಿ ಬಾಂಗ್ಲಾ ವಿರುದ್ದ ಶ್ರೀಲಂಕಾ ತಂಡ ಸೋತ ಬೆನ್ನಲ್ಲೇ ಅಫ್ಘಾನಿಸ್ತಾನ ತಂಡ ಚಾಂಪಿಯನ್ಸ್‌ ಟ್ರೋಫಿಯನ್ನು ಭಾಗಿಯಾಗುವುದನ್ನು ಖಚಿತ ಪಡಿಸಿದೆ.

World Cup 2023 Australia vs Afghanistan : ಅಪ್ಘಾನಿಸ್ತಾನ ಕ್ರಿಕೆಟ್‌ ತಂಡ (Afghanistan Cricket Team)ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ವಿಶ್ವದ ಶ್ರೇಷ್ಟ ತಂಡಗಳಿಗೆ ಸೋಲಿನ ರುಚಿ ತೋರಿಸಿದೆ. ಸದ್ಯ ಸೆಮಿಫೈನಲ್‌ನತ್ತ ಮುಖ ಮಾಡಿದೆ. ಈ ನಡುವಲ್ಲೇ ಹೊಸ ಇತಿಹಾಸ ಸೃಷ್ಟಿಸಿರುವ ಅಫ್ಘಾನಿಸ್ತಾನ ತಂಡ 2025ರ ಚಾಂಪಿನ್ಸ್‌ ಟ್ರೋಫಿಗೆ ಅರ್ಹತೆ ಪಡೆದಿದೆ.

ಪಾಕಿಸ್ತಾನದಲ್ಲಿ 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ 2025 (ICC champions trophy 2025 ) ಗೆ ಅರ್ಹತೆ ಪಡೆದಿದೆ. ಐಸಿಸಿ ಏಕದಿನ ವಿಶ್ವಕಪ್‌ ನಲ್ಲಿ ಬಾಂಗ್ಲಾ ವಿರುದ್ದ ಶ್ರೀಲಂಕಾ ತಂಡ ಸೋತ ಬೆನ್ನಲ್ಲೇ ಅಫ್ಘಾನಿಸ್ತಾನ ತಂಡ ಚಾಂಪಿಯನ್ಸ್‌ ಟ್ರೋಫಿಯನ್ನು ಭಾಗಿಯಾಗುವುದನ್ನು ಖಚಿತ ಪಡಿಸಿದೆ.

Afghanistan vs Austraila ODI Afghanistan Cricket Team Create History in World Cup 2023 Qualifies for Champions Trophy 2025
Image credit to Original Source

ಇದನ್ನೂ ಓದಿ : ವಿಶ್ವಕಪ್‌ ಸೆಮಿಫೈನಲ್‌ : ಪಾಕಿಸ್ತಾನಕ್ಕೆ ಇನ್ನೂ ಇದೆ ಅವಕಾಶ, ಭಾರತ – ಪಾಕಿಸ್ತಾನ ಮುಖಾಮುಖಿ ?

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಒಟ್ಟು ಎಂಟು ತಂಡಗಳಿಗೆ ಮಾತ್ರವೇ ಅರ್ಹತೆ ಸಿಗಲಿದೆ. ಆಯೋಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ ಅತಿಥೇಯ ರಾಷ್ಟ್ರವಾಗಿ ಅರ್ಹತೆಯನ್ನು ಪಡೆದಿದೆ. ಅಲ್ಲದೇ ಭಾರತ, ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳು ಅರ್ಹತೆ ಪಡೆದುಕೊಂಡಿವೆ.

ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯ, ಪಾಕಿಸ್ತಾನ, ಅಫ್ಘಾನಿಸ್ತಾನ ತಂಡಗಳು ಪಾಲ್ಗೊಳ್ಳುವುದು ಖಚಿತವಾಗಿದ್ದು, ಉಳಿದ ಎರಡು ಸ್ಥಾನಗಳಿಗಾಗಿ ಇಂಗ್ಲೆಂಡ್‌, ಶ್ರೀಲಂಕಾ, ನೆದರ್‌ ಲ್ಯಾಂಡ್‌, ಬಾಂಗ್ಲಾದೇಶ ತಂಡಗಳು ಪೈಪೋಟಿ ನಡೆಸಲಿವೆ.

Afghanistan vs Austraila ODI Afghanistan Cricket Team Create History in World Cup 2023 Qualifies for Champions Trophy 2025
Image credit to Original Source

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಶತಕ ವಿಶ್ವದಾಖಲೆ : ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೀಗೆ ಹೇಳಿದ್ಯಾಕೆ ?

ವಿಶ್ವಕಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎಂಟು ತಂಡಗಳು ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಆಡಲಿವೆ. ಈ ಬಾರಿಯ ವಿಶ್ವಕಪ್ 2023 ರಲ್ಲಿ ಅಫ್ಘಾನಿಸ್ತಾನ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದೆ. ಅಫ್ಘಾನಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌, ಪಾಕಿಸ್ತಾನ, ನೆದರ್‌ ಲ್ಯಾಂಡ್‌ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದು, ಸೆಮಿಫೈನಲ್‌ ಹಾದಿಯಲ್ಲಿದೆ.

ಆದೆ 2015 ಮತ್ತು 2019 ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಕೇವಲ ಒಂದು ಪಂದ್ಯವನ್ನು ಮಾತ್ರವೇ ಗೆಲ್ಲಲು ಸಾಧ್ಯವಾಗಿತ್ತು. ಆಸ್ಟ್ರೇಲಿಯಾ ವಿರುದ್ದ ಇಂದು ಪಂದ್ಯವನ್ನು ಆಡುತ್ತಿದ್ದು, ಒಂದೊಮ್ಮೆ ಅಫ್ಘಾನಿಸ್ತಾನ ಗೆಲುವನ್ನು ಕಂಡ್ರೆ ಸೆಮಿಫೈನಲ್‌ ಹಾದಿ ಇನ್ನಷ್ಟು ಸುಗಮವಾಗಲಿದೆ. ಸದ್ಯ ವಿಶ್ವಕಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಪ್ಘಾನಿಸ್ತಾನ ತಂಡ 8 ಅಂಕಗಳನ್ನು ಪಡೆದುಕೊಂಡಿದೆ.

Afghanistan vs Austraila ODI Afghanistan Cricket Team Create History in World Cup 2023 Qualifies for Champions Trophy 2025
Image credit to Original Source

ಇದನ್ನೂ ಓದಿ : ಕೇವಲ 55 ರನ್‌ಗೆ ಶ್ರೀಲಂಕಾ ಆಲೌಟ್‌ : ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಒಂದೊಮ್ಮೆ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ್ದೇ ಆದ್ರೆ ವಿಶ್ವಕಪ್‌ ಸೆಮಿಫೈನಲ್‌ ನಲ್ಲಿ ಅಫ್ಘಾನಿಸ್ತಾನ ಆಡುವುದು ಖಚಿತವಾಗಲಿದೆ. ಒಂದೊಮ್ಮೆ ಅಫ್ಘಾನಿಸ್ತಾನ ತಂಡ ಸೋಲನ್ನು ಕಂಡ್ರೆ ನ್ಯೂಜಿಲೆಂಡ್‌ ಅಥವಾ ಪಾಕಿಸ್ತಾನ ತಂಡ ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಡಲಿವೆ.

Afghanistan vs Austraila ODI Afghanistan Cricket Team Create History in World Cup 2023 : Qualifies for Champions Trophy 2025

Comments are closed.