ಸೋಮವಾರ, ಏಪ್ರಿಲ್ 28, 2025
HomeSportsCricketIPL 2024 Auction : ಐಪಿಎಲ್ ಹರಾಜು, ಖ್ಯಾತ ಆಟಗಾರನನ್ನು ಕೈ ಬಿಟ್ಟ RCB

IPL 2024 Auction : ಐಪಿಎಲ್ ಹರಾಜು, ಖ್ಯಾತ ಆಟಗಾರನನ್ನು ಕೈ ಬಿಟ್ಟ RCB

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 10 ತಂಡಗಳು ಐಪಿಎಲ್‌ (IPL 2024) ಹರಾಜಿಗೆ ಸಿದ್ದತೆ ನಡೆಸಿವೆ. ಈ ಹಿಂದಿನ ಹರಾಜಿನಲ್ಲಿ ಲಭ್ಯವಿದ್ದ 95 ಕೋಟಿ ರೂ.ನಲ್ಲಿ ಹರಾಜು ನಡೆಯಲಿದೆ. ಈ ಮೊತ್ತ 100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. ಈ ನಡುವಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಖ್ಯಾತ ಆಟಗಾರರನ್ನು ತಂಡದಿಂದ ಕೈಬಿಡಲು ಮುಂದಾಗಿದೆ.

IPL 2024 Auction Date Paylers list RCB dropped a famous player
Image credit to Original Source

ವಿಶ್ವಕಪ್‌ ಬೆನ್ನಲ್ಲೇ ಇದೀಗ ಬಿಸಿಸಿಐ ಐಪಿಎಲ್‌ ಪಂದ್ಯಾವಳಿಗೆ ಸಿದ್ದತೆ ನಡೆದಿದೆ. ಇಷ್ಟು ಋತುಗಳ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲಿ ನಡೆಸಿದ್ದ ಬಿಸಿಸಿಐ ಈ ಬಾರಿ ವಿದೇಶದಲ್ಲಿ ಹರಾಜು ನಡೆಸಲು ಮುಂದಾಗಿದೆ. ಈಗಾಗಲೇ ತಂಡಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಿದ್ದ ಪಡಿಸುತ್ತಿವೆ.

ಇದನ್ನೂ ಓದಿ : 11 ಪಂದ್ಯ 3 ಶತಕ, 765 ರನ್ : ವಿಶ್ವಕಪ್‌ ಸೋತರು ವಿಶ್ವದಾಖಲೆ ಬರೆದ ವಿರಾಟ್‌ ಕೊಹ್ಲಿ

ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ IPL 2024ರ ಋತುವಿಗಾಗಿ ಈ ಬಾರಿ ಐಪಿಎಲ್‌ ಹರಾಜು ನಡೆಯಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಹರಾಜಿನಲ್ಲಿ ಖ್ಯಾತ ನಾಮ ಆಟಗಾರರು ಹರಾಜು ಆಗಲಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜು ವಿದೇಶದಲ್ಲಿ ನಡೆಯುತ್ತಿದೆ.

ಐಪಿಎಲ್‌ ತಂಡಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ನವೆಂಬರ್‌ ನವೆಂಬರ್ 26ರ ಒಳಗಾಗಿ ಸಲ್ಲಿಕೆ ಮಾಡಬೇಕಾಗಿದೆ. 10 ಐಪಿಎಲ್ ತಂಡಗಳ ಪರ್ಸ್ (ಆಟಗಾರರ ಬಿಡ್ ಮೊತ್ತ) ಹಿಂದಿನ ಹರಾಜಿನಲ್ಲಿ ಲಭ್ಯವಿದ್ದ 95 ಕೋಟಿ ರೂ.ಗಳಿಂದ 100 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

IPL 2024 Auction Date Paylers list RCB dropped a famous player
Image Credit to Original Source

ಕಳೆದ ವರ್ಷ ಪಂಜಾಬ್ ಕಿಂಗ್ಸ್ ಬಳಿ 12.20 ಕೋಟಿ ಇತ್ತು, ನಂತರ ಇದಕ್ಕೆ 5 ಕೋಟಿ ರೂ.ಗಳನ್ನು ಸೇರಿಸುವ ಮೂಲಕ ಈ ಮೊತ್ತ ರೂ.17.20 ಕೋಟಿಗೆ ಏರಿಕೆಯಾಗಿದೆ. ಮುಂಬೈ ಇಂಡಿಯನ್ಸ್ 50 ಲಕ್ಷ ರೂ.ಗಳು ಈಗ 5 ಕೋಟಿಗಳ ಜೊತೆಗೆ ಈ ಮೊತ್ತವು 5.05 ಕೋಟಿಗಳಾಗಲಿದೆ. ಸನ್‌ರೈಸರ್ಸ್ ಹೈದರಾಬಾದ್‌ ನ ಪರ್ಸ್ ಈಗ 11.55 ಕೋಟಿ ರೂ.

ಇದನ್ನೂ ಓದಿ : ಗುಜರಾತ್‌ ಟೈಟಾನ್ಸ್‌ಗೆ ರೋಹಿತ್‌ ಶರ್ಮಾ : ಮುಂಬೈ ಇಂಡಿಯನ್ಸ್‌ಗೆ ಯಾರು ನಾಯಕ ?

ಗುಜರಾತ್ ಟೈಟಾನ್ಸ್‌ನ ಪರ್ಸ್ 4.45 ಕೋಟಿ ರೂ.ಗಳಷ್ಟಿತ್ತು, ಈಗ ಅದು 9.45 ಕೋಟಿ ರೂ.ಗೆ ಏರಿಕೆಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ನ ಪರ್ಸ್ ಈಗ 9.45 ಕೋಟಿ ರೂ.ಗೆ ಏರಿಕೆಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಪರ್ಸ್ ಒಟ್ಟು 8.55 ಕೋಟಿ ರೂ.ಗೆ ಏರಿಕೆಯಾಗಿದೆ. 1.75 ಕೋಟಿಗೆ 5 ಕೋಟಿ ಸೇರಿಸುವ ಮೂಲಕ RCB 6.75 ಕೋಟಿಗಳನ್ನು ಹೊಂದಿರುತ್ತದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 6.5 ಕೋಟಿ ರೂ.

ಇದನ್ನೂ ಓದಿ : ವಿಶ್ವಕಪ್ 2023 ಸೋಲು : ರೋಹಿತ್ ಶರ್ಮಾ ಔಟ್, ಟೀಂ ಇಂಡಿಯಾಕ್ಕೆ ಹೊಸ ನಾಯಕನ ಆಯ್ಕೆ ಮಾಡಿದ ಬಿಸಿಸಿಐ

ಐಪಿಎಲ್ ಸಮಿತಿಯ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಯು ತಮ್ಮ ತಂಡದಲ್ಲಿ ಗರಿಷ್ಠ 8 ವಿದೇಶಿ ಆಟಗಾರರನ್ನು ಒಳಗೊಂಡಂತೆ 25 ಆಟಗಾರರನ್ನು ಹೊಂದಬಹುದು. 11 ಆಡುವಾಗ, ಪ್ರತಿ ತಂಡವು ಗರಿಷ್ಠ 4 ವಿದೇಶಿ ಆಟಗಾರರನ್ನು ಕಣಕ್ಕಿಳಿಸಬಹುದು.

IPL 2024 Auction Date Paylers list RCB dropped a famous player

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular