ಪತ್ನಿ, ಮಗಳಿಗೆ ಹಾವು ಕಚ್ಚಿಸಿ ಹತ್ಯೆ : 1 ತಿಂಗಳ ಬಳಿಕ ಬಯಲಾಯ್ತು ಹತ್ಯೆಯ ಸೀಕ್ರೆಟ್‌

ತಂದೆಯೋರ್ವ ತನ್ನ ಎರಡು ವರ್ಷದ ಮಗಳು ಹಾಗೂ ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಲೆಗೈದಿರುವ ಘಟನೆ ಒಡಿಶಾ (Odisha ) ದಲ್ಲಿ ನಡೆದಿದೆ. ಬರೋಬ್ಬರಿ ಒಂದು ತಿಂಗಳ ಬಳಿಕ ಪೊಲೀಸರು  ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಭುವನೇಶ್ವರ : ತಂದೆಯೋರ್ವ ತನ್ನ ಎರಡು ವರ್ಷದ ಮಗಳು ಹಾಗೂ ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಲೆಗೈದಿರುವ ಘಟನೆ ಒಡಿಶಾ (Odisha ) ದಲ್ಲಿ ನಡೆದಿದೆ. ಬರೋಬ್ಬರಿ ಒಂದು ತಿಂಗಳ ಬಳಿಕ ಪೊಲೀಸರು  ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಒಡಿಶಾದ ಅಧೇಗಾಂವ್‌ ಗ್ರಾಮದ ನಿವಾಸಿ ಗಣೇಶ್‌ (25 ವರ್ಷ) ಎಂಬಾತನೇ ಕೊಲೆಗೈದಿರುವ ಆರೋಪಿಯಾಗಿದ್ದಾನೆ. ಮೃತಪಟ್ಟವರನ್ನು ಪತ್ನಿ ಬಸಂತಿ ಪತ್ರಾ (23 ವರ್ಷ) ಹಾಗೂ ಮಗಳು ದೇಬಾಸ್ಮಿತಾ ( 2 ವರ್ಷ) ಎಂದು ಗುರುತಿಸಲಾಗಿದೆ. ಪತ್ನಿ ಹಾಗೂ ಮಗಳು ರೂಮಿನಲ್ಲಿ ಮಲಗಿದ್ದ ವೇಳೆಯಲ್ಲಿ ಆರೋಪಿ ಗಣೇಶ್‌ ವಿಷಪೂರಿತ ಹಾವನ್ನು ಬಿಟ್ಟು ಇಬ್ಬರನ್ನೂ ಹತ್ಯೆ ಮಾಡಿದ್ದಾರೆ.

odisha man kills 2 years old daughter and wife by snake
Image Credit to Original Source

ಆಕಸ್ಮಿಕವಾಗಿ ಹಾವು ಕಡಿದು ಪತ್ನಿ ಹಾಗೂ ಮಗಳು ಸಾವನ್ನಪ್ಪಿರುವುದಾಗಿ ನೆರೆ ಹೊರೆಯವರನ್ನು ನಂಬಿಸಿದ್ದ. ಆದರೆ ಮೃತ ಬಸಂತಿಯ ಮಾವ ಈ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದರು. ಈ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಸುಮಾರು ಒಂದು ತಿಂಗಳ ಕಾಲ ತನಿಖೆ ನಡೆಸಿದ ಬಳಿಕ ಪೊಲೀಸರು ಆರೋಪಿ ಗಣೇಶ್‌ನನ್ನು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್‌ 6 ರಂದು ಧಾರ್ಮಿಕ ಕಾರ್ಯಕ್ರಮದ ಸಲುವಾಗಿ ಹಾವನ್ನು ತಂದಿದ್ದ ಅನ್ನೋ ಮಾಹಿತಿ ಲಭ್ಯವಾಗಿತ್ತು. ಈ ಕುರಿತು ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಆರೋಪಿ ಯನ್ನು ಸುದೀರ್ಘ ಅವಧಿಯ ಕಾಲ ವಿಚಾರಣೆಗೆ ಒಳಪಡಿಸಿದ್ದರು.

odisha man kills 2 years old daughter and wife by snake
Image Credit to Original Source

ಆದರೆ ಆರೋಪಿ ಆರಂಭದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕಿಸಿದ್ದನು. ಆದರೆ ಪೊಲೀಸರ ತನಿಖೆ ಚುರುಕಾಗುತ್ತಿದ್ದಂತೆಯೇ ಆರೋಪಿ ಗಣೇಶ್‌ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪತ್ನಿ ಹಾಗೂ ತನ್ನ ನಡುವೆ ಕೌಟುಂಬಿಕ ಭಿನ್ನಾಭಿಪ್ರಾಯಗಳಿತ್ತು. ಇದೇ ಕಾರಣಕ್ಕೆ ತಾನು ಕೊಲೆ ಮಾಡಿದ್ದೇನೆ ಎಂದಿದ್ದಾನೆ.

ಇದನ್ನೂ ಓದಿ : ಮದುವೆ ಮನೆಯಲ್ಲಿ ರಸಗುಲ್ಲಾ ಕಡಿಮೆಯಾಯ್ತು ಅಂತಾ ಫೈಟಿಂಗ್​ : ಆರು ಮಂದಿ ಆಸ್ಪತ್ರೆಗೆ ದಾಖಲು

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕೌಟುಂಬಿಕ ಕಲಹಕ್ಕೆ ಜನರು ಎಂತಹ ನೀಚ ಕೆಲಸಕ್ಕೆ ಇಳಿಯುತ್ತಾರೆ ಅನ್ನೋದಕ್ಕೆ ಈ ಸ್ಟೋರಿಯೇ ಬೆಸ್ಟ್‌ ಎಕ್ಸಾಂಪಲ್.‌ ಕೇವಲ ಒಡಿಶಾದಲ್ಲಿ ಮಾತ್ರವಲ್ಲ ನೆರೆಯ ಕೇರಳದಲ್ಲಿಯೂ ಇಂತಹದ್ದೇ ಘಟನೆ ನಡೆದಿದ್ದು, ಪೊಲೀಸರು ಹಾವಾಡಿಗನನ್ನು ಬಂಧಿಸಿದ್ದಾರೆ.

ಕೇರಳದ ಕೊಲ್ಲಂನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಯಲ್ಲಿ ಪತಿಯೋರ್ವ ಆಸ್ತಿ ಆಸೆಗೆ ತನ್ನ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಕೊಲೆಗೈದಿದ್ದಾನೆ. ಉತ್ತರ ( 25 ವರ್ಷ) ಎಂಬಾಕೆ ಹಾವು ಕಚ್ಚಿ ಸಾವನ್ನಪ್ಪಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೂರಜ್‌ ಹಾಗೂ ಹಾವಾಡಿಗ ಸುರೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ

odisha man kills 2 years old daughter and wife by snake

Comments are closed.