IPL 2024 RCB Team : ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಎಲ್ಲಾ ತಂಡಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಾಪ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾತರವಾಗಿದೆ. ಈ ಬಾರಿ ಉತ್ತಮ ಆಟಗಾರರ ತಂಡವನ್ನು ಕಟ್ಟಲು ಹವಣಿಸುತ್ತಿದೆ. ಇದಕ್ಕಾಗಿಯೇ ಹಲವು ಆಟಗಾರರನ್ನು ಅದಲು ಬದಲು ಮಾಡಿಕೊಂಡಿದೆ.

ವಿಶ್ವದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನೊಂದೆಡೆ ಯಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಅಪ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಸ್ಪೋಟ ಬ್ಯಾಟಿಂಗ್ ನಡೆಸಿ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದು ಆರ್‌ಸಿಬಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಇದನ್ನೂ ಓದಿ : IPL 2024 Auction : ಐಪಿಎಲ್ ಹರಾಜು, ಖ್ಯಾತ ಆಟಗಾರನನ್ನು ಕೈ ಬಿಟ್ಟ RCB
ರಾಯಲ್ ಚಾಲೆಂಜರ್ಸ್ ತಂಡ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಬೌಲರ್ ಹರ್ಷಲ್ ಪಟೇಲ್ ಹಾಗೂ ಅನುಜ್ ರಾವತ್ ಅವರನ್ನು ಈಗಾಗಲೇ ತಂಡದಿಂದ ಬಿಡುಗಡೆ ಮಾಡಿದೆ. ಸದ್ಯ ಆರ್‌ಸಿಬಿ ಬಳಿಯಲ್ಲಿ 1.75 ಕೋಟಿ ರೂ. ಇದೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ತಂಡಗಳು ನವೆಂಬರ್ ನವೆಂಬರ್ 26 (ಭಾನುವಾರ)ದ ಒಳಗಾಗಿ ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕಾಗಿದೆ.
ಡಿಸೆಂಬರ್ 19 ರಂದು ಐಪಿಎಲ್ 2024 ಹರಾಜು ದುಬೈನಲ್ಲಿ ನಡೆಯಲಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಹಬಾಜ್ ಅಹ್ಮದ್ ಅವರನ್ನು ಸನ್‌ರೈಸಸ್ ಹೈದ್ರಾಬಾದ್ ತಂಡಕ್ಕೆ ಹಾಗೂ ಮಯಾಂಕ್ ದಾಗರ್ ಅವರನ್ನು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಅದಲು ಬದಲು ಮಾಡಿಕೊಂಡಿದೆ. ಉಳಿದಂತೆ ಯಾವ ಆಟಗಾರರನ್ನು ಅದಲು ಬದಲು ಮಾಡಿಕೊಂಡಿದೆ ಅನ್ನೋದು ಅಧಿಕೃತಪಟ್ಟಿ ಬಿಡುಗಡೆಯ ನಂತರ ತಿಳಿದು ಬರಬೇಕಾಗಿದೆ.

ಇದನ್ನೂ ಓದಿ : ಐಪಿಎಲ್ ಹರಾಜಿಗೆ ಆಟಗಾರರ ಬಿಡುಗಡೆ ಪಟ್ಟಿ : 10 ಐಪಿಎಲ್ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ :
ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಮಹಿಪಾಲ್ ಲೊಮೊರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಕೇದಾರ್ ಜಾಧವ್, ವನಿಂದು ಹಸ್ರಂಗ, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಆನ್. ರಾವತ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಜೋಶ್ ಹ್ಯಾಜಲ್‌ವುಡ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸೋನು ಯಾದವ್, ವೇಯ್ನ್ ಪಾರ್ನೆಲ್, ವಿಜಯ್ ಕುಮಾರ್ ವೈಶಾಕ್.
ಇದನ್ನೂ ಓದಿ : ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್ ಜೈಂಟ್ಸ್ : ರಾಹುಲ್ ಜೊತೆ 4 ಮಂದಿ ಕರ್ನಾಟಕದ ಆಟಗಾರರು
IPL 2024 Auction RCB Retained And Released Player Complete List