ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್‌ ಜೈಂಟ್ಸ್‌ : ರಾಹುಲ್‌ ಜೊತೆ 4 ಮಂದಿ ಕರ್ನಾಟಕದ ಆಟಗಾರರು

IPL 2024 : ಆರ್‌ಸಿಬಿಯಲ್ಲಿ ಒಂದೆರಡು ಕರ್ನಾಟಕದ ಆಟಗಾರರು ಇದ್ರೆ, ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants)ನಲ್ಲಿ ನಾಯಕ ಕೆಎಲ್‌ ರಾಹುಲ್‌ ಜೊತೆಗೆ ನಾಲ್ಕು ಮಂದಿ ಕನ್ನಡಿಗ ಆಟಗಾರರು ಇರುವುದು ವಿಶೇಷ.

IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಈ ಬಾರಿ ಕನ್ನಡಿಗರ ಫೇವರೇಟ್‌ ತಂಡವಾಗುವ ಸಾಧ್ಯತೆಯಿದೆ. ಆರ್‌ಸಿಬಿಯಲ್ಲಿ ಒಂದೆರಡು ಕರ್ನಾಟಕದ ಆಟಗಾರರು ಇದ್ರೆ, ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants)ನಲ್ಲಿ ನಾಯಕ ಕೆಎಲ್‌ ರಾಹುಲ್‌ ಜೊತೆಗೆ ನಾಲ್ಕು ಮಂದಿ ಕನ್ನಡಿಗ ಆಟಗಾರರು ಇರುವುದು ವಿಶೇಷ.

IPL 2024 Lucknow Super Giants are Kannadigas team not RCB 4 players from Karnataka along with KL Rahul
Image Credit to Original Source

ಕಳೆದ ಎರಡು ಋತುಗಳಿಂದ ಐಪಿಎಲ್‌ಗೆ ಎಂಟ್ರಿ ಕೊಟ್ಟಿರುವ ಲಕ್ನೋ ಸೂಪರ್‌ ಜೈಂಟ್ಸ್‌ ಎರಡೂ ಋತುವಿನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಕಳೆದ ಬಾರಿ ಲೀಗ್‌ ಹಂತದ ಆರಂಭದಲ್ಲಿ ಅಗ್ರಸ್ಥಾನದಲ್ಲಿದ್ದ ಲಕ್ನೋ ನಾಯಕ ರಾಹುಲ್‌ ಅನಾರೋಗ್ಯಕ್ಕೆ ತುತ್ತಾದರೂ ಕೂಡ ಎಲಿಮಿನೇಟರ್‌ ಹಂತಕ್ಕೆ ಎಂಟ್ರಿ ಕೊಟ್ಟಿತ್ತು.

ಇದನ್ನೂ ಓದಿ : ಗುಜರಾತ್‌ ಟೈಟಾನ್ಸ್‌ಗೆ ರೋಹಿತ್‌ ಶರ್ಮಾ : ಮುಂಬೈ ಇಂಡಿಯನ್ಸ್‌ಗೆ ಯಾರು ನಾಯಕ ?

ಆದರೆ ಎರಡೂ ಸೀಸನ್‌ಗಳಲ್ಲಿಯೂ ಎಲಿಮಿನೇಟರ್‌ ಹಂತದಲ್ಲಿಯೇ ಮುಗ್ಗರಿಸಿತ್ತು. ಆದ್ರೀಗ ತಂಡದ ಕೋಚ್‌, ಮೆಂಟರ್‌ ಬದಲಾಗಿದ್ದಾರೆ. ಟೀಂ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಲಕ್ನೋ ತಂಡದ ಮೆಂಟರ್‌ ಆಗುವ ಸಾಧ್ಯತೆಯಿದೆ. ಜಸ್ಟಿನ್‌ ಲ್ಯಾಂಗರ್‌ ಕೋಚ್‌ ಆಗಿ ನೇಮಕವಾಗಿದ್ದಾರೆ.

ಇನ್ನೊಂದೆಡೆಯಲ್ಲಿ ಕೆಎಲ್‌ ರಾಹುಲ್‌ ಈ ಬಾರಿ ಲಕ್ನೋ ತಂಡದ ನಾಯಕರಾಗಿ ಮುಂದುವರಿಯುವ ಸಾಧ್ಯತೆಯಿದೆ. ರಾಹುಲ್‌ ಅನುಪಸ್ಥಿತಿಯಲ್ಲಿ ಕೃನಾಲ್‌ ಪಾಂಡ್ಯ ತಂಡವನ್ನು ಮುನ್ನೆಡೆಸಿದ್ದರು. ಆದರೆ ಈ ಬಾರಿ ರಾಹುಲ್‌ ಫಿಟ್‌ ಆಗಿರುವುದು ಮಾತ್ರವಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವುದು ಲಕ್ನೋ ತಂಡಕ್ಕೆ ಆನೆಬಲ ತಂದಿದೆ.

ಇದನ್ನೂ ಓದಿ : IPL 2024 : ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ದ್ರಾವಿಡ್‌ ಮೆಂಟರ್‌ ? ಐಪಿಎಲ್‌ನತ್ತ ಟೀಂ ಇಂಡಿಯಾ ಕೋಚ್‌ ಚಿತ್ತ

ಲಕ್ನೋ ತಂಡದಲ್ಲಿ ನಾಲ್ಕು ಮಂದಿ ಕನ್ನಡಿಗರು

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಕಳೆದ ಬಾರಿ ಕೆಎಲ್‌ ರಾಹುಲ್‌, ಕರುಣ್‌ ನಾಯರ್‌ ಹಾಗೂ ಕೆ ಗೌತಮ್‌ ಪ್ರತಿನಿಧಿಸಿದ್ದರು. ಆದ್ರೆ ಈ ಬಾರಿ ದೇವದತ್‌ ಪಡಿಕ್ಕಲ್‌ ಅವರನ್ನು ಲಕ್ನೋ ಸೇರ್ಪಡೆ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ತಂಡದಲ್ಲೀಗ ನಾಲ್ವರು ಕನ್ನಡಿಗ ಆಟಗಾರರಿದ್ದಾರೆ.

IPL 2024 Lucknow Super Giants are Kannadigas team not RCB 4 players from Karnataka along with KL Rahul
Image Credit to Original Source

ಲಕ್ನೋ ಸೇರ್ತಾರಾ ಮಯಾಂಕ್ ಅಗರ್‌ವಾಲ್‌

ಕರ್ನಾಟಕದ ಮತ್ತೋರ್ವ ಆಟಗಾರ ಮಯಾಂಕ್‌ ಅಗರ್‌ವಾಲ್‌ ಕೂಡ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಸದ್ಯ ಸನ್‌ರೈಸಸ್‌ ಹೈದ್ರಾಬಾದ್‌ ತಂಡವನ್ನು ಮಯಾಂಕ್‌ ಅಗರ್‌ವಾಲ್‌ ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ : ಐಪಿಎಲ್‌ ಹರಾಜಿಗೆ ಆಟಗಾರರ ಬಿಡುಗಡೆ ಪಟ್ಟಿ : 10 ಐಪಿಎಲ್ ತಂಡಗಳ ಸಂಪೂರ್ಣ ಪಟ್ಟಿ‌ ಇಲ್ಲಿದೆ

ಮಯಾಂಕ್‌ ಅಗರ್‌ವಾಲ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್‌, ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌, ಪಂಜಾಬ್‌ ಕಿಂಗ್ಸ್‌, ಸನ್‌ರೈಸಸ್‌ ಹೈದ್ರಾಬಾದ್‌ ತಂಡವನ್ನು ಅವರು ಪ್ರತಿನಿಧಿಸಿದ್ದರು. ಮಯಾಂಕ್‌ ಕೂಡ ಲಕ್ನೋ ಸೇರ್ಪಡೆ ಆದ್ರೆ ಅಲ್ಲಿಗೆ ತಂಡದಲ್ಲಿ ಕರ್ನಾಟಕದ ಆಟಗಾರರ ಸಂಖ್ಯೆ 5 ಕ್ಕೆ ಏರಿಕೆಯಾಗಲಿದೆ.

ಲಕ್ನೋ ತಂಡಕ್ಕೆ ರಾಹುಲ್‌ ದ್ರಾವಿಡ್‌ ಮೆಂಟರ್‌

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅವರು ಮುಂದುವರಿಯುವ ಸಾಧ್ಯತೆ ತೀರಾ ಕಡಿಮೆ. ರಾಹುಲ್‌ ದ್ರಾವಿಡ್‌ ಈಗಾಗಲೇ ಐಪಿಎಲ್‌ ಕಡೆಗೆ ಆಸಕ್ತಿ ಹೊಂದಿದ್ದಾರೆ. ಇದೇ ಕಾರಣದಿಂದಲೇ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಮೆಂಟರ್‌ ಆಗುವ ಸಾಧ್ಯತೆಯಿದೆ.

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌ ಈಗಾಗಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಮೆಂಟರ್‌ ಆಗಿದ್ದಾರೆ. ಹೀಗಾಗಿ ಲಕ್ನೋ ತಂಡದಲ್ಲಿ ಮೆಂಟರ್‌ ಹುದ್ದೆ ಖಾಲಿ ಇದ್ದು, ಆ ಸ್ಥಾನವನ್ನು ರಾಹುಲ್‌ ದ್ರಾವಿಡ್‌ ತುಂಬಲಿದ್ದಾರೆ ಎನ್ನಲಾಗುತ್ತಿದೆ.

ಐಪಿಲ್‌ನಲ್ಲಿ ಲಕ್ನೋ ಬೆಂಬಲಿಸ್ತಾರಾ ಕನ್ನಡಿಗರು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈಗಾಗಲೇ ನಾಲ್ವರು ಕನ್ನಡಿಗ ಆಟಗಾರರಿದ್ದು, ಮಯಾಂಕ್‌ ಸೇರ್ಪಡೆ ಆದ್ರೆ ಅಲ್ಲಿಗೆ ಕರ್ನಾಟಕ ಆಟಗಾರರ ಸಂಖ್ಯೆ ಐದಕ್ಕೆ ಏರಿಕೆಯಾಗಲಿದ್ದು, ರಾಹುಲ್‌ ಮೆಂಟರ್‌ ಆದ್ರೆ ಲಕ್ನೋ ಸಂಪೂರ್ಣ ಕನ್ನಡಿಗರ ತಂಡ ವಾಗಲಿದೆ. ಹೀಗಾಗಿ ಕನ್ನಡಿಗರು ಈ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಬೆಂಬಲಿಸುವ ಸಾಧ್ಯತೆಯಿದೆ.

IPL 2024 Lucknow Super Giants are Kannadigas team not RCB 4 players from Karnataka along with KL Rahul

Comments are closed.