Jio Cinema IPL 2024 : ಇಂಡಿಯನ್ ಪ್ರೀಮಿಯರ್ ಲೀಗ್ (indian Premier Leauge) ಆರಂಭಕ್ಕೆ ಕ್ರಿಕೆಟ್ ಪ್ರಿಯರು ಕಾತರರಾಗಿದ್ದಾರೆ. ಕಳೆದ ಬಾರಿ ಕೋಟ್ಯಾಂತರ ಮಂದಿ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಅನ್ನು ಉಚಿತವಾಗಿ ವೀಕ್ಷಣೆ ಮಾಡಿದ್ದರು. ಆದ್ರೆ ಈ ಬಾರಿಯೂ ಜಿಯೋ ಗುಡ್‌ನ್ಯೂಸ್ ಕೊಟ್ಟಿದ್ದು, ಜಿಯೋ ಸಿನಿಮಾ (Jio Cinema) ಮೂಲಕ ಉಚಿತವಾಗಿ ಐಪಿಎಲ್ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ಜಿಯೋ ಸಿನಿಮಾದ ಮೂಲಕ ಐಪಿಎಲ್ ಲೈವ್ ಸ್ಟ್ರೀಮಿಂಗ್‌ಗೆ ಯಾವುದೇ ಶುಲ್ಕ ಇರುವುದಿಲ್ಲ. ಈ ಹಿಂದಿನಂತೆಯೇ ಎಲ್ಲಾ ಯೋಜನೆಗಳು ಮುಂದುವರಿಯಲಿದೆ. ಚೊಚ್ಚಲ ಋತುವಿನಲ್ಲೇ Jio Cinema IPL 2024 ಲೈವ್ ಸ್ಟ್ರೀಮಿಂಗ್‌ನ್ನು ಉಚಿತವಾಗಿ ನೀಡಿತ್ತು. ಇದೇ ಕಾರಣದಿಂದಲೇ ತನ್ನ ವೀಕ್ಷಕರ ಸಂಖ್ಯೆಯನ್ನು 500 ಮಿಲಿಯನ್ ಏರಿಸಿಕೊಂಡಿತ್ತು.

ಇದೀಗ ಮುಂದಿನ ಆವೃತ್ತಿಯನ್ನು ಕೂಡ Jio Cinema ತನ್ನ ಚಂದಾದಾರರಿಗೆ ಉಚಿತವಾಗಿ ನೀಡಲು ಮುಂದಾಗಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ IPL 2024 ಲೈವ್ ಸ್ಟ್ರೀಮಿಂಗ್ ಅನ್ನು ಮುಂದುವರಿಸುತ್ತದೆ. ಜಿಯೋ ತನ್ನ ಪ್ಲಾಟ್‌ಫಾರ್ಮ್‌ಗಾಗಿ ಚಂದಾದಾರಿಕೆ ಶುಲ್ಕವನ್ನು ಪರಿಚಯಿಸಲು ಯೋಜಿಸುತ್ತಿದೆ. ಆದರೆ HBO ಮತ್ತು ಕೆಲವು ಆಯ್ದ ವಿಷಯವನ್ನು ಹೊರತುಪಡಿಸಿ, ಎಲ್ಲಾ ಕ್ರೀಡೆಗಳು ಉಚಿತವಾಗಿಯೇ ನೀಡಲಿದೆ.
ಇದನ್ನೂ ಓದಿ : IPL 2024 : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕ
ಕಳೆದ ಬಾರಿ ಜಿಯೋ ಸಿನಿಮಾದಲ್ಲಿ ಐಪಿಎಲ್ (IPL 2023) ವೀಕ್ಷಿಸಲು 44.9 ಕೋಟಿ ವೀಕ್ಷಕರು ಟ್ಯೂನ್ ಮಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಪೇವಾಲ್‌ನ ಹಿಂದೆ ಇದ್ದ ಡಿಸ್ನಿ+ ಹಾಟ್‌ಸ್ಟಾರ್ ಗೆ ಹೋಲಿಕೆ ಮಾಡಿದ್ರೆ ದಾಖಲೆಯ ಸಂಖ್ಯೆಯನ್ನು ಏರಿಕೆಯಾಗಿದೆ. ಅದ್ರಲ್ಲೂ ಗುಜರಾತ್ ಟೈಟಾನ್ಸ್ (GT) vs ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಐಪಿಎಲ್ IPL ಫೈನಲ್ ಪಂದ್ಯದಲ್ಲಿ 2.5 ಕೋಟಿ ವೀಕ್ಷಕರು ಏಕಕಾಲದಲ್ಲಿ ಕ್ರಿಕೆಟ್ ವೀಕ್ಷಣೆ ಮಾಡಿದ್ದರು.
ಐಪಿಎಲ್ ಇತಿಹಾಸದಲ್ಲಿಯೇ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಒಂದೇ ಋತುವಿನಲ್ಲಿ ಅಳಿಸಿ ಹಾಕಿದೆ. ಈ ಬಾರಿಯೂ ಐಪಿಎಲ್ ಉಚಿತವಾಗಿ ನೀಡುವುದಾಗಿ ಜಿಯೋ ಘೋಷಣೆ ಮಾಡಿದ ಬೆನ್ನಲ್ಲೇ ಚಂದಾದಾರರ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಆರಂಭದಿಂದಲೂ ಉಚಿತ ಚಂದಾದಾರಿಕೆ ಅವಕಾಶವನ್ನು ಕಲ್ಪಿಸಿತ್ತು. ಮಾತ್ರವಲ್ಲ ಐಪಿಎಲ್ ಉಚಿತವಾಗಿ ವೀಕ್ಷಣೆ ಮಾಡುವಂತೆ ಮಾಡಿತ್ತು.
ಇದನ್ನೂ ಓದಿ : ಐಪಿಎಲ್ 2024 ಮಿಸ್ ಮಾಡಿಕೊಳ್ಳಲಿದ್ದಾರೆ ಈ ಖ್ಯಾತ ಆಟಗಾರರು
ಜಿಯೋ ಸಿನಿಮಾ ಪ್ರಾದೇಶಿಕ ಭಾಷೆಗಳಲ್ಲಿಯೂ ಕೂಡ ಚಂದಾದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆ ಎನಿಸಿಕೊಂಡಿರುವ ಐಪಿಎಲ್ ನೇರಪ್ರಸಾರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಜಿಯೋ ಸಿನಿಮಾ ಮಾಲೀಕತ್ವದ Viacom18 IPL ಡಿಜಿಟಲ್ ಹಕ್ಕಿಗಾಗಿ 23,758 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿತ್ತು.
ಇಷ್ಟೊಂದು ಮೊತ್ತವನ್ನು ಹೂಡಿಕೆ ಮಾಡಿದ ನಂತರ ಚಂದಾದಾರಿಕೆ ಶುಲ್ಕ ವಿಧಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ ಜಿಯೋ ಸಿನಿಮಾ ಉಚಿತವಾಗಿ ಚಂದಾದಾರಿಕೆಯನ್ನು ನೀಡಿದೆ. ಅಷ್ಟೇ ಅಲ್ಲದೇ ಪಂದ್ಯ ವೀಕ್ಷಣೆಯ ನಡುವಲ್ಲಿ ಕಡಿಮೆ ಅವಧಿಯ ಜಾಹೀರಾತು ಪ್ರಸಾರ ಮಾಡುವ ಮೂಲಕ ಕ್ರಿಕೆಟ್ ಪ್ರಿಯರನ್ನು ತನ್ನತ್ತ ಸೆಳೆದಿದೆ.

ಜಿಯೋ ಸಿನಿಮಾ ಐಪಿಎಲ್ ವೀಕ್ಷಣೆಯನ್ನು ಉಚಿತವಾಗಿ ನೀಡಿದ್ದರೂ ಕೂಡ Viacom 18 ಉತ್ತಮ ಆದಾಯ ದೊರೆತಿದೆ. ಜಿಯೋ ಸಿನಮಾಕ್ಕೆ 3,239 ಕೋಟಿ ರೂ. ಆದಾಯ ದೊರೆತಿದೆ. ಅಲ್ಲದೇ ಅದೇ ಟ್ರೆಂಡ್ IPL 2024 ಲೈವ್ ಸ್ಟ್ರೀಮಿಂಗ್‌ನಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಕಳೆದ ಸಾಲಿನಲ್ಲಿ ಜಿಯೋ ಸಿನಿಮಾಕ್ಕೆ ದಾಖಲೆಯ ಆದಾಯ ಜಾಹೀರಾತು ಮೂಲಕವೇ ಹರಿದು ಬಂದಿತ್ತು.
ಇದನ್ನೂ ಓದಿ : ಭಾರತ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಟಿವಿಯಲ್ಲಿನ ಜಾಹೀರಾತುದಾರರ ಸಂಖ್ಯೆಗಿಂತ 13 ಪಟ್ಟು ಹೆಚ್ಚು ಆಕರ್ಷಿಸಿದ್ದರಿಂದ JioCinema ನ ಜಾಹೀರಾತು ಆದಾಯವು ಟಿವಿಗಿಂತ ಹೆಚ್ಚಾಗಿದೆ ಎಂದು Viacom18 ಕಳೆದ ವರ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಐಪಿಎಲ್ ಮಾತ್ರವಲ್ಲದೇ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಕೂಡ ವೀಕ್ಷಕರು ಉಚಿತವಾಗಿಯೇ ವೀಕ್ಷಣೆ ಮಾಡಬಹುದಾಗಿದೆ.
Good news for cricket Fans IPL 2024 is free on Jio Cinema