ಭಾನುವಾರ, ಏಪ್ರಿಲ್ 27, 2025
HomeSportsCricketಐಪಿಎಲ್ 2024 ಬಳಿಕ ಮುಂಬೈ ಇಂಡಿಯನ್ಸ್‌ನಿಂದ ದೂರವಾಗ್ತಾರಾ ರೋಹಿತ್‌ ಶರ್ಮಾ ? ಸುಳಿವು ಕೊಟ್ಟ ಕೋಚ್‌...

ಐಪಿಎಲ್ 2024 ಬಳಿಕ ಮುಂಬೈ ಇಂಡಿಯನ್ಸ್‌ನಿಂದ ದೂರವಾಗ್ತಾರಾ ರೋಹಿತ್‌ ಶರ್ಮಾ ? ಸುಳಿವು ಕೊಟ್ಟ ಕೋಚ್‌ ಬೌಚರ್‌

- Advertisement -

Rohit Sharma IPL 2024: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League 2024) ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ. ಇದೇ ಕಾರಣದಿಂದಲೇ ಎಂಐ ತಂಡದ ನಾಯಕತ್ವದಲ್ಲಿಯೂ ಬದಲಾವಣೆ ಕಂಡಿದೆ. ಈ ನಡುವಲ್ಲೇ ಮಾಜಿ ನಾಯಕ ರೋಹಿತ್‌ ಶರ್ಮಾ (Rohith Sharma) ಮುಂಬೈ ಇಂಡಿಯನ್ಸ್‌ (Mumbai Indians )ತಂಡದಿಂದ ದೂರವಾಗುವ ಮಾತುಗಳು ಕೇಳಿಬಂದಿವೆ.

ಮುಂಬೈ ಇಂಡಿಯನ್ಸ್ ಐಪಿಎಲ್ 2024 ಆರಂಭಕ್ಕೆ ಮೊದಲು ರೋಹಿತ್‌ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ. ರೋಹಿತ್‌ ಶರ್ಮಾ ಕಳೆದ ಎರಡು ಅವಧಿಯಲ್ಲಿ ಕಳಪೆ ಫಾರ್ಮ್‌ ಪ್ರದರ್ಶಿಸಿದ್ದಾರೆ. ಈ ನಡುವಲ್ಲೇ ರೋಹಿತ್‌ ಶರ್ಮಾ ಎಂಐ ತಂಡವನ್ನು ತೊರೆಯುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

Rohit Sharma leave Mumbai Indians after IPL 2024 Coach Mark Boucher gave the hint
Image Credit to Original Source

ಇದೀಗ ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಮಾರ್ಕ್‌ ಬೌಚರ್‌ ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡವನ್ನು ತೊರೆಯುವ ಸುಳಿವು ನೀಡಿದ್ದಾರೆ. ರೋಹಿತ್‌ ಶರ್ಮಾ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ವರೆಗೆ ಮಾತ್ರವೇ ಅವರು ಮುಂಬೈ ತಂಡದಲ್ಲಿ ಇರಲಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ರೋಹಿತ್ ಶರ್ಮಾ ಐಪಿಎಲ್ 2024 ರ ನಂತರ ಎಂಐನಿಂದ ಹೊರಗುಳಿಯುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ : ವಿರಾಟ್-ಅನುಷ್ಕಾ 2ನೇ ಮಗುವಿನ ಗುಟ್ಟು ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್‌ : ಅಭಿಮಾನಿಗಳ ಆಕ್ರೋಶ

ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರಿಗೆ ನಾಯಕತ್ವದ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿಯೇ ಅವರ ಬದಲಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ ಎಂದು ಸಂದರ್ಶನವೊಂದರಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಬೌಚರ್‌ ಹೇಳಿದ್ದಾರೆ.

ಇದನ್ನೂ ಓದಿ : 200, 200, 200…! ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

ಆದರೆ ಈ ಕುರಿತು ರೋಹಿತ್‌ ಶರ್ಮಾ ಅವರ ಪತ್ನಿ ಪ್ರತಿಕ್ರೀಯಿಸಿದ್ದರು. ರೋಹಿತ್‌ ಶರ್ಮಾ ಅವರು ನಾಯಕನಾಗಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಳೆದ ಎರಡು ಋತುವಿನಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸಿಲ್ಲ. ಆದರೆ ಕೋಚ್‌ ಬೌಚರ್‌ ನೀಡಿರುವ ಹೇಳಿಕೆಯಲ್ಲಿ ಸಾಕಷ್ಟು ತಪ್ಪುಗಳಿವೆ ಎಂದು ಅವರು ಹೇಳಿದ್ದಾರೆ.

Rohit Sharma leave Mumbai Indians after IPL 2024 Coach Mark Boucher gave the hint
Image Credit to Original Source

ರೋಹಿತ್‌ ಶರ್ಮಾಗೆ MI ನಲ್ಲಿ ಕೊನೆಯಾಗುತ್ತಾ IPL 2024 ?

ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡದ ಯಶಸ್ವಿ ನಾಯಕ. 2013 ರಲ್ಲಿ ರಿಕಿ ಪಾಂಟಿಂಗ್‌ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಅವರು ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಅಲ್ಲದೇ ಭಾರತ ತಂಡದ ನಾಯಕನಾಗಿಯೂ ರೋಹಿತ್‌ ಶರ್ಮಾ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅವರು ಉತ್ತಮ ಫಾರ್ಮ್‌ ಹೊಂದಿಲ್ಲ.

ಇದನ್ನೂ ಓದಿ : Indian Premier League -IPL 2024 : ಹಾರ್ದಿಕ್‌ ಪಾಂಡ್ಯ ಬದಲು ಮುಂಬೈ ಇಂಡಿಯನ್ಸ್‌ ನಾಯಕರಾಗ್ತಾರೆ ಈ ಮೂವರು ಆಟಗಾರರು

ಕಳೆದ ಎರಡು ಋತುಗಳಲ್ಲಿ ರೋಹಿತ್ 19.14ರಲ್ಲಿ 268 ರನ್ ಹಾಗೂ 20.75 ಸರಾಸರಿಯಲ್ಲಿ 332 ರನ್ ಗಳಿಸಿದ್ದಾರೆ. ಈ ಬಾರಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ 15 ಕೋಟಿ ರೂ.ಗೆ ಮರಳಿದ್ದು ರೋಹಿತ್‌ಗೆ ಕಷ್ಟ ತಂದಿದೆ. ಹಾರ್ದಿಕ್‌ ಪಾಂಡ್ಯ ಕಳೆದ ಎರಡು ಅವಧಿಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕನಾಗಿ ತಂಡವನ್ನು ಮುನ್ನೆಡೆಸಿದ್ದಾರೆ. ಅಲ್ಲದೇ ನಾಯಕನಾಗಿ ಸಕ್ಸಸ್‌ ಕಂಡಿದ್ದಾರೆ.

Rohit Sharma leave Mumbai Indians after IPL 2024 ? Coach Mark Boucher gave the hint

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular