200, 200, 200…! ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

yashasvi jaiswal : ಇಂಗ್ಲೆಂಡ್‌ ವಿರುದ್ದದ 2ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಯಶಸ್ವಿ ಜೈಸ್ವಾಲ್‌ ದ್ವಿಶತಕ ಬಾರಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ.

yashasvi jaiswal : ಇಂಗ್ಲೆಂಡ್‌ ವಿರುದ್ದದ 2ನೇ ಟೆಸ್ಟ್‌ ಪಂದ್ಯದಲ್ಲಿ (ind vs Eng 2nd Test) ಟೀಂ ಇಂಡಿಯಾ ಆಟಗಾರ ಯಶಸ್ವಿ ಜೈಸ್ವಾಲ್‌ ದ್ವಿಶತಕ ಬಾರಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡುವ ಮೊದಲು ಜೈಸ್ವಾಲ್‌ ಪ್ರಥಮ ದರ್ಜೆ, ಲಿಸ್ಟ್‌ ಎನಲ್ಲಿಯೂ ದ್ವಿಶತಕ ಬಾರಿಸಿದ್ದರು. ಅಷ್ಟಕ್ಕೂ ಯಶಸ್ವಿ ಜೈಸ್ವಾಲ್‌ ಕ್ರಿಕೆಟ್‌ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

200 200 200 yashasvi jaiswalhas written record after record in Test cricket Ind vs Eng 2nd test
Image Credit to Original Source

ಭಾರತ ಟೆಸ್ಟ್‌ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ ಎನಿಸಿಕೊಂಡಿರುವ ಯಶಸ್ವಿ ಜೈಸ್ವಾಲ್‌ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಲ್ಲ. ಆದ್ರೆ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಜೈಸ್ವಾಲ್‌ ಕೇವಲ 290 ಎಸೆತಗಳನ್ನು ಎದುರಿಸಿದ್ದು, ಭರ್ಜರಿ 209 ರನ್‌ ಬಾರಿಸುವ ಮೂಲಕ ದ್ವಿಶತಕ ಸಿಡಿಸಿದ ಭಾರತೀಯ ಆಟಗಾರರ ಸಾಲಿಗೆ ಸೇರ್ಪಡೆ ಆಗಿದ್ದಾರೆ.

ಇದನ್ನೂ ಓದಿ : Indian Premier League -IPL 2024 : ಹಾರ್ದಿಕ್‌ ಪಾಂಡ್ಯ ಬದಲು ಮುಂಬೈ ಇಂಡಿಯನ್ಸ್‌ ನಾಯಕರಾಗ್ತಾರೆ ಈ ಮೂವರು ಆಟಗಾರರು

ಯಶಸ್ವಿ ಜೈಸ್ವಾಲ್‌ ಇದುವರೆಗೆ ಒಟ್ಟು 6ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಈ ಪೈಕಿ 11 ಇನ್ನಿಂಗ್ಸ್‌ಗಳ ಪೈಕಿ 637 ರನ್‌ ಬಾರಿಸಿದ್ದಾರೆ. ಅದ್ರಲ್ಲಿ 1 ದ್ವಿಶತಕ, 2 ಶತಕ ಹಾಗೂ 2 ಅರ್ಧ ಶತಕ ಒಳಗೊಂಡಿದೆ. ಅಷ್ಟೇ ಅಲ್ಲ ಭಾರತ ತಂಡದ ಪರ ಟಿ20 ತಂಡವನ್ನು ಪ್ರತಿನಿಧಿಸಿದ್ದು 12 ಅಂತರಾಷ್ಟ್ರೀಯ ಟಿ20  ಪಂದ್ಯಗಳನ್ನು ಆಡಿದ್ದು, ಈ ಪೂಕಿ 502 ರನ್‌ ಬಾರಿಸಿದ್ದು, ಒಂದು ಶತಕ ಹಾಗೂ 4 ಅರ್ಧ ಶತಕ ಸಿಡಿಸಿದ್ದಾರೆ.

200 200 200 yashasvi jaiswalhas written record after record in Test cricket Ind vs Eng 2nd test
Image Credit to Original Source

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿಯೂ ಜೈಸ್ವಾಲ್‌ ಮಿಂಚು ಹರಿಸಿದ್ದಾರೆ. ಒಟ್ಟು 37 ಐಪಿಎಲ್‌ ಪಂದ್ಯಗಳ ಪೈಕಿ ಒಂದು ಶತಕ, 8 ಅರ್ಧ ಶತಕ ಒಳಗೊಂಡಂತೆ ಒಟ್ಟು 1,173 ರನ್‌ ಬಾರಿಸುವ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ತಾನು ಸೈ ಎಂದು ನಿರೂಪಿಸಿದ್ದಾರೆ. ಕೇವಲ 22  ವರ್ಷ ಪ್ರಾಯ ಯಶಸ್ವಿ ಜೈಸ್ವಾಲ್‌ ಅಂಡರ್‌ 19 ಕ್ರಿಕೆಟ್‌ನಲ್ಲಿಯೂ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.

200 200 200 yashasvi jaiswalhas written record after record in Test cricket Ind vs Eng 2nd test
Image Credit to Original Source

ಇನ್ನು ಯಶಸ್ವಿ ಜೈಸ್ವಾಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ, ಲಿಸ್ಟ್‌ 2 ಕ್ರಿಕೆಟ್‌ನಲ್ಲಿ ದ್ವಿಶತಕ, ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಇನ್ನು ಅಂಡರ್‌ 19 ವಿಶ್ವಕಪ್‌, ರಣಜಿ ಕ್ರಿಕೆಟ್‌, ಇರಾನಿ ಕಪ್‌, ದುಲೀಪ್‌ ಟ್ರೋಫಿ, ವಿಜಯ್‌ ಹಜಾರೆ ಕ್ರಿಕೆಟ್‌, ಭಾರತ ಎ, ಐಪಿಎಲ್‌, ಚೊಚ್ಚಲ ಟೆಸ್ಟ್‌ ಪಂದ್ಯ, ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ : WPL 2024 ಆರಂಭಕ್ಕೂ ಮೊದಲೇ RCB ತಂಡದಿಂದ ಹೊರಬಿದ್ದ ಸ್ಟಾರ್ ಆಲ್ ರೌಂಡರ್

ಮುಂಬೈನ ಟೆಂಟ್‌ನಲ್ಲಿ ಮಗುತ್ತಿದ್ದ ಹುಡುಗನ ತಂದೆ ಪಾನಿಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಯಶಸ್ವಿ ಜೈಸ್ವಾಲ್‌ ಕ್ರಿಕೆಟ್‌ ಮೇಲಿನ ಪ್ರೀತಿ ಇಂದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಚೊಚ್ಚಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದ ಜೈಸ್ವಾಲ್‌ ತಾನಾಡಿದ ಆರನೇ ಟೆಸ್ಟ್‌ ಪಂದ್ಯದಲ್ಲಿಯೇ ದ್ವಿಶತಕ ಸಿಡಿಸುವ ಮೂಲಕ ಅಪ್ರತಿಮ ಸಾಧನೆಯನ್ನು ಮೆರೆದಿದ್ದಾನೆ.

200 200 200 yashasvi jaiswalhas written record after record in Test cricket Ind vs Eng 2nd test
Image Credit to Original Source

22 ವರ್ಷದ ಯಶಸ್ವಿ ಜೈಸ್ವಾಲ್”ನ ಹೆಸರಲ್ಲಿರೋ ದಾಖಲೆಗಳು :

ಅಂಡರ್-19 ವಿಶ್ವಕಪ್’ನಲ್ಲಿ ಶತಕ
ರಣಜಿ ಟ್ರೋಫಿಯಲ್ಲಿ ಶತಕ
ಇರಾನಿ ಕಪ್”ನಲ್ಲಿ ಶತಕ
ದುಲೀಪ್ ಟ್ರೋಫಿಯಲ್ಲಿ ಶತಕ
ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ
ಭಾರತ ‘ಎ’ ತಂಡದ ಪರ ಶತಕ
ಐಪಿಎಲ್’ನಲ್ಲಿ ಶತಕ
ಅಂತರಾಷ್ಟ್ರೀಯ ಟಿ20ಯಲ್ಲಿ ಶತಕ
ಟೆಸ್ಟ್ ಪದಾರ್ಪಣೆಯಲ್ಲಿ ಶತಕ
ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ದ್ವಿಶತಕ
ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ದ್ವಿಶತಕ
ಟೆಸ್ಟ್ ಕ್ರಿಕೆಟ್’ನಲ್ಲಿ ದ್ವಿಶತಕ

200, 200, 200…! yashasvi jaiswal has written record after record in Test cricket  Ind vs Eng 2nd test

Comments are closed.