ಅನುದಾನಿತ ಶಾಲಾ ಮಹಿಳಾ ಶಿಕ್ಷಕಿಯರಿಗೆ ಗುಡ್‌ನ್ಯೂಸ್‌ : ಶಿಶುಪಾಲನಾ ರಜೆ ಮಂಜೂರು ಮಾಡಿದ ಕರ್ನಾಟಕ ಸರಕಾರ

Childcare Leave for aided school Teachers : ಸರಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿದ್ದ ಶಿಶುಪಾಲನಾ ರಜೆಯನ್ನು ಇದೀಗ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಶಿಕ್ಷಕಿಯರಿಗೆ ವಿಸ್ತರಣೆ ಮಾಡಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ( ಪ್ರೌಢ) ಎಸ್.ಪ್ರಕಾಶ್‌ ಅವರು ಆದೇಶ ಹೊರಡಿಸಿದ್ದಾರೆ.

Childcare Leave for aided school Teachers : ಕರ್ನಾಟಕ ಸರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಸರಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿದ್ದ ಶಿಶುಪಾಲನಾ ರಜೆಯನ್ನು ಇದೀಗ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಶಿಕ್ಷಕಿಯರಿಗೆ ವಿಸ್ತರಣೆ ಮಾಡಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ( ಪ್ರೌಢ) ಎಸ್.ಪ್ರಕಾಶ್‌ ಅವರು ಆದೇಶ ಹೊರಡಿಸಿದ್ದಾರೆ.

Childcare Leave for aided school Teachers, Karnataka government Good news for aided school women teachers addition Maternity leave
Image Credit to Original Source

ಸರಕಾರಿ ಶಾಲೆಗಳ ಮಹಿಳಾ ನೌಕರರಂತೆ ಅನುದಾನಿತ ಶಾಲೆಗಳ ಮಹಿಳಾ ಶಿಕ್ಷಕಿಯರಿಗೂ ಕೂಡ ಶಿಶುಪಾಲನಾ ರಜೆ ಮಂಜೂರು ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಬೆನ್ನಲ್ಲೇ, ಶಿಶುಪಾಲನಾ ರಜೆಯನ್ನು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆ ವಿಸ್ತರಣೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ : ಅಂಗನವಾಡಿ ಕೇಂದ್ರಕ್ಕೆ ದಿಢೀರ್‌ ಭೇಟಿ : ಮಕ್ಕಳ ದುಸ್ಥಿತಿ ಕಂಡು ಮರುಗಿದ ನ್ಯಾಯಾಧೀಶೆ ಅರುಣಾ ಕುಮಾರಿ

ಅನುದಾನಿತ ಶಾಲೆಗಳಿಗೆ ಶಿಶುಪಾಲನಾ ರಜೆ ವಿಸ್ತರಣೆ ಮಾಡಲಾಗಿದ್ದು, ಆಡಳಿತಾತ್ಮಕವಾಗಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗದಂತೆ ರಜೆ ಸೌಲಭ್ಯವನ್ನು ವಿಸ್ತರಿಸಲು ಪರ್ಯಾಯ ವ್ಯವಸ್ಥೆಯನ್ನು ಸಂಬಂಧಪಟ್ಟ ಆಯಾಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಸ್ವತಃ ಸಂಪನ್ಮೂಲ ದಿಂದ ಒದಗಿಸಿಕೊಂಡು ಅನುದಾನಿತ ಶಾಲಾ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವಂತೆ ಕ್ರಮವಹಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : ಶಾಲೆಗಳಿಗೆ ಸರಕಾರದ ಹೊಸ ರೂಲ್ಸ್‌ : ವಿದ್ಯಾಂಜಲಿ 2.0 ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯ

ಕರ್ನಾಟಕ ರಾಜ್ಯ ಸರಕಾರ 2021-22ನೇ ಸಾಲಿನಲ್ಲಿ ಸರಕಾರಿ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಹೆರಿಗೆ ರಜೆಯ ಜೊತೆಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳ ವರೆಗೆ ( 180 ದಿನ ) ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದೆ. ಆದರೆ ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳ ವರೆಗೆ ಶಿಶುಪಾಲನಾ ರಜೆಯನ್ನು ಸಕ್ಷಮ ಪ್ರಾಧಿಕಾರವು ಮಂಜೂರು ಮಾಡತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

Childcare Leave for aided school Teachers, Karnataka government Good news for aided school women teachers addition Maternity leave
Image Credit to Original Source

ಶಿಶುಪಾಲನಾ ರಜೆ ಪಡೆಯಲು ಇರುವ ಷರತ್ತುಗಳೇನು ?

180 ದಿನಗಳ ಕಾಲ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲು ಶಿಕ್ಷಣ ಇಲಾಖೆ ಶಿಕ್ಷಕಿಯರಿಗೆ ಒಂದೇ ಶಾಲೆಯಲ್ಲಿ ಇಬ್ಬರಿಗಿಂತ ಹೆಚ್ಚಿನ ಶಿಕ್ಷಕಯರು ಇದ್ದರೆ ಅಂತಹ ಸಂದರ್ಭದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಗುವಿನ ಶಿಕ್ಷಕಿಗೆ ರೋಟೆಷನ್‌ ಪದ್ದತಿಯಲ್ಲಿ ಆದ್ಯತೆಯ ಮೇರೆಗೆ ರಜೆ ಮಂಜೂರು ಮಾಡಬೇಕು. ಶಿಶುಪಾಲನಾ ರಜೆಯನ್ನು ಕನಿಷ್ಠ 15 ದಿನ ಹಾಗೂ ಗರಿಷ್ಠ 30 ದಿನಗಳು ಮೀರದಂತೆ ಪಡೆಯಬಹುದಾಗಿದೆ.

Childcare Leave for aided school Teachers, Karnataka government Good news for aided school women teachers addition Maternity leave
Image Credit to Original Source

ಇದನ್ನೂ ಓದಿ : ಟ್ಯೂಶನ್ ಮಾಫಿಯಾಗೆ ಬೀಳುತ್ತಾ ಕಡಿವಾಣ: ಸರ್ಕಾರದಿಂದ ಹೊರಬಿತ್ತು ಖಡಕ್ ಆದೇಶ

Childcare Leave for aided school Teachers, Karnataka government Good news for aided school women teachers addition Maternity leave

Comments are closed.