ಭಾನುವಾರ, ಏಪ್ರಿಲ್ 27, 2025
Homekarnatakaಶ್ರೀ ಕೃಷ್ಣನೇ ನೀಡಿದ್ದ ತನ್ನ ವಿಗ್ರಹ – ಇವನನ್ನು ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳು ಪರಿಹಾರ

ಶ್ರೀ ಕೃಷ್ಣನೇ ನೀಡಿದ್ದ ತನ್ನ ವಿಗ್ರಹ – ಇವನನ್ನು ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳು ಪರಿಹಾರ

- Advertisement -

Kanivepura Gopalkrishna Temple : ಕೃಷ್ಣ , ಭಕ್ತರ ಪಾಲಿನ ಆಪತ್ಬಾಂಧವ . ಭಕ್ತರಿಗೆ ಮಗುವಾಗಿ, ಗೆಳೆಯನಾಗಿ , ಹಿರಿಯನಾಗಿ ದೇವನಾಗಿ ಪೂಜಿಸಲ್ಪಡುತ್ತಿರೋದು ಅಂದ್ರೆ ಅದು ಕೃಷ್ಣ ಮಾತ್ರ. ಆತ ಇದ್ದ ಕಡೆ ಕಷ್ಟಗಳೇ ಇರಲ್ಲ . ಅಂತದೇ ಕೃಷ್ಣ ನೆಲೆಸಿರುವ ಒಂದು ಸುಂದರ ದೇವಾಲಯವಿದು . ಆದರೆ ಕಣಿವೆಪುರ ಗೋಪಾಲಕೃಷ್ಣ  ದೇವಾಲಯದಲ್ಲಿ ಸ್ಥಾಪನೆಯಾಗಿರೋ ವಿಗ್ರವನ್ನು ಮಾತ್ರ ಸ್ವತಹಃ ಕೃಷ್ಣ ನೇ ನೀಡಿದ್ದ ಅನ್ನೋದೆ ವಿಶೇಷ. ಇಲ್ಲಿ ನಡೆದಿರೋ ವಿಸ್ಮಯವನ್ನು ನೋಡಿದ್ರೆ ನೀವು ಈ ದೇವಾಲಯದ ಶಕ್ತಿ ಎಷ್ಟಿದೆ ಅನ್ನೋದನ್ನು ಕಾಣಬಹುದು.

ಇದು ಪರಶು ರಾಮ ಸೃಷ್ಠಿಯಲ್ಲಿರೋ ಸುಂದರ ದೇವಾಲಯ. ಕಡಲ ತಡಿಗೆ ತಾಗಿಕೊಂಡಿರೋ ದೇವಾಲಯದ ಮಹಿಮೆ ಅಪಾರ. ಖುದ್ದು ಕೃಷ್ಣನೇ ಖುಷಿವರಿಯರಿಗೆ ಈ ವಿಗ್ರಹವನ್ನು ನೀಡಿದ್ದ ಅನ್ನೋ ನಂಬಿಕೆ ಇಲ್ಲಿಯ ಭಕ್ತರಲ್ಲಿದೆ. ಅಲ್ಲಿಂದ ಇಲ್ಲಿಯ ವರೆಗೆ ಇದೇ ವಿಗ್ರಹವನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ಕೃಷ್ಣನ್ನು ಪೂಜಿಸಿದ್ರೆ ಸಕಲ ಕಷ್ಟಗಳು ಪರಿಹಾರ ವಾಗುತ್ತೆ ಅನ್ನೋ ನಂಬಿಕೆ ಇಲ್ಲಿಯವರದ್ದು.

Kerala Manjeshwar district Kumble in Kerala Manjeshwar district Kumble in Kanipura Sri Gopalakrishna Temple
Image Credit to Original Source

ಇಲ್ಲಿನ ಸ್ಥಳ ಪುರಾಣಗಳ ಪ್ರಕಾರ ಈ ದೇವಾಲಯಕ್ಕೆ ರಾಮಾಯಣ ಕಾಲದಿಂದಲೂ ನಂಟಿದೆ. 5000 ವರ್ಷಗಳ ಹಿಂದೆ ರಾಮನ ದರ್ಶಕ್ಕಾಗಿ ಕಣ್ವ ಮಹಾ ಋಷಿಗಳು ಕಾಯತ್ತಿದ್ದರು. ಆಗ ರಾಮನು ಲಂಕಾಯುದ್ದದ ನಂತರ ಭೇಟಿಗೆ ಬರುವುದಾಗಿ ಹೇಳಿದ್ದ. ಅಂದಿನಿಂದ ರಾಮನಿಗಾಗಿ ತಪಸ್ಸಿನಲ್ಲಿ ಕಣ್ವರು ಕಾಯಲು ಆರಂಬಿಸಿದರು. ಆದರೆ ಕಣ್ವರಿಗೆ ತಪಸ್ಸಿನಲ್ಲಿ ಯುಗಗಳು ಕಳೆದುದು ತಿಳಿಯಲಿಲ್ಲ.

ಅವರಿಗೆ ತಿಳಿಯುವ ವೇಳೆ ತ್ರೇತಾಯುಗವು ಕಳೆದು ದ್ವಾಪರ ಆಗಮಿಸಿತ್ತು. ಇದನ್ನು ತಿಳಿದ ಕಣ್ವರು ರಾಮನ ಅವತಾರ ಅನ್ನಿಸಿಕೊಂಡಿರುವ ಕೃಷ್ಣನ ಭೇಟಿಗಾಗಿ ದ್ವಾರಕೆಗೆ ತೆರಳಿದ್ರು. ಅಲ್ಲಿ ಕೃಷ್ಣ ಯಶೋದೆಗೆ ತನ್ನ ನೆನಪಿಗಾಗಿ ನೀಡಿದ್ದ ತನ್ನ ವಿಗ್ರಹವನ್ನು ತೆಗೆದು ಕಣ್ವರಿಗೆ ನೀಡಿ, ಇದನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸುವಂತೆ ಹೇಳಿದ. ಕಣ್ವರು ದೇಶ ಸಂಚಾರ ಮಾಡುತ್ತಾ ಇಲ್ಲಿಗೆ ತಂದು ವಿಗ್ರಹವನ್ನು ಸ್ಥಾಪಿಸಿದರು ಅನ್ನೋ ನಂಬಿಕೆ ಇದೆ. ಅಲ್ಲಿಂದ ಮುಂದೆ ಇಲ್ಲಿ ಕೃಷ್ಣ ವಿರಾಜಮಾನನಾಗಿ ಕೂತು ದೂರದೂರದಲ್ಲಿರೋ ಭಕ್ತರನ್ನು ಕಾಯುತ್ತಾನೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ : ಬೆಣ್ಣೆ ಸೇವೆ ಮಾಡಿದ್ರೆ ಮಕ್ಕಳ ಭಾಗ್ಯ – ಇಲ್ಲಿನ ಕೃಷ್ಣನಿಗೆ ಮರುಳಾಗಿದ್ದರು ಪುರಂದರ ದಾಸರು

ಇನ್ನು ಕೃಷ್ಣನ ಇರುವಿಕೆ ಈ ಮೂರ್ತಿಯಲ್ಲಿ ಇದೆ ಎಂಬುದಕ್ಕೆ ಸಾಕಷ್ಟ ಸಾಕ್ಷಿ ಇಲ್ಲಿ ಸಿಗುತ್ತೆ ಅಂತಾರೆ ಭಕ್ತರು. ಬ್ರಿಟೀಷರು ಒಂದು ಬಾರಿ ಈ ದೇಗುಲದ ಒಳಗಿಂದ ರೈಲ್ವೆ ಹಳಿಯನ್ನು ನಿರ್ಮಿಸೋಕೆ ನಿರ್ಧರಿಸಿದರಂತೆ. ಆಗ ಅದರಲ್ಲಿ ಕೆಲಸ ಮಾಡುತ್ತಿದ್ದ ಚೀಫ್ ಇಂಜಿನಿಯರ್ ಆಕಸ್ಮಿಕ ವಾಗಿ ಎರಡೂ ಕಣ್ಣು ಕಳೆದುಕೊಳ್ಳಬೇಕಾಯಿತು.

Kerala Manjeshwar district Kumble in Kerala Manjeshwar district Kumble in Kanipura Sri Gopalakrishna Temple
Image Credit to Original Source

ಆಗ ದೇವರ ಶಕ್ತಿಯನ್ನು ಅರಿತ ಬ್ರಿಟೀಷ್ ಕಂಪನಿ ಈ ನಿರ್ಧಾರವನ್ನು ಕೈಬಿಟ್ಟು ಕೊಂಚ ದೂರದಿಂದ ರೈಲ್ವೇ ಹಳಿಯನ್ನು ಹಾಕಿದ್ರು ಅಂತಾರೆ ಊರಿನ ಹಿರಿಕರು. ಇಷ್ಟು ಮಾತ್ರವಲ್ಲದೆ ಹಲವು ಬಾರಿ ರಸ್ತೆ ಮಾರ್ಗಕ್ಕಾಗಿ ದೇವಾಲಯವನ್ನು ತೆರವು ಮಾಡುವ ಮಾತಾದರೂ ದೇವರ ಕೃಪೆಯಿಂದ ಏನೂ ಆಗಿಲ್ಲ ಅನ್ನೋದು ಇಲ್ಲಿನ ಭಕ್ತರ ಮಾತು.

ಇದನ್ನೂ ಓದಿ : ಉಡುಪಿ ಶ್ರೀಕೃಷ್ಣ ಮಠದ ಗೂಗಲ್‌ ಮ್ಯಾಪ್‌ ಲೋಕೇಶನ್‌ ಬದಲಾಯಿಸಿದ ಗೂಗಲ್‌ ಸಂಸ್ಥೆ

ಇನ್ನು ಈ ದೇವಾಲಯದ ಪಕ್ಕದಲ್ಲೇ ಒಂದು ಕಲ್ಯಾಣಿ ಕೂಡಾ ಇದ್ದು ,ಇದಕ್ಕೂ ಸಾವಿರಾರು ವರ್ಷದ ಇತಿಹಾಸವಿದೆ . ಇದನ್ನು ವಾಸುಕಿ ಕುಂಡ ಅಂತಾನೆ ಕರೆಯುತ್ತಾರೆ. ಇಲ್ಲಿ ಸಮುದ್ರ ಮಥನದ ಕಾಲದಲ್ಲಿ ನಾಗರಾಜನಾದ ವಾಸುಕಿಯು ಇಲ್ಲಿ ಬಂದು ಕುಳಿತಿದ್ದನಂತೆ ಹೀಗಾಗಿ ಇಲ್ಲಿಗೆ ವಾಸುಕಿ ಕುಂಡ ಅಂತಾರೆ. ಸಧ್ಯ ಇಲ್ಲಿ ಬ್ರಹ್ಮ ಕಲಶ ಕಾರ್ಯ ಆರಂಭವಾಗಿದ್ದು, 36 ವರ್ಷದ ನಂತರ ಇಲ್ಲಿ ಬ್ರಹ್ಮಕಲಶ ನಡೆಸಲಾಗುತ್ತಿದೆ.

ಅಂದ ಹಾಗೆ ಇಷ್ಟು ಶಕ್ತಿಯುತವಾದ ಕೃಷ್ಣ ನ ವಿಗ್ರಹವಿರೋದು ಕೇರಳದ ಮಂಜೇಶ್ವರ ಜಿಲ್ಲೆಯ ಕುಂಬಳೆ ಎನ್ನುವ ಜಾಗದಲ್ಲಿ. ಕಾಸರಗೋಡಿಂದ ಕೆಲವೇ ಕಿಲೋ ಮೀಟರ್ ದೂರವಿರೋ ದೇವಸ್ಥಾನ ಕಣಿವೆಪುರ ಗೋಪಾಲಕೃಷ್ಣ ದೇವಸ್ಥಾನ. ಇಲ್ಲಿ ಸುತ್ತಮುತ್ತಲೂ ಯಾವುದೇ ಹೊಸದಾಗಿ ಕರು ಹುಟ್ಟಿದ್ರೆ ಹಾಲನ್ನು ಈ ದೇವರಿಗೆ ಅರ್ಪಿಸಲಾಗುತ್ತೆ. ಹೀಗೆ ಮಾಡೋದ್ರಿಂದ ಮನೆಗಳಲ್ಲಿ ಸಮೃದ್ಧಿ ನೆಲೆಸುತ್ತೆ ಅನ್ನೋ ನಂಬಿಕೆ ಇದೆ. ಇಲ್ಲಿ ಹೋಗೋಕೆ ರೈಲು ಹಾಗೂ ಬಸ್ ಸೌಕರ್ಯವಿದ್ದು , ಭಕ್ತರು ಆರಾಮವಾಗಿ ದೇವರ ದರ್ಶನ ಮಾಡಬಹುದು.

ಇದನ್ನೂ ಓದಿ : ಇಲ್ಲಿರೋ ಒಂದೊಂದು ದೇವರು ನೀಡ್ತಾರೆ ಒಂದೊಂದು ಫಲ – ಜಲಕಂಠೇಶ್ವರನ ಸನ್ನಿಧಾನದಲ್ಲಿ ಸರ್ವ ಕಷ್ಟ ಪರಿಹಾರ

His Idol given by Lord Krishna – If he is worshiped with devotion, difficulties will be solved Kerala Manjeshwar district Kumble in Kanipura Sri Gopalakrishna Temple

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular