ICC T 20 World Cup 2024: ಬಾರ್ಬೆಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಕ್ರಿಕೆಟ್ ತಂಡ ( Indian Cricket Team) ತವರಿಗೆ ಆಗಮಿಸುವ ಕ್ಷಣವನ್ನು ಭಾರತೀಯ ಎದುರು ನೋಡುತ್ತಿದ್ದಾರೆ. ವಿಶ್ವ ಚಾಂಪಿಯನ್ (world Champion) ಭಾರತ ತಂಡ ಮುಂಬೈಗೆ ಬಂದಿಳಿಯುತ್ತಿದ್ದಂತೆ ರೋಹಿತ್ (Rohit Sharma) ಪಡೆಗೆ ಭವ್ಯ ಸ್ವಾಗತ ಕೋರಲು ಕ್ರಿಕೆಟ್ ಪ್ರಿಯರು ಸಜ್ಜಾಗುತ್ತಿದ್ದಾರೆ. ಆದರೆ ವಿಶ್ವಕಪ್ ಫೈನಲ್ ಮುಗಿದು ಒಂದೂವರೆ ದಿನ ಕಳೆದರೂ ಭಾರತ ತಂಡ ಇನ್ನೂ ತವರಿಗೆ ಮರಳಿಲ್ಲ.

ಭಾರತ ಕ್ರಿಕೆಟ್ ತಂಡ ಸ್ವದೇಶಕ್ಕೆ ಮರಳಲು ಇನ್ನೂ ಕೂಡ ವಿಮಾನದ ಟಿಕೆಟ್ ಕೂಡ ಬುಕ್ ಆಗಿಲ್ಲ. ಕಾರಣ, ಭಾರತ ತಂಡ ತಂಗಿರುವ ಬಾರ್ಬೆಡೋಸ್’ ನಲ್ಲಿ ಕಳೆದ 24 ಗಂಟೆಗಳಿಂದ ಬೀಸುತ್ತಿರುವ ಭಯಂಕರ ಚಂಡಮಾರುತ. ದ್ವೀಪರಾಷ್ಟ್ರ ಕೆರಿಬಿಯನ್ ನಾಡು ಬಾರ್ಬೆಡೋಸ್’ನಲ್ಲಿ ಕಳೆದ 24 ಗಂಟೆಗಳಿಂದ ಚಂಡಮಾರುತ ಬೀಸುತ್ತಿದೆ. ಹೀಗಾಗಿ ಬಾರ್ಬೆಡೋಸ್ ವಿಮಾನ ನಿಲ್ದಾಣ ಸಂಪೂರ್ಣ ಸ್ಥಗಿತಗೊಂಡಿದೆ.
ಯಾವುದೇ ವಿಮಾನಗಳು ಬಾರ್ಬೆಡೋಸ್’ಗೆ ಬಂದಿಳಿಯುತ್ತಿಲ್ಲ, ಅಲ್ಲಿಂದ ಯಾವ ವಿಮಾನವೂ ಹೊರ ಹೋಗುತ್ತಿಲ್ಲ. ಹೀಗಾಗಿ ಭಾರತ ತಂಡ ತವರಿಗೆ ಮರಳಲು ಇನ್ನೂ ಎರಡರಿಂದ ಮೂರು ದಿನ ಹಿಡಿಯಲಿದೆ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಬಾರ್ಬೆಡೋಸ್’ನ ಬ್ರಿಡ್ಜ್’ಟೌನ್’ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ2೦ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್’ಗಳಿಂದ ಸೋಲಿಸಿ 2ನೇ ಬಾರಿ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಫೈನಲ್ ಪಂದ್ಯದಲ್ಲಿ 76 ರನ್ ಸಿಡಿಸಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದಿದ್ದರು.
ಇದನ್ನೂ ಓದಿ : Rohit Sharma : 6 ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕಿತ್ತೆಸೆಯಲ್ಪಟ್ಟವನು ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ
ಭಾರತ ಕ್ರಿಕೆಟ್ ತಂಡ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ಟಿ20 ವಿಶ್ವಕಪ್ ಜಯಿಸಿತ್ತು. ಈ ಮೂಲಕ ಭಾರತ ಎರಡು ಬಾರಿ ಟಿ20 ವಿಶ್ವಕಪ್ ಹಾಗೂ 2 ಬಾರಿ ಏಕದಿನ ವಿಶ್ವಕಪ್ ಜಯಿಸಿದ ಸಾಧನೆಯನ್ನು ಮಾಡಿತ್ತು. ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿತ್ತು.

ಇದನ್ನೂ ಓದಿ :Rahul Dravid : ವಿಧಿಯಾಟ.. ವಿಶ್ವಕಪ್ ಸೋತು ಕಣ್ಣೀರಿಟ್ಟಿದ್ದ ನೆಲದಲ್ಲೇ ವಿಶ್ವಕಪ್ ಎತ್ತಿ ಹಿಡಿದ ರಾಹುಲ್ ದ್ರಾವಿಡ್
ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಭಾರತೀಯ ಕ್ರಿಕೆಟ್ ತಂಡಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯವನ್ನು ಕೋರಿದ್ದರು. ಅಲ್ಲದೇ ಭಾರತದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆಗಳು ಜೋರಾಗಿಯೇ ನಡೆದಿದೆ. ಕ್ರಿಕೆಟ್ ಲೋಕದಲ್ಲಿ ಭಾರತ ಮತ್ತೊಮ್ಮೇ ತಾನೇ ನಂಬರ್ 1 ಅನ್ನೋದನ್ನು ಸಾರಿ ಹೇಳಿದೆ. ವಿಶ್ವಕಪ್ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಇದನ್ನೂ ಓದಿ : 21 ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದ ಹುಡುಗ ಇಂದು ಭಾರತದ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲಿ ಒಬ್ಬನಾಗಿ ಬಿಟ್ಟ..!
Hurricane in Barbados, the return flight ticket of the world champions Indian Cricket Team is not booked yet