Pradhan Mantri Awas Yojana – PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ದೇಶದ ಎಲ್ಲ ಅರ್ಹ ಕುಟುಂಬಗಳಿಗೆ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಅವರ ನೇತೃತ್ವದಲ್ಲಿ 2015 ರಲ್ಲಿ ಪ್ರತೀ ಭಾರತೀಯರಿಗೂ ವಸತಿ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.
PMAY – ನಗರ (PMAY-U): ಇದು ನಗರ ಪ್ರದೇಶಗಳಲ್ಲಿನ ವಸತಿ ಕೊರತೆಯನ್ನು ನಿಭಾಯಿಸುವತ್ತ ಗಮನಹರಿಸುತ್ತದೆ, ವಿಶೇಷವಾಗಿ ಕೊಳೆಗೇರಿ ನಿವಾಸಿಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS), ಕಡಿಮೆ ಆದಾಯದ ಗುಂಪು (LIG) ಮತ್ತು ಮಧ್ಯಮ ಆದಾಯದ ಗುಂಪು (MIG) ಗಳ ಜನರಿಗೆ ವಸತಿ ಒದಗಿಸುವುದನ್ನು ಇದು ಒಳಗೊಂಡಿದೆ.
PMAY – ಗ್ರಾಮೀಣ (PMAY-G): ಇದು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಕೊರತೆಯನ್ನು ನಿಭಾಯಿಸುವತ್ತ ಗಮನಹರಿಸುತ್ತದೆ. ಕಚ್ಚಾ ಮನೆಗಳಲ್ಲಿ ವಾಸಿಸುವ ಅಥವಾ ಯಾವುದೇ ಮನೆ ಇಲ್ಲದ ಗ್ರಾಮೀಣ ಬಡವರಿಗೆ ಇದು ಆರ್ಥಿಕ ನೆರವು ನೀಡುತ್ತದೆ.

Pradhan Mantri Awas Yojana PMAY ಆರ್ಥಿಕ ನೆರವು ಪಡೆಯುವುದು ಹೇಗೆ ?
PMAY- ದೇಶದ ಗ್ರಾಮೀಣ ನಿವಾಸಿಗಳಿಗೆ ಅವರ ಆರ್ಥಿಕ ಸ್ಥಿತಿಗತಿ , ಪ್ರದೇಶದ ಆಧಾರದ ಮೇಲೆ 1.3 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ಸಿಗಲಿದೆ. ಅಷ್ಟೇ ಅಲ್ಲದೇ ಸ್ವಚ್ಛ ಭಾರತ ಮಿಷನ್ ಯೋಜನೆಯ ಅಡಿಯಲ್ಲಿ ಶೌಚಾಲಯದ ನಿರ್ಮಾಣಕ್ಕಾಗಿ ₹12,000 ಸಹಾಯವನ್ನೂ ಪಡೆಯಬಹುದಾಗಿದೆ.
PMAY-ನಗರ: ನಗರ ಪ್ರದೇಶದಲ್ಲಿರು ಜನರಿಗೆ ಅದ್ರಲ್ಲೂ ಆರ್ಥಿಕವಾಗಿ ಹಿಂದುಳಿದ ವರ್ಗದ ನಿವಾಸಿಗಳು ಈ ಯೋಜನೆಯ ಮೂಲಕ ಆರ್ಥಿಕ ನೆರವು ಪಡೆಯಬಹುದಾಗಿದೆ. ಈ ಯೋಜನೆಯ ಮೂಲಕ ಮನೆ ನಿರ್ಮಾಣಕ್ಕಾಗಿ ಕೇಂದ್ರ ಸರಕಾರದ ವತಿಯಿಂದ ₹1.5 ಲಕ್ಷ ನೆರವು ಪಡೆಯಬಹುದಾಗಿದೆ.
ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS): ಈ ಯೋಜನೆಯು ಮನೆ ಖರೀದಿಸಲು ಅಥವಾ ನಿರ್ಮಿಸಲು ಸಾಲ ಪಡೆಯುವವರಿಗೆ ಬಡ್ಡಿ ಸಬ್ಸಿಡಿ ನೀಡುತ್ತದೆ. ಇದು ಆರ್ಥಿಕವಾಗಿ ದುರ್ಬಲ ವರ್ಗ, ಕಡಿಮೆ ಆದಾಯದ ಗುಂಪು ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಅನ್ವಯಿಸುತ್ತದೆ.
ಕೊಳೆಗೇರಿ ಪುನರಾಭಿವೃದ್ಧಿ: ನಗರ ಪ್ರದೇಶಗಳಲ್ಲಿ ಕೊಳೆಗೇರಿಗಳನ್ನು ಸುಧಾರಿಸಿ, ಅಲ್ಲಿನ ನಿವಾಸಿಗಳಿಗೆ ಉತ್ತಮ ವಸತಿ ಸೌಲಭ್ಯಗಳನ್ನು ಒದಗಿಸುತ್ತದೆ.
Pradhan Mantri Awas Yojana – PMAY ಯೋಜನೆಗೆ ಯಾರೆಲ್ಲಾ ಅರ್ಹರು ?
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು, ಕೆಲವು ಪ್ರಮುಖ ಅರ್ಹತಾ ಮಾನದಂಡಗಳಿವೆ. ಅವುಗಳು ಯಾವುದು ಎಂದು ನೋಡೋದಾದ್ರೆ,
ಸ್ವಂತ ಮನೆ ಇರಬಾರು ಅರ್ಜಿದಾರರು ಅಥವಾ ಅವರ ಕುಟುಂಬ ಸದಸ್ಯರು (ಪತಿ, ಪತ್ನಿ ಮತ್ತು ಅವಿವಾಹಿತ ಮಕ್ಕಳು) ಭಾರತದಲ್ಲಿ ಯಾವುದೇ ಭಾಗದಲ್ಲಿ ಸ್ವಂತ ಪಕ್ಕಾ ಮನೆಯನ್ನು ಹೊಂದಿರಬಾರದು.
ಆದಾಯದ ಮಾನದಂಡ:
EWS (ಆರ್ಥಿಕವಾಗಿ ದುರ್ಬಲ ವರ್ಗ): ಮೊದಲನೆಯದಾಗಿ ವಾರ್ಷಿಕ ಆದಾಯ 3 ಲಕ್ಷದವರೆಗೆ
LIG (ಕಡಿಮೆ ಆದಾಯದ ಗುಂಪು): ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷದ ನಡುವೆ.
MIG-I (ಮಧ್ಯಮ ಆದಾಯದ ಗುಂಪು-I): ವಾರ್ಷಿಕ ಆದಾಯ ₹6 ಲಕ್ಷದಿಂದ ₹12 ಲಕ್ಷದ ನಡುವೆ.
MIG-II (ಮಧ್ಯಮ ಆದಾಯದ ಗುಂಪು-II): ವಾರ್ಷಿಕ ಆದಾಯ ₹12 ಲಕ್ಷದಿಂದ ₹18 ಲಕ್ಷದ ನಡುವೆ.
- ಇತರ ಮಾನದಂಡಗಳು:
- ಕುಚ್ಚಾ ಅಥವಾ ಅರೆಪಕ್ಕಾ ಮನೆಗಳಲ್ಲಿ ವಾಸಿಸುವವರು (ಗ್ರಾಮೀಣ ಪ್ರದೇಶದಲ್ಲಿ).
- ಸಾಮಾಜಿಕ-ಆರ್ಥಿಕ ಜಾತಿ ಗಣತಿ (SECC) 2011ರ ಅನ್ವಯ ಅಂಕಿಅಂಶಗಳ ಆಧಾರದ ಅಡಿಯಲ್ಲಿ ಗುರುತಿಸಿರುವ ಕುಟುಂಬಗಳು.
- ಖಾಸಗಿ ವಾಹನ, ರೈತ ಯಂತ್ರೋಪಕರಣ, ಫ್ರಿಡ್ಜ್ ಅಥವಾ ತೆರಿಗೆ ವಿಧಿಸಬಹುದಾದ ಆದಾಯ ಹೊಂದಿರುವ ಕುಟುಂಬಗಳು ಸಾಮಾನ್ಯವಾಗಿ ಅರ್ಹರಾಗಿರುವುದಿಲ್ಲ.
- ಮಹಿಳೆಯರ ಒಡೆತನ: EWS ಮತ್ತು LIG ವರ್ಗಗಳಲ್ಲಿ, ಮನೆಯ ಒಡೆತನ ಮಹಿಳೆಯ ಹೆಸರಿನಲ್ಲಿ ಅಥವಾ ಜಂಟಿಯಾಗಿ ಪುರುಷರೊಂದಿಗೆ ಇರುವುದು ಕಡ್ಡಾಯ. ಕುಟುಂಬದಲ್ಲಿ ಮಹಿಳೆಯರು ಇಲ್ಲದಿದ್ದರೆ ಮಾತ್ರ ಈ ನಿಯಮಕ್ಕೆ ವಿನಾಯಿತಿ ನೀಡಬಹುದು.
PMAY ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?
- PMAY ಯ ಅಧಿಕೃತ ವೆಬ್‌ಸೈಟ್‌ಗೆ (pmaymis.gov.in) ಭೇಟಿ ನೀಡಿ.
- ಅರ್ಹ ಅಭ್ಯರ್ಥಿಗಳು Apply for PMAY-U, Apply for PMAY-G ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ದೃಢೀಕರಿಸಿ (OTP ಮೂಲಕ).
- ನಿಮ್ಮ ಆದಾಯ, ರಾಜ್ಯ ಮತ್ತು ಮನೆಯ ವಿವರಗಳನ್ನು ನಮೂದಿಸುವ ಮೂಲಕ ಅರ್ಹತೆಯನ್ನು ಪರಿಶೀಲಿಸಿ.
- ಫಾರ್ಮ್ ಅನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಗುರುತಿನ ಪುರಾವೆ, ವಿಳಾಸ ಪುರಾವೆ, ಆದಾಯ ಪುರಾವೆ, ಆಸ್ತಿ ದಾಖಲೆಗಳು).
- ಅರ್ಜಿಯನ್ನು ಸಲ್ಲಿಸಿ ಮತ್ತು ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ : ಗೃಹಲಕ್ಷ್ಮೀ ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್
ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?
- ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ.
- PMAY ಅರ್ಜಿ ನಮೂನೆಯನ್ನು ಕೇಳಿ, ಭರ್ತಿ ಮಾಡಿ ಮತ್ತು ಅಗತ್ಯ ಶುಲ್ಕವನ್ನು ಪಾವತಿಸಿ (ಸುಮಾರು ₹25+GST).
- ಭರ್ತಿ ಮಾಡಿದ ಫಾರ್ಮ್ ಮತ್ತು ದಾಖಲೆಗಳನ್ನು ಸಿಬ್ಬಂದಿಗೆ ಸಲ್ಲಿಸಿ.
- ಗ್ರಾಮ ಪಂಚಾಯಿತಿ ಸಮೀಕ್ಷೆ: ಗ್ರಾಮೀಣ ಪ್ರದೇಶಗಳಲ್ಲಿ, ಗ್ರಾಮ ಪಂಚಾಯಿತಿಗಳು ವಸತಿ ರಹಿತರು ಮತ್ತು ನಿವೇಶನ ರಹಿತರ ಸಮೀಕ್ಷೆ ನಡೆಸುತ್ತವೆ. ಈ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ : ಪ್ರಧಾನ ಮಂತ್ರಿ ಕಿಸಾನ್ ಯೋಜನೆ : PM Kissan 20ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ (ಗುರುತಿನ ಪುರಾವೆ)
- ವಿದ್ಯುತ್ ಬಿಲ್, ಪಡಿತರ ಚೀಟಿ (ವಿಳಾಸದ ಪುರಾವೆ)
- ವೇತನ ಚೀಟಿ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಸ್ಟೇಟ್‌ಮೆಂಟ್ (ಆದಾಯದ ಪುರಾವೆ)
- ಬ್ಯಾಂಕ್ ಖಾತೆ ವಿವರಗಳು (ಆಧಾರ್ ಲಿಂಕ್ ಆಗಿರಬೇಕು)
- ಭೂ ದಾಖಲೆಗಳು
- ಕುಟುಂಬ ಸದಸ್ಯರು ಯಾವುದೇ ಪಕ್ಕಾ ಮನೆ ಹೊಂದಿಲ್ಲ ಎಂಬ ಬಗ್ಗೆ ಘೋಷಣೆ ಪತ್ರ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಲಕ್ಷಾಂತರ ಭಾರತೀಯರಿಗೆ ತಮ್ಮದೇ ಆದ ಮನೆಯ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ.
Who can apply for Pradhan Mantri Awas Yojana (PMAY) in Kannada News