ಭಾನುವಾರ, ಜೂನ್ 22, 2025
HomeCricketರಿಷಬ್‌ ಪಂತ್‌ ವಿಶ್ವದಾಖಲೆ, ಎಸ್‌ಎಂ ಧೋನಿ ದಾಖಲೆ ಉಡೀಸ್‌

ರಿಷಬ್‌ ಪಂತ್‌ ವಿಶ್ವದಾಖಲೆ, ಎಸ್‌ಎಂ ಧೋನಿ ದಾಖಲೆ ಉಡೀಸ್‌

IND vs ENG 1st Test : ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ರಿಷಬ್ ಪಂತ್ ಅವರು ಇಂಗ್ಲೆಂಡ್ ವಿರುದ್ಧ ತಮ್ಮ 4ನೇ ಟೆಸ್ಟ್ ಶತಕವನ್ನು ದಾಖಲಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ.

- Advertisement -

Rishabh Pant : ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಭಾರತ ಮಾಜಿ ನಾಯಕ, ವಿಕೆಟ್‌ ಕೀಪರ್‌ ಆಗಿದ್ದ ಮಹೇಂದ್ರ ಸಿಂಗ್‌ ಧೋನಿ (MS Dhoni ) ಅವರ ದಾಖಲೆಯನ್ನು ಉಡೀಸ್‌ ಮಾಡಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ವಿರಾಟ್‌ ಕೊಯ್ಲಿ, ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಕಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.

ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ರಿಷಬ್ ಪಂತ್ ಅವರು ಇಂಗ್ಲೆಂಡ್ ವಿರುದ್ಧ ತಮ್ಮ 4ನೇ ಟೆಸ್ಟ್ ಶತಕವನ್ನು ದಾಖಲಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಈ ಹಿಂದೆ ಟಾಮ್ ಲ್ಯಾಥಮ್, ಆಡಮ್ ಗಿಲ್‌ಕ್ರಿಸ್ಟ್, ಇಯಾನ್ ಹೀಲಿ ಮತ್ತು ಬ್ರಾಡ್ ಹ್ಯಾಡಿನ್ ತಲಾ 3 ಶತಕಗಳನ್ನು ಗಳಿಸಿದ್ದರು. ಪಂತ್ ಈಗ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Rishabh Pant : ಅತೀ ಹೆಚ್ಚು ಶತಕ ಸಿಡಿಸಿದ ಭಾರತದ ವಿಕೆಟ್‌ ಕೀಪರ್‌

ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿಯೇ ರಿಷಬ್‌ ಪಂತ್‌ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಪಂತ್ ಅವರು ತಮ್ಮ 7ನೇ ಟೆಸ್ಟ್ ಶತಕವನ್ನು ಗಳಿಸುವ ಮೂಲಕ, ಮಾಜಿ ನಾಯಕ ಎಂ.ಎಸ್. ಧೋನಿ (6 ಶತಕಗಳು) ಅವರ ದಾಖಲೆಯನ್ನು ಮುರಿದಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ 144 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 6 ಶತಕಗಳನ್ನು ಗಳಿಸಿದ್ದರೆ, ಪಂತ್ ಕೇವಲ 58 ಇನ್ನಿಂಗ್ಸ್‌ಗಳಲ್ಲಿ 7 ಶತಕಗಳನ್ನು ಬಾರಿಸಿದ್ದಾರೆ.

Also Read : IND vs ENG 1st Test : ಇಂಗ್ಲೆಂಡ್‌ ವಿರುದ್ದ ಗೆಲ್ಲುತ್ತಾ ಭಾರತ

ಇಂಗ್ಲೆಂಡ್ ನೆಲದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ವಿಕೆಟ್‌ಕೀಪರ್:

ಇಂಗ್ಲೆಂಡ್ ನೆಲದಲ್ಲಿ ಪಂತ್ ಅವರ ಇದು ಮೂರನೇ ಟೆಸ್ಟ್ ಶತಕವಾಗಿದೆ. ಬೇರೆ ಯಾವುದೇ ವಿದೇಶಿ ವಿಕೆಟ್‌ಕೀಪರ್ ಬ್ಯಾಟರ್ ಇಂಗ್ಲೆಂಡ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿಲ್ಲ. ಇದು ಅವರ ಇಂಗ್ಲೆಂಡ್ ವಿರುದ್ಧದ ಉತ್ತಮ ಪ್ರದರ್ಶನವನ್ನು ಎತ್ತಿ ತೋರಿಸುತ್ತದೆ.

Rishabh Pant : ವಿದೇಶದಲ್ಲಿ 3 ಶತಕ ಸಿಡಿಸಿದ ವಿಕೆಟ್‌ಕೀಪರ್

ರಿಷಬ್‌ ಪಂತ್ ಆಂಡಿ ಫ್ಲವರ್ (ಜಿಂಬಾಬ್ವೆ) ಮತ್ತು ಲೆಸ್ ಏಮ್ಸ್ (ಇಂಗ್ಲೆಂಡ್) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ವಿದೇಶಿ ನೆಲದಲ್ಲಿ ವಿಕೆಟ್‌ಕೀಪರ್‌ನಿಂದ ಮೂರು ಶತಕಗಳನ್ನು ಗಳಿಸಿದ ಅಪರೂಪದ ಸಾಧನೆಯಾಗಿದೆ.

ಸಿಕ್ಸರ್‌ ಸಿಡಿಸಿ 6 ಶತಕ ಬಾರಿಸಿದ ಆಟಗಾರ:

ಪಂತ್ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಬಾರಿ ಸಿಕ್ಸರ್ ಬಾರಿಸಿ ಶತಕ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ವಿಶಿಷ್ಟ ದಾಖಲೆಗೂ ಅವರು ಪಾತ್ರರಾಗಿದ್ದಾರೆ. ವಿಚಿತ್ರವೆಂದರೆ, ಈ ಮೂರು ಸಂದರ್ಭಗಳಲ್ಲೂ ಎದುರಾಳಿ ತಂಡ ಇಂಗ್ಲೆಂಡ್ ಆಗಿತ್ತು.

Also Read :IPL 2025 : ಐಪಿಎಲ್‌ ನಿಂದ ಬಿಸಿಸಿಐ ಎಷ್ಟು ಆದಾಯ ತೆರಿಗೆ ಪಾವತಿಸುತ್ತೆ ಗೊತ್ತಾ ?

ರಿಷಬ್ ಪಂತ್ ಅವರು ಗಂಭೀರ ಅಪಘಾತದಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ ನಂತರ ಈ ಅಮೋಘ ಪ್ರದರ್ಶನ ನೀಡಿರುವುದು ವಿಶೇಷ.

Rishabh Pant World Record in ind vs eng 1st test MS MS Dhoni Record Break Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular