ವಾರಕ್ಕೆ 70 ಗಂಟೆ ಕೆಲಸ : ಶನಿವಾರ, ಭಾನುವಾರದ ರಜೆಯೂ ಇಲ್ಲ

new labour law : ಭಾರತದಲ್ಲಿ ಕಾರ್ಮಿಕರು ದಿನಕ್ಕೆ 8 ರಿಂದ 9 ಗಂಟೆ ದುಡಿಯುತ್ತಿದ್ದಾರೆ. ಆದರೆ ಇನ್ಮುಂದೆ ವಾರಕ್ಕೆ 70 ಗಂಟೆಗಳ ಕಾಲ ದುಡಿಯ ಬೇಕಾಗಿದೆ. ಭಾನುವಾರ, ಶನಿವಾರದ ರಜೆಯೂ ಕಟ್ ಆಗಿಲಿದೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಇತ್ತೀಚಿಗೆ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯಲ್ಲಿ ಭಾರತದ ಉತ್ಪಾದಕತೆ ಹೆಚ್ಚಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ದುಡಿಯ ಬೇಕು ಎಂದಿದ್ದರು.
ನಾರಾಯಣ ಮೂರ್ತಿ ಅವರ ಹೇಳಿಕೆಯ ಪ್ರಕಾರ ನಿತ್ಯವೂ ಐಟಿ ಕಂಪೆನಿಗಳ ಉದ್ಯೋಗಿಗಳು ದಿನಕ್ಕೆ 10 ಗಂಟೆಗೂ ಅಧಿಕ ಕಾಲ ಕೆಲಸ ನಿರ್ವಹಿಸಬೇಕಾಗಿದೆ. ಆದರೆ ನಾರಾಯಣ ಮೂರ್ತಿ ಅವರ ಹೇಳಿಕೆ ಸದ್ಯ ವಿವಾದವನ್ನು ಹುಟ್ಟುಹಾಕಿದೆ.
ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ವೈಯಕ್ತಿಕ ಇಮೇಲ್‌ಗಳನ್ನು ಕಳುಹಿಸುತ್ತಿದೆ, ಅದರಲ್ಲಿ ಅವರು ಪ್ರತಿದಿನ 9.15 ಗಂಟೆಗಳ ಕಾಲ, ವಾರಕ್ಕೆ ಐದು ದಿನ ಕೆಲಸ ಮಾಡುವಂತೆ ಮನವಿ ಮಾಡಿದೆ.
ರಿಮೋಟ್ ಆಗಿ ಕೆಲಸ ಮಾಡುವಾಗ ಯಾರಾದರೂ ಈ ಸಮಯವನ್ನು ಮೀರಿದರೆ, ಕಂಪನಿಯ ಮಾನವ ಸಂಪನ್ಮೂಲ (HR) ವಿಭಾಗದಿಂದ ಆರೋಗ್ಯ ಎಚ್ಚರಿಕೆ ಇಮೇಲ್‌ಗಳು ಹೋಗುತ್ತಿವೆ.
ಅತಿಯಾದ ಕೆಲಸದ ಸಮಯವು ಆರೋಗ್ಯ ಸಮಸ್ಯೆಗಳಿಗೆ, ವಿಶೇಷವಾಗಿ ಹೃದ್ರೋಗಗಳಿಗೆ ಕಾರಣವಾಗಬಹುದು ಎಂದು ಕಂಪನಿ ಎಚ್ಚರಿಸಿದೆ.
ನೌಕರರು ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಲು, ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಮತ್ತು ಕೆಲಸದ ನಂತರ ಸಂಪರ್ಕ ಕಡಿತಗೊಳಿಸಿ ವಿಶ್ರಾಂತಿ ಪಡೆಯಲು ಪ್ರೋತ್ಸಾಹಿಸಿದೆ.
ಕುಮಾರಸ್ವಾಮಿ ವಿರೋಧ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಐಟಿ ಕಂಪನಿಗಳಿಗೆ 70 ಗಂಟೆಗಳ ಕೆಲಸದ ಅವಧಿಯ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.
ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಒಪ್ಪಿಕೊಂಡರೆ, ಅದು ಐಟಿ/ಐಟಿಇಎಸ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಉದ್ಯೋಗಿಗಳ ಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
new labour law : ಕಾಯಿದೆ ತಿದ್ದುಪಡಿಯ ಪ್ರಸ್ತಾಪ
ಕಳೆದ ವರ್ಷ (2024ರಲ್ಲಿ), ಕರ್ನಾಟಕ ಸರ್ಕಾರವು “ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2024” ಅನ್ನು ಪ್ರಸ್ತಾಪಿಸಿತ್ತು. ಇದು ದೈನಂದಿನ ಕೆಲಸದ ಅವಧಿಯನ್ನು 14 ಗಂಟೆಗಳವರೆಗೆ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದು ವರದಿಯಾಗಿತ್ತು.
ಆದರೆ, ಇದು ಐಟಿ ವಲಯದಲ್ಲಿ ವಾರಕ್ಕೆ 70 ಗಂಟೆಗಳ ಕೆಲಸವನ್ನು ಕಡ್ಡಾಯಗೊಳಿಸುವ ನಿರ್ಧಾರ ಇನ್ನೂ ಜಾರಿ ಆಗಿಲ್ಲ. ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಯಾವುದೇ ಕಂಪೆನಿ ಕೆಲಸದ ಅವಧಿಯನ್ನು ಜಾರಿಗೆ ತಂದಿಲ್ಲ.
ಭಾರತದ ಕಾರ್ಮಿಕ ಕಾಯ್ದೆ ಹೇಳುವುದೇನು ?
ಭಾರತದಲ್ಲಿ ಕಾರ್ಮಿಕರು ಎಷ್ಷು ಗಂಟೆಗಳ ಕಾಲ ಕೆಲಸ ಮಾಡಬೇಕು ಅನ್ನೋದನ್ನು ಕಾರ್ಮಿಕ ಕಾಯಿದೆಗಳು ನಿರ್ಧಾರ ಮಾಡುತ್ತವೆ.
Also Read : ಇ- ಖಾತಾ ಅರ್ಜಿಗೆ ಬಾರೀ ಬೇಡಿಕೆ : ಏನಿದು ಇ – ಖಾತಾ ? ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಕೆಲಸ ಅವಧಿ ಎಷ್ಟು ?
- ದಿನಕ್ಕೆ ಗರಿಷ್ಠ ಕೆಲಸದ ಅವಧಿ: ಯಾವುದೇ ನೌಕರನು ದಿನಕ್ಕೆ 8 ರಿಂದ 9 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ.
- ವಾರಕ್ಕೆ ಗರಿಷ್ಠ ಕೆಲಸದ ಅವಧಿ: ಯಾವುದೇ ನೌಕರನು ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ.
- ವಿಶ್ರಾಂತಿ ವಿರಾಮಗಳು: ನೌಕರರು ಸತತ 5 ಗಂಟೆಗಳ ಕೆಲಸದ ನಂತರ ಕನಿಷ್ಠ 30 ನಿಮಿಷಗಳ ವಿಶ್ರಾಂತಿ ವಿರಾಮವನ್ನು ಪಡೆಯಬೇಕು.
- ವಾರದ ರಜೆ: ವಾರದಲ್ಲಿ ಕನಿಷ್ಠ ಒಂದು ದಿನ ಕಡ್ಡಾಯ ರಜೆ ಇರಬೇಕು.
ಹೆಚ್ಚುವರಿ ಕೆಲಸ (Overtime):
- ಪ್ರಮಾಣಿತ ಕೆಲಸದ ಅವಧಿಯನ್ನು (ದಿನಕ್ಕೆ 9 ಗಂಟೆ ಅಥವಾ ವಾರಕ್ಕೆ 48 ಗಂಟೆ) ಮೀರಿ ಮಾಡಿದ ಯಾವುದೇ ಕೆಲಸವನ್ನು ಹೆಚ್ಚುವರಿ ಕೆಲಸ ಎಂದು ಪರಿಗಣಿಸಲಾಗುತ್ತದೆ.
- ನೌಕರರು ಹೆಚ್ಚುವರಿ ಕೆಲಸ ಮಾಡಿದ್ರೆ ನೌಕರನ ಸಾಮಾನ್ಯ ವೇತನದ ಎರಡು ಪಟ್ಟು ಪರಿಹಾರವನ್ನು ನೀಡಬೇಕು.
- ಹೆಚ್ಚುವರಿ ಕೆಲಸಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಉದ್ಯಮಗಳಲ್ಲಿ ಪ್ರತಿ ತ್ರೈಮಾಸಿಕಕ್ಕೆ (ಮೂರು ತಿಂಗಳು) ಗರಿಷ್ಠ 50 ಗಂಟೆಗಳವರೆಗೆ ಮಿತಿಯನ್ನು ನಿಗದಿಪಡಿಸಲಾಗಿದೆ.
Also Read : ಗೃಹಲಕ್ಷ್ಮೀ ಯೋಜನೆ : ಜೂನ್ ತಿಂಗಳ ಹಣ ಜಮೆ ಆಗಿದ್ಯಾ ? ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
new labour law : ಹೊಸ ಕಾರ್ಮಿಕ ಸಂಹಿತೆಗಳು
ಭಾರತ ಸರ್ಕಾರವು ಕಾರ್ಮಿಕರ ಕಾಯ್ದೆಗಳನ್ನು ಸರಳೀಕರಣಗೊಳಿಸಿದೆ. ಅದ್ರಲ್ಲೂ ಅಸ್ತಿತ್ವದಲ್ಲಿ ಇರುವ 44 ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಿ, ಕ್ರೂಢೀಕರಣ ಮಾಡಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು (Labour Codes) ಅಂಗೀಕರಿಸಿದೆ.
ದಿನಕ್ಕೆ 12 ಗಂಟೆ ಕೆಲಸದ ಸಾಧ್ಯತೆ: ಹೊಸ ಸಂಹಿತೆಗಳು ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗಳವರೆಗೆ ವಿಸ್ತರಿಸಲು ಅವಕಾಶ ನೀಡುತ್ತವೆ, ಆದರೆ ವಾರದ ಒಟ್ಟು ಕೆಲಸದ ಅವಧಿ 48 ಗಂಟೆಗಳಲ್ಲಿಯೇ ಇರಬೇಕು. ಇದರರ್ಥ, ವಾರಕ್ಕೆ 4 ದಿನ ಕೆಲಸ ಮಾಡಿ 3 ದಿನ ರಜೆ ಪಡೆಯುವ ಸಾಧ್ಯತೆ ಇರಬಹುದು.
new labour law 70 hours work in week Saturday and sunday no holiday in Kannada News



