ಇ- ಖಾತಾ ಅರ್ಜಿಗೆ ಬಾರೀ ಬೇಡಿಕೆ : ಏನಿದು ಇ – ಖಾತಾ ? ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು : ಇನ್ಮುಂದೆ ಆಸ್ತಿ ನೋಂದಣಿ, ಮಾರಾಟ ಅಥವಾ ವರ್ಗಾವಣೆ ಮಾಡಲು ಇ- ಖಾತಾ (e khata) ಕಡ್ಡಾಯ ಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಹೊಸ ರೂಲ್ಸ್ ಜುಲೈ 1 2025ರಿಂದಲೇ ಜಾರಿಗೆ ಬರಲಿದೆ. ಬೆಂಗಳೂರಲ್ಲಿ ಇ- ಖಾತಾ ಮಾಡಿಸಿಕೊಳ್ಲಲು ಬಾರಿ ಬೇಡಿಕೆ ಬಂದಿದೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ- ಖಾತಾ ಕಡ್ಡಾಯಗೊಳಿಸಲಾಗಿದೆ. ಜುಲೈ 1, 2025 ರಿಂದ ಎಲ್ಲಾ ಆನ್‌ಲೈನ್ ಕಟ್ಟಡ ಯೋಜನೆ ಅರ್ಜಿಗಳಿಗೆ ಇ-ಖಾತಾ ಕಡ್ಡಾಯವಾಗಿದೆ ಎಂದು BBMP ಘೋಷಿಸಿದೆ. ಜನರು ಈ ಖಾತಾ ಪಡೆಯಲು ಮುಂದೆ ಬಂದಿದ್ದಾರೆ.
e khata: ಇ-ಖಾತಾ ಎಂದರೇನು ?
ಇ-ಖಾತಾ (e-Khata) ಎಂಬುದು ಕರ್ನಾಟಕದಲ್ಲಿ ಆಸ್ತಿ ಮಾಲೀಕತ್ವದ ದಾಖಲೆಗಳನ್ನು ಡಿಜಿಟಲೀಕರಣಕ್ಕೆ ಒಳಪಡಿಸುವ ವ್ಯವಸ್ಥೆಯಾಗಿದೆ. ಮುಖ್ಯವಾಗಿ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಇ-ಖಾತಾ ಸೇವೆಗಳನ್ನು ಒದಗಿಸುತ್ತದೆ. ಹಿಂದೆ, ಆಸ್ತಿ ಮಾಲೀಕತ್ವದ ವರ್ಗಾವಣೆ, ವಿಭಜನೆ, ಅಥವಾ ವಿಲೀನಗೊಳಿಸುವಿಕೆಯಂತಹ ಪ್ರಕ್ರಿಯೆಗಳಿಗೆ ಪಾಲಿಕೆ ಕಚೇರಿಗೆ ಅಲೆದಾಡಬೇಕಿತ್ತು. ಇ-ಖಾತಾ ವ್ಯವಸ್ಥೆಯು ಈ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕ ಸುಲಭಗೊಳಿಸಿದೆ.
e khata : ಬಾರೀ ರೆಸ್ಪಾನ್ಸ್‌ಗೆ ಕಾರಣಗಳೇನು ?
ಪಾರದರ್ಶಕತೆ: ಆನ್‌ಲೈನ್ ವ್ಯವಸ್ಥೆಯು ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಿದೆ. ಎಲ್ಲಿಯೂ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ.
ಸಮಯ ಉಳಿತಾಯ: ಪಾಲಿಕೆ ಕಚೇರಿಗೆ ಅಲೆದಾಡುವ ಬದಲು, ಮನೆಯಲ್ಲೇ ಕುಳಿತು ಅಥವಾ ಯಾವುದೇ ಸೇವಾ ಕೇಂದ್ರದಿಂದ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ನಾಗರಿಕರ ಸಮಯ ಉಳಿತಾಯವಾಗುತ್ತದೆ.
ಸುಲಭ ಪ್ರವೇಶ: ಸಕಾಲ ಸೇವಾ ಕೇಂದ್ರಗಳು, ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದರಿಂದ, ಡಿಜಿಟಲ್ ಸಾಕ್ಷರತೆ ಇಲ್ಲದವರಿಗೂ ಸುಲಭವಾಗಿ ಸೇವೆ ಲಭ್ಯವಾಗುತ್ತಿದೆ.
ದಕ್ಷತೆ: ಆನ್‌ಲೈನ್ ವ್ಯವಸ್ಥೆಯು ಕಾಗದರಹಿತ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ.
ಸಾರ್ವಜನಿಕ ಜಾಗೃತಿ: ಇ-ಖಾತಾ ಕುರಿತು ಸರ್ಕಾರವು ನಡೆಸಿದ ಜಾಗೃತಿ ಅಭಿಯಾನಗಳು ಮತ್ತು ಸೇವಾ ಸಿಂಧು ಪೋರ್ಟಲ್ ಮೂಲಕ ಲಭ್ಯವಿರುವ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದೆ.
e khata : ಇ-ಖಾತಾ ಸೇವೆಗಳು:
- ಇ-ಖಾತಾ ವ್ಯವಸ್ಥೆಯ ಮೂಲಕ ಈ ಕೆಳಗಿನ ಪ್ರಮುಖ ಸೇವೆಗಳನ್ನು ಪಡೆಯಬಹುದು:
- ಖಾತಾ ವರ್ಗಾವಣೆ (Khata Transfer): ಆಸ್ತಿಯ ಮಾಲೀಕತ್ವ ಬದಲಾದಾಗ (ಖರೀದಿ, ಮಾರಾಟ, ಉಯಿಲು, ದಾನ ಇತ್ಯಾದಿ) ಖಾತಾವನ್ನು ಹೊಸ ಮಾಲೀಕರ ಹೆಸರಿಗೆ ಬದಲಾಯಿಸುವುದು.
- ಖಾತಾ ವಿಭಜನೆ (Khata Bifurcation): ಒಂದು ದೊಡ್ಡ ಆಸ್ತಿಯನ್ನು ಎರಡು ಅಥವಾ ಹೆಚ್ಚು ಸಣ್ಣ ಘಟಕಗಳಾಗಿ ವಿಭಜಿಸಿದಾಗ ಪ್ರತ್ಯೇಕ ಖಾತಾ ಪಡೆಯುವುದು.
- ಖಾತಾ ವಿಲೀನ (Khata Amalgamation): ಒಂದೇ ಮಾಲೀಕರಿಗೆ ಸೇರಿದ ಎರಡು ಅಥವಾ ಹೆಚ್ಚು ಸಣ್ಣ ಆಸ್ತಿಗಳನ್ನು ಒಂದೇ ಘಟಕವಾಗಿ ವಿಲೀನಗೊಳಿಸಿದಾಗ ಒಂದು ಖಾತಾ ಪಡೆಯುವುದು.
- ಹೊಸ ಖಾತಾ ನೋಂದಣಿ (New Khata Registration): ಹೊಸದಾಗಿ ನಿರ್ಮಿಸಿದ ಆಸ್ತಿಗಳಿಗೆ ಮೊದಲ ಬಾರಿಗೆ ಖಾತಾ ಪಡೆಯುವುದು.
e khata : ಇ – ಖಾತಾ ಅರ್ಜಿ ಸಲ್ಲಿಸುವುದು ಹೇಗೆ ?
- ಇ-ಖಾತಾ ಅರ್ಜಿಗಳನ್ನು ಈ ಕೆಳಗಿನ ವಿಧಾನಗಳ ಮೂಲಕ ಸಲ್ಲಿಸಬಹುದು
- ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ:
- https://sevasindhu.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
- BBMP ಸೇವೆಗಳ ವಿಭಾಗಕ್ಕೆ ಹೋಗಿ e-Khata ಸಂಬಂಧಿತ ಅರ್ಜಿಯನ್ನು ಆಯ್ಕೆ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.
- ಸಕಾಲ ಸೇವಾ ಕೇಂದ್ರಗಳು / ಬೆಂಗಳೂರು ಒನ್ / ಕರ್ನಾಟಕ ಒನ್ / ಗ್ರಾಮ ಒನ್ ಕೇಂದ್ರಗಳಲ್ಲಿ:
- ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
- ಸೇವಾ ಪ್ರತಿನಿಧಿಯ ಸಹಾಯದಿಂದ ಅರ್ಜಿಯನ್ನು ಸಲ್ಲಿಸಿ.
ಇದನ್ನೂ ಓದಿ : ಜುಲೈ 1 ರಿಂದ ಹೊಸ ರೂಲ್ಸ್ : ಆಧಾರ್, ಪ್ಯಾನ್, ಯುಪಿಐ, ತತ್ಕಾಲ್ ಟಿಕೆಟ್ ನಿಯಮ ತಿಳಿದುಕೊಳ್ಳಿ
48 ಗಂಟೆಗಳಲ್ಲೇ ಇ- ಖಾತಾ ವಿತರಣೆ
48 ಗಂಟೆಗಳಲ್ಲಿ ವಿತರಣೆ: BBMP ಈಗ 48 ಗಂಟೆಗಳ ಒಳಗೆ ಅಂತಿಮ ಇ-ಖಾತಾಗಳನ್ನು ವಿತರಿಸಲು ಕ್ರಮ ಕೈಗೊಂಡಿದೆ. ಇದು ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿದ್ದು, ನಾಗರಿಕರಿಗೆ ಅನುಕೂಲಕರವಾಗಿದೆ.
ಮೆಗಾ ಇ-ಖಾತಾ ಮೇಳ
ಡಿಜಿಟಲ್ ಸಾಕ್ಷರತೆ ಇಲ್ಲದ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಷ್ಟಪಡುವವರಿಗೆ ಸಹಾಯ ಮಾಡಲು BBMP ಮೆಗಾ ಇ-ಖಾತಾ ಮೇಳಗಳನ್ನು ಆಯೋಜಿಸುತ್ತಿದೆ. ಇತ್ತೀಚೆಗೆ ಸಹಕಾರನಗರದಲ್ಲಿ ನಡೆದ ಮೆಗಾ ಮೇಳದಲ್ಲಿ 3,000 ಕ್ಕೂ ಹೆಚ್ಚು ನಿವಾಸಿಗಳು ಇ-ಖಾತಾ ಪಡೆದಿದ್ದಾರೆ. ಈ ಮೇಳಗಳು ಸ್ಥಳದಲ್ಲೇ ಅರ್ಜಿಗಳನ್ನು ಸ್ವೀಕರಿಸಿ, ತ್ವರಿತವಾಗಿ ಇ-ಖಾತಾಗಳನ್ನು ವಿತರಿಸಲು ಸಹಾಯ ಮಾಡುತ್ತಿವೆ.
ಬೆಂಗಳೂರಿನಲ್ಲಿ ವಾಸವಾಗಿರುವ ನಾಗರಿಕರು ಬಿಬಿಎಂಪಿ (BBMP)ಯ ಇ ಆಸ್ತಿ (e-Aasthi)ಪೋರ್ಟಲ್ bbmpeaasthi.karnataka.gov.in ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ವೆಬ್‌ಸೈಟ್ ಮೂಲಕ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡುವ ಜೊತೆಗೆ ಇ-ಖಾತಾವನ್ನು ಡೌನ್‌ಲೋಡ್ ಮಾಡಬಹುದು.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಜೂನ್ ತಿಂಗಳ ಹಣ ಜಮೆ ಆಗಿದ್ಯಾ ? ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಆಸ್ತಿಗಳಿಗೆ ಇ-ಖಾತಾ ನೀಡುವ ಗುರಿ ಇದೆ. ಇದುವರೆಗೆ 5 ಲಕ್ಷಕ್ಕೂ ಹೆಚ್ಚು (ಸುಮಾರು 5.34 ಲಕ್ಷ) ಅಂತಿಮ ಇ-ಖಾತಾ ದಾಖಲೆಗಳನ್ನು ವಿತರಿಸಲಾಗಿದೆ. ಸುಮಾರು 22 ಲಕ್ಷ ಕರಡು ಇ-ಖಾತಾಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ, ಮಾಲೀಕರು ಇವುಗಳನ್ನು ಪರಿಶೀಲಿಸಿ ಅಂತಿಮ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು.
ಪ್ರತಿದಿನ ಸುಮಾರು 2,000 ಹೊಸ ಇ-ಖಾತಾ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. BBMP ದಿನಕ್ಕೆ 3,000 ಅರ್ಜಿಗಳನ್ನು ವಿಲೇವಾರಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಹೆಚ್ಚಿನ ಬಾಕಿ ಅರ್ಜಿಗಳನ್ನು 1-2 ದಿನಗಳಲ್ಲಿ ಇತ್ಯರ್ಥಪಡಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಇ-ಖಾತಾ ವ್ಯವಸ್ಥೆಯು ಯಶಸ್ಸನ್ನು ಕಂಡಿದೆ. ಇದು ಆಸ್ತಿ ದಾಖಲೆಗಳನ್ನು ನಿರ್ವಹಿಸುವಲ್ಲಿ ಡಿಜಿಟಲ್ ಕ್ರಾಂತಿಯನ್ನು ತಂದಿದ್ದು, ನಾಗರಿಕರಿಗೆ ದೊಡ್ಡ ಮಟ್ಟದ ಸೌಲಭ್ಯವನ್ನು ಒದಗಿಸಿದೆ.
e khata : How to download digital e khata ? in Kannada News



