200MP ಕ್ಯಾಮೆರಾ, 1TB ಸ್ಟೋರೆಜ್‌ : ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾದಲ್ಲಿ ಏನೇನಿದೆ ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ (Samsung Galaxy S26 Ultra ) ಮೊಬೈಲ್‌ ಬಿಡುಗಡೆಗೆ ಗ್ರಾಹಕರು ಕಾಯುತ್ತಿದ್ದಾರೆ. ಸ್ಯಾಮ್‌ಸಂಗ್‌ ಕಂಪೆನಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ ಕೆಲ ಮಾಹಿತಿಗಳು ಸೋರಿಕೆಯಾಗಿದೆ. ಹಾಗಾದ್ರೆ ಈ ಮೊಬೈಲ್‌ ವಿಶೇಷತೆ ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S ಸರಣಿಯ ಫೋನ್‌ಗಳನ್ನು ಪ್ರತಿ ವರ್ಷ ಜನವರಿಯಲ್ಲಿ ಬಿಡುಗಡೆ ಮಾಡುತ್ತದೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಫೋನ್ ಅನ್ನು ಜನವರಿ 2026 ರಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Samsung Galaxy S26 Ultra : ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಏನಿದೆ ವಿಶೇಷತೆ ?

ಡಿಸ್ಪ್ಲೇ:

    • ಗಾತ್ರ: 6.9-ಇಂಚಿನ ಡೈನಾಮಿಕ್ LTPO AMOLED 2X ಡಿಸ್ಪ್ಲೇ.
    • ರೆಸಲ್ಯೂಶನ್: QHD+ (3120 x 1440 ಪಿಕ್ಸೆಲ್‌ಗಳು).
    • ರಿಫ್ರೆಶ್ ದರ: 1-120 Hz, ಕೆಲವು ವರದಿಗಳು 165 Hz ಅನ್ನು ಸಹ ಸೂಚಿಸಿವೆ.
    • ಪ್ರಖರತೆ: 2600 ನಿಟ್ಸ್ ಪೀಕ್ ಬ್ರೈಟ್‌ನೆಸ್.
    • ಬೆಜೆಲ್‌ಗಳು: ಅಲ್ಟ್ರಾ-ಸ್ಲಿಮ್ ಬೆಜೆಲ್‌ಗಳು.

    Also Read : 10,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 5G ಮೊಬೈಲ್‌

    ಪ್ರೊಸೆಸರ್:

      ಮುಂದಿನ ಪೀಳಿಗೆಗೆ ಅನುಕೂಲಕರವಾದ ಪ್ರೊಸೆಸರ್‌ ಎನಿಸಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 (3nm) ಈ ಸ್ಮಾರ್ಟ್‌ ಪೋನ್‌ ಹೊಂದಿರಲಿದೆ. ಹೆಚ್ಚು ದಕ್ಷತೆ, ಕಾರ್ಯಕ್ಷಮತೆಯಿಂದ ಕೆಲಸ ಮಾಡಲಿದೆ.

      ಕ್ಯಾಮೆರಾ:

        • ಮುಖ್ಯ ಕ್ಯಾಮೆರಾ: 200MP ಸಂವೇದಕವನ್ನು ಮುಂದುವರಿಸುವ ಸಾಧ್ಯತೆಯಿದೆ, ಆದರೆ ಇಮೇಜ್ ಪ್ರೊಸೆಸಿಂಗ್‌ನಲ್ಲಿ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ.
        • ಅಲ್ಟ್ರಾ-ವೈಡ್ ಕ್ಯಾಮೆರಾ: 50MP ಸಂವೇದಕ (S25 ಅಲ್ಟ್ರಾದಿಂದ ಮುಂದುವರೆಯುವ ಸಾಧ್ಯತೆ).
        • ಟೆಲಿಫೋಟೋ ಲೆನ್ಸ್ : 50MP ಟೆಲಿಫೋಟೋ ಲೆನ್ಸ್ ಜೊತೆಗೆ 5x ಆಪ್ಟಿಕಲ್ ಜೂಮ್ ಒಳಗೊಂಡಿದೆ. ಸ್ಯಾಮ್‌ಸಂಗ್ S24 ಮತ್ತು S25 ಅಲ್ಟ್ರಾ‌ದಲ್ಲಿ ಕೂಡ ಮುಂದುವರಿಯಲಿದೆ. ಜೊತೆಗೆ ಡ್ಯುಯಲ್ ಟೆಲಿಫೋಟೋ ಸೆಟಪ್ ಒಳಗೊಂಡಿರಲಿದೆ.
        • ಸೆಲ್ಫಿ ಕ್ಯಾಮೆರಾ: 20MP ಅಥವಾ 64MP ಮುಂಭಾಗದ ಕ್ಯಾಮೆರಾ (ಕೆಲವು ವದಂತಿಗಳು ಡಿಸ್ಪ್ಲೇ ಅಡಿಯಲ್ಲಿರುವ ಸೆಲ್ಫಿ ಕ್ಯಾಮೆರಾ ಬಗ್ಗೆಯೂ ಇವೆ).

        Also Read : Jio, Airtelಗೆ ಟಕ್ಕರ್‌ ಕೊಟ್ಟ BSNL : ಕೇವಲ 6 ರೂಪಾಯಿಗಳಿಗೆ 1.5 GB ಡೇಟಾ, ಅನಿಯಮಿತ ಕರೆ

        ಕ್ಯಾಮೆರಾ ಮಾಡ್ಯೂಲ್ ವಿನ್ಯಾಸ: ಹಿಂದಿನ ಉಬ್ಬು ಕ್ಯಾಮೆರಾ ಮಾಡ್ಯೂಲ್ ವಿನ್ಯಾಸವನ್ನು ಬದಲಿಸಿ, ಹೆಚ್ಚು ನಯವಾದ ಮತ್ತು ಇಂಟಿಗ್ರೇಟೆಡ್ ವಿನ್ಯಾಸವನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

        RAM ಮತ್ತು ಸ್ಟೋರೇಜ್:

          • 12GB ಅಥವಾ 16GB RAM ಆಯ್ಕೆಗಳು.
          • 256GB, 512GB, ಅಥವಾ 1TB ಸ್ಟೋರೇಜ್ ಆಯ್ಕೆಗಳು (UFS 4.1).

          ಬ್ಯಾಟರಿ ಮತ್ತು ಚಾರ್ಜಿಂಗ್:

            ಬ್ಯಾಟರಿ: 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಮುಂದುವರಿಸುವ ಸಾಧ್ಯತೆ ಇದೆ, ಆದರೆ ಬ್ಯಾಟರಿ ಶಕ್ತಿಯ ಸಾಂದ್ರತೆಯಲ್ಲಿ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ.

            ಚಾರ್ಜಿಂಗ್: 45W ನಿಂದ 65W ವೇಗದ ಚಾರ್ಜಿಂಗ್‌ಗೆ ಅಪ್‌ಗ್ರೇಡ್ ಆಗುವ ಬಲವಾದ ವದಂತಿಗಳಿವೆ, ಇದು ಬ್ಯಾಟರಿ ಚಾರ್ಜಿಂಗ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

            ಆಪರೇಟಿಂಗ್ ಸಿಸ್ಟಮ್:

              • ಆಂಡ್ರಾಯ್ಡ್ 16 ಆಧಾರಿತ ಒನ್ UI 8 (One UI 8.0) ನೊಂದಿಗೆ ಬರಲಿದೆ.
              • ಹಲವು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಭದ್ರತಾ ಅಪ್‌ಡೇಟ್‌ಗಳನ್ನು ಪಡೆಯುವ ನಿರೀಕ್ಷೆ.

              ಇತರೆ ವೈಶಿಷ್ಟ್ಯಗಳು:

                • S-Pen: ಅಂತರ್ಗತ S-Pen ಬೆಂಬಲವನ್ನು ಮುಂದುವರಿಸಲಾಗುತ್ತದೆ.
                • ವಿನ್ಯಾಸ: ಟೈಟಾನಿಯಂ ಫ್ರೇಮ್ ಮತ್ತು ಕಾರ್ನಿಂಗ್ ಗೊರಿಲ್ಲಾ ಆರ್ಮರ್ 2 ರಕ್ಷಣೆ.
                • IP ರೇಟಿಂಗ್: ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್.
                • AI ವೈಶಿಷ್ಟ್ಯಗಳು: ಹೆಚ್ಚು ಸುಧಾರಿತ Galaxy AI ವೈಶಿಷ್ಟ್ಯಗಳು.

                ಭಾರತದಲ್ಲಿ ನಿರೀಕ್ಷಿತ ಬೆಲೆ

                ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಬೆಲೆ ಸುಮಾರು ₹1,29,999 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

                ಈ ಎಲ್ಲಾ ವಿವರಗಳು ಪ್ರಸ್ತುತ ವದಂತಿಗಳು ಮತ್ತು ಸೋರಿಕೆಗಳನ್ನು ಆಧರಿಸಿವೆ ಎಂಬುದನ್ನು ಗಮನಿಸಬೇಕು. ಅಧಿಕೃತ ಬಿಡುಗಡೆ ಸಮೀಪಿಸುತ್ತಿದ್ದಂತೆ ಹೆಚ್ಚಿನ ನಿಖರವಾದ ಮಾಹಿತಿ ಲಭ್ಯವಾಗಲಿದೆ.

                200MP camera 1TB storage Samsung Galaxy S26 Ultra full specs leaked in Kannada News

                Kannada News Next Desk

                Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

                Related Stories