ಆಯುಷ್ಮಾನ್ ಕಾರ್ಡ್‌ಗೆ ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಮದುವೆ, ಮಗುವಿನ ಜನನ ಅಥವಾ ಹೊಸ ಅರ್ಹ ಕುಟುಂಬ ಸದಸ್ಯ ಸೇರ್ಪಡೆಯಾದರೆ ಆಯುಷ್ಮಾನ್ ಕಾರ್ಡ್‌ನಲ್ಲಿ ಹೆಸರು ಸೇರಿಸಿ ವರ್ಷಕ್ಕೆ ₹5 ಲಕ್ಷವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆಯಬಹುದು.

Ad

ಮನೆಯಲ್ಲಿ ಹೊಸ ಮಗು ಜನಿಸಿದ್ದರೆ ಅಥವಾ ಮದುವೆಯ ನಂತರ ಹೊಸ ಸೊಸೆ ಕುಟುಂಬಕ್ಕೆ ಸೇರಿದ್ದರೆ, ಅವರ ಹೆಸರನ್ನು ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ ಆಯುಷ್ಮಾನ್ ಕಾರ್ಡ್‌ಗೆ ಸೇರಿಸಬಹುದು. ಇದರಿಂದ ಅವರು ಕೂಡ ವರ್ಷಕ್ಕೆ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.

Ad

ಆಯುಷ್ಮಾನ್ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶವಿಲ್ಲ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಸರ್ಕಾರ ಈ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಅರ್ಹ ಕುಟುಂಬಗಳಿಗೆ ಹೊಸ ಸದಸ್ಯರ ಹೆಸರನ್ನು ಸುಲಭವಾಗಿ ನೋಂದಾಯಿಸಿಕೊಳ್ಳುವ ಅವಕಾಶ ನೀಡಿದೆ.

ಯಾರು ಹೆಸರು ಸೇರಿಸಬಹುದು?

ಅರ್ಹ ಕುಟುಂಬಕ್ಕೆ ಹೊಸದಾಗಿ ಸೇರುವ ಸದಸ್ಯರು, ಉದಾಹರಣೆಗೆ ಮದುವೆಯಾದ ಬಳಿಕ ಕುಟುಂಬಕ್ಕೆ ಬಂದ ಸೊಸೆ, ನವಜಾತ ಶಿಶು ಅಥವಾ ಇದುವರೆಗೆ ಕಾರ್ಡ್‌ನಲ್ಲಿ ಹೆಸರು ಸೇರಿಸದ ಇತರ ಅರ್ಹ ಕುಟುಂಬ ಸದಸ್ಯರ ಹೆಸರನ್ನು ಸೇರಿಸಬಹುದು.

ಹೆಸರು ಸೇರಿಸುವ ವಿಧಾನ

ಇದಕ್ಕಾಗಿ ಅಧಿಕೃತ ಆಯುಷ್ಮಾನ್ ಪೋರ್ಟಲ್‌ಗೆ ಭೇಟಿ ನೀಡಿ ಮೊಬೈಲ್ ಸಂಖ್ಯೆ ಮತ್ತು OTP ಮೂಲಕ ಲಾಗಿನ್ ಮಾಡಬೇಕು. ಬಳಿಕ ‘Add Member’ ಆಯ್ಕೆಯನ್ನು ಬಳಸಿಕೊಂಡು ಹೊಸ ಸದಸ್ಯರ ವಿವರಗಳನ್ನು ಭರ್ತಿ ಮಾಡಿ, ಆಧಾರ್ ಪರಿಶೀಲನೆ ಪೂರ್ಣಗೊಳಿಸಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಪರಿಶೀಲನೆ ಬಳಿಕ ಹೊಸ ಸದಸ್ಯರ ಹೆಸರಿನೊಂದಿಗೆ ಆಯುಷ್ಮಾನ್ ಕಾರ್ಡ್ ಲಭ್ಯವಾಗುತ್ತದೆ.

Ad

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಸಮೀಪದ ಕಾಮನ್ ಸರ್ವೀಸ್ ಸೆಂಟರ್ (CSC) ಅಥವಾ ಯೋಜನೆಗೆ ನೋಂದಾಯಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವ ಆಯುಷ್ಮಾನ್ ಮಿತ್ರರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು.

ಅಗತ್ಯ ದಾಖಲೆಗಳು

ಹೊಸ ಸೊಸೆಯ ಹೆಸರು ಸೇರಿಸಲು ಮದುವೆ ಪ್ರಮಾಣಪತ್ರ, ಪತಿಯ ಆಯುಷ್ಮಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅಗತ್ಯ. ನವಜಾತ ಶಿಶುವಿನ ಹೆಸರಿಗಾಗಿ ಜನನ ಪ್ರಮಾಣಪತ್ರ ಮತ್ತು ಪೋಷಕರ ಆಯುಷ್ಮಾನ್ ಕಾರ್ಡ್ ಸಲ್ಲಿಸಬೇಕು.

ಆರೋಗ್ಯ ಸಮಸ್ಯೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಆದ್ದರಿಂದ ಅರ್ಹ ಕುಟುಂಬದ ಎಲ್ಲ ಸದಸ್ಯರ ಹೆಸರೂ ಆಯುಷ್ಮಾನ್ ಕಾರ್ಡ್‌ನಲ್ಲಿ ಇರುವಂತೆ ನೋಡಿಕೊಳ್ಳುವುದು ಉತ್ತಮ. ಇದರಿಂದ ದೇಶದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯುವ ಅವಕಾಶ ಸಿಗುತ್ತದೆ.

Ad

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »