ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ: ಶೌಚಾಲಯದಲ್ಲಿ ರಹಸ್ಯ ಸುರಂಗ !

ಹುಬ್ಬಳ್ಳಿ : ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಬೇಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. 10 ಅಧಿಕ ಮಹಿಳೆಯರನ್ನು ರಕ್ಷಿಸಲಾಗಿದ್ದು, 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಶೌಚಾಲಯದಲ್ಲಿ ಪತ್ತೆಯಾಯ್ತು ರಹಸ್ಯ ಸುರಂತ..!
ಹೊಸೂರಿನ ಕಾಲೇಜಿನ ಸಮೀಪದಲ್ಲಿ ಪಾರಿಜಾತ ರೆಸಿಡೆನ್ಸಿ ಅನ್ನೋ ಲಾಡ್ಜ್ನಲ್ಲಿ ಬೃಹತ್ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಅನ್ನೋ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಜಾಲವನ್ನು ಬೇಧಿಸಿದ್ದಾರೆ.
ಸಿಸಿಬಿ ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ, ಲಾಡ್ಜ್ನ ಸಿಬ್ಬಂದಿ ಮತ್ತು ದಂಧೆಕೋರರು ಮಹಿಳೆಯರನ್ನು ಅಡಗಿಸಲು ಹೊಸ ವಿಧಾನವನ್ನು ಬಳಸುತ್ತಿದ್ದರು. ಲಾಡ್ಜ್ನ ಶೌಚಾಲಯದ ಒಳಗೆ ರಹಸ್ಯ ಸುರಂಗ ಮಾರ್ಗವೊಂದನ್ನು ನಿರ್ಮಿಸಲಾಗಿತ್ತು.
ಈ ಸುರಂಗವು ಶೌಚಾಲಯದೊಳಗೆ ರಹಸ್ಯ ಕೋಣೆಗೆ ಸಂಪರ್ಕ ಕಲ್ಪಿಸುತ್ತಿತ್ತು. ಪೊಲೀಸರು ದಾಳಿ ಮಾಡಿದಾಗ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯರನ್ನು ಈ ಸುರಂಗದ ಮೂಲಕ ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಲಾಗುತ್ತಿತ್ತು.
Also Read : ಕರ್ನಾಟಕ ನಮ್ಮ ಜನ್ಮಸ್ಥಳ, ಕನ್ನಡ ನಮ್ಮ ಹೆಮ್ಮೆ : ಸಿಬ್ಬಂದಿ ವರ್ತನೆಗೆ ಕೆನರಾ ಬ್ಯಾಂಕ್ ಸ್ಪಷ್ಟನೆ
ಪೊಲೀಸರು ಲಾಡ್ಜ್ ನಲ್ಲಿ ನಿರ್ಮಿಸಲಾಗಿದ್ದ, ರಹಸ್ಯ ಕೋಣೆಯ ಪ್ರವೇಶ ದ್ವಾರವನ್ನು ಪತ್ತೆಹಚ್ಚಿ ತೆರೆದು, ಅದರೊಳಗಿದ್ದ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.
ಸಿಸಿಬಿ ಪೊಲೀಸರು ಮತ್ತು ಮೈಸೂರಿನ ಒಡನಾಡಿ ಸಂಸ್ಥೆ ನೀಡಿದ ನಿರ್ದಿಷ್ಟ ಮಾಹಿತಿ ಆಧರಿಸಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ದಾಳಿಯಲ್ಲಿ 10ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಒಬ್ಬರು ವಿದೇಶಿ ಯುವತಿ ಕೂಡ ಸೇರಿದ್ದಾರೆ.
ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಲಾಡ್ಜ್ನ ಮ್ಯಾನೇಜರ್, ಕೆಲ ಸಿಬ್ಬಂದಿ ಹಾಗೂ ಗ್ರಾಹಕರು ಸೇರಿದ್ದಾರೆ. ಆದರೆ, ಈ ಲಾಡ್ಜ್ನ ಮಾಲೀಕ ವಿಜಿ ಎಂಬಾತ ಪೊಲೀಸರ ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಾವಿರಾರು ಕಾಂಡೋಮ್ ಪತ್ತೆ
ದಾಳಿಯ ವೇಳೆಯಲ್ಲಿ ಲಾಡ್ಜ್ನ ಕೊಠಡಿಗಳಲ್ಲಿ ತಮಿಳುನಾಡು ಆರೋಗ್ಯ ಇಲಾಖೆಯಿಂದ ವಿತರಿಸಲಾಗಿದ್ದ ಸಾವಿರಾರು ಕಾಂಡೋಮ್ಗಳು ಪತ್ತೆಯಾಗಿವೆ.
ಶಾಲೆ ಮತ್ತು ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶಗಳ ಸಮೀಪದಲ್ಲೇ ಇಂತಹ ಬೃಹತ್ ಅಕ್ರಮ ದಂಧೆ ನಡೆಯುತ್ತಿದ್ದುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೂ ಮಾಹಿತಿ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
Also Read : ಡೆತ್ನೋಟ್ ಬರೆದಿಟ್ಟು ಪಿಎಸ್ಐ ನಾಗರಾಜು ಆತ್ಮಹತ್ಯೆ : ಕಾರಣವೇನು ಗೊತ್ತಾ ?
ಸದ್ಯ, ಪೊಲೀಸರು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಪರಾರಿಯಾಗಿರುವ ಲಾಡ್ಜ್ ಮಾಲೀಕ ವಿಜಿ ಹಾಗೂ ಈ ಜಾಲದ ಹಿಂದಿರುವ ಪ್ರಮುಖ ರೂವಾರಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಹುಬ್ಬಳ್ಳಿ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ನಗರದಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
Hubballi Parijatha Lodge prostitution Case CCB raid



